ಕಲಬುರಗಿ(ಆಳಂದ), ಮಾ.25: ಪಟ್ಟಣದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ (LPG crisis) ತೀವ್ರಗೊಂಡ ಹಿನ್ನೆಲೆ ಗ್ರಾಹಕರು ಸಿಲಿಂಡರ್ ಖರೀದಿಗೆ ಮುಗಿಬೀಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಪಟ್ಟಣದ ಸೋನಾ ಗ್ಯಾಸ್ ಏಜೆನ್ಸಿಯ ಗೋದಾಮಿನಿಂದ ಸುಮಾರು 2 ಕಿಮೀ ದೂರವರೆಗೆ ನೂರಾರು ಗ್ರಾಹಕರು ಸಂಜೆ 6 ಗಂಟೆಯಿಂದಲೇ ಸಾಲುಗಟ್ಟಿ ನಿಂತು ಸಿಲಿಂಡರ್ ಖರೀದಿಸಿದರು.
ಗ್ರಾಮೀಣ ಭಾಗದ ಜನರೂ ಕೂಡ ಪಟ್ಟಣಕ್ಕೆ ಬಂದು ಸಿಲಿಂಡರ್ ಪಡೆಯಲು ಹರಸಾಹಸ ಪಟ್ಟರು. ನೆಟ್‌ವರ್ಕ್ ಸಮಸ್ಯೆಯಿಂದ ತಕ್ಷಣ ಬುಕ್ಕಿಂಗ್ ಸಾಧ್ಯವಾಗದೇ ಇರುವುದರಿಂದ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಗೃಹಬಳಕೆಯ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಹೆಚ್ಚಿದ ಹಿನ್ನೆಲೆ ಬೇಡಿಕೆ ಏರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಾಲೂಕು ಆಡಳಿತ ಈ ಸಮಸ್ಯೆ ಕುರಿತು ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪಟ್ಟಣದಲ್ಲಿ ಮಾತ್ರ ಗ್ಯಾಸ್ ಸಮಸ್ಯೆ ಇದೆ. ಗ್ರಾಮೀಣ ಭಾಗದಲ್ಲಿ ಯಾವುದೇ ತೊಂದರೆ ಇಲ್ಲ. ಸೋನಾ ಗ್ಯಾಸ್ ಏಜೆನ್ಸಿಯ ತಾಂತ್ರಿಕ ಸಮಸ್ಯೆಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆ ಶೀಘ್ರ ಪರಿಹಾರವಾಗಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
LPG Crisis: 12 ದಿನದ ಸಂಕಷ್ಟಕ್ಕೆ ಪರಿಹಾರ, ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಲಿದೆ ಎಲ್‌ಪಿಜಿ ಪೂರೈಕೆ