ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಕೆಶಿ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿ‌ದ ಕಲಬುರಗಿ ಮಿನಿ ವಿಧಾನಸೌಧ, ಜಗತ್ ವೃತ್ತ

Kalaburagi News: ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಸರ್ಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಮಿನಿ ವಿಧಾನ ಸೌಧ ಕಟ್ಟಡ ಮತ್ತು ಜಗತ್ ವೃತ್ತಗಳು‌ ಗುರುವಾರ ಸಂಜೆ ಹಳದಿ, ಕೆಂಪು ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದವು.

ಕಲಬುರಗಿ, ಸೆ.10: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (CM DK Shivakumar) ನೇತೃತ್ವದ ರಾಜ್ಯ ಸರ್ಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ (Kalaburagi News) ಮಿನಿ ವಿಧಾನ ಸೌಧ ಕಟ್ಟಡ ಮತ್ತು ಜಗತ್ ವೃತ್ತಗಳು‌ ಗುರುವಾರ ಸಂಜೆ ಹಳದಿ, ಕೆಂಪು ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದವು.

Kalaburagi News 1

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆಯಿಂದ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು,‌ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಸಂಜೆ ಹೊತ್ತಿನಲ್ಲಿ ಝಗಮಗಿಸುವ ವಿದ್ಯುತ್ ದೀಪದಲ್ಲಿ ಜಿಲ್ಲಾಡಳಿತ ಕಟ್ಟಡ ಮತ್ತು ಜಗತ್ ವೃತ್ತ ನೋಡುಗರ ಗಮನ ಸೆಳೆಯಲಿದೆ.

Kalaburagi news photo

ಬೃಹತ್ ಎಲ್.ಇ.ಡಿ. ಪರದೆ ಅಳವಡಿಕೆ

ಇನ್ನು ಜಗತ್ ವೃತ್ತದಲ್ಲಿ ಎರಡು ಬೃಹತ್ ಎಲ್.ಇ.ಡಿ. ಪರದೆ‌ ಅಳವಡಿಸಿದ್ದು, ಇದರಲ್ಲಿ ಕಳೆದ 100 ದಿನದಲ್ಲಿ ನೂತನ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ನಿಧಿ, ವಿದ್ಯಾರ್ಥಿ ಉಚಿತ ಬಸ್ ಪಾಸ್, ಭೂ ಗ್ಯಾರಂಟಿ, ಭಾರತ ಜೋಡೋ ಸಂಘ ರಚನೆ, ಟೆಲಿ‌ ಮೆಡಿಸಿನ್, ಆರೋಗ್ಯ ಸ್ಪಂದನ, ಅಪರೇಷನ್ ರೈಸ್ ಬೇಡ ಬ್ರೋ ಅಭಿಯಾನ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಶೇ.7.50 ರಷ್ಟು ಮೀಸಲಾತಿ, ಕೃಷಿ ಯಾಂತ್ರಿಕರಣ‌ ಸೇವೆ ಪಡೆಯುವ‌ ರೈತರಿಗೆ ಸಬ್ಸಿಡಿ, ಪ್ರಜಾ ಸೇವೆ ಅಭಿಯಾನ, ಬೆಂಗಳೂರುದಾಚೆ ಟೈರ್ -2 ಮತ್ತು ಟೈರ್-3 ನಗರಗಳಲ್ಲಿ ಆರ್ಥಿಕ ಬೆಳವಣಿಗೆಗೆ ಲೀಪ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.