Kalaburgi News: ಕಲಬುರ್ಗಿಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಬಲಿ; ಕುಟುಂಸ್ಥರ ಆಕ್ರೋಶ
ರಾಜ್ಯದಲ್ಲಿ ಈ ಹಿಂದೆ ಬಳ್ಳಾರಿ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಕಲಬುರ್ಗಿಯಲ್ಲಿ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.


ಕಲಬುರ್ಗಿ: ರಾಜ್ಯದಲ್ಲಿ ಈ ಹಿಂದೆ ಬಳ್ಳಾರಿ ಬೆಳಗಾವಿ ಸೇರಿದಂತೆ ಹಲವು (Kalaburgi News) ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಕಲಬುರ್ಗಿಯಲ್ಲಿ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಕಲಬುರ್ಗಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶ್ರೀದೇವಿ (22) ಎನ್ನುವ ಮಹಿಳೆ ಸಾವನಪ್ಪಿದ್ದಾರೆ. ಕಲಬುರ್ಗಿ ಜಿಲ್ಲೆಯ ತಾಲೂಕಿನ ನರಿಬೋಳ ಗ್ರಾಮದ ನಿವಾಸಿಯಾಗಿರುವ ಶ್ರೀದೇವಿ ಅವರು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾಳೆ ಎಂದು ಶ್ರೀದೇವಿ ಪೋಷಕರು ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಶ್ರೀದೇವಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ ರಕ್ತದೊತ್ತಡ ಕಡಿಮೆ ಆಗಿತ್ತು. ವೈದ್ಯರು ಬಂದು ತಪಾಸಣೆ ನಡೆಸಿದ್ದರು. ತಪಾಸಣೆಗೆ ಖಾಸಗಿ ಲ್ಯಾಬ್ ಗೆ ಜಿಮ್ಸ್ ವೈದ್ಯರು ಚೀಟಿ ಬರೆದು ಕೊಟ್ಟಿದ್ದರು. ಈ ವೇಳೆ ಶ್ರೀದೇವಿ ಸಂಬಂಧಿಕರಿಂದ 5600 ಪಡೆದ ಖಾಸಗಿ ಲ್ಯಾಬ್ ಸಿಬ್ಬಂದಿ, ಬಳಿಕ ವೈದ್ಯರು ಮತ್ತೆ 5600 ಪಡೆದಿದ್ದಾರೆ. ಫೋನ್ ಪೇ ಮೂಲಕ ವೈದ್ಯರು ಹಾಗೂ ಖಾಸಗಿ ಲ್ಯಾಬ್ ನವರು ಎರಡು ಬಾರಿ ಹಣ ಪಡೆದಿದ್ದಾರೆ ಕಲಬುರ್ಗಿಯಲ್ಲಿ ದೊಡ್ಡ ಆಸ್ಪತ್ರೆ ಇದ್ದರೂ ರಕ್ತ ತಪಾಸಣೆ ಯಂತ್ರವಿಲ್ಲ. ಪ್ರತಿ ಬಾರಿ ರಕ್ತ ತಪಾಸಣೆಗೆ ವೈದ್ಯರು ಖಾಸಗಿ ಲ್ಯಾಬ್ ಗೆ ಬರೆದುಕೊಡುತ್ತಾರೆ ಎಂದು ಹೇಳಲಾಗಿದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಶ್ರೀದೇವಿ ಬದುಕುತ್ತಿದ್ದಳು ಎಂದು ಶ್ರೀದೇವಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Robin Kaye: ಅಮೆರಿಕನ್ ಐಡಲ್ ರಿಯಾಲಿಟ್ ಶೋ ಖ್ಯಾತಿಯ ರಾಬಿನ್ ಕೇಯ್ ದಂಪತಿ ನಿಗೂಢ ಸಾವು-ಕೊಲೆ ಶಂಕೆ!
ವೃದ್ಧೆ ಮೇಲೆ ಹಲ್ಲೆ
ಮಾಡಬೂಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವೃದ್ಧೆಯ ಮೇಲೆ ಕಬ್ಬಿಣದ ರಾಡ್‌ನಿಂದ ತೀವ್ರ ಹಲ್ಲೆ ನಡೆಸಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ, ಬಂಗಾರದ ಆಭರಣಗಳು, 5,500 ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಠಶಿರೂರ ಗ್ರಾಮದ ತಾನಾಜಿ ಮಾನಪ್ಪ ಬಂಡಗಾರ(25), ಅದೇ ಗ್ರಾಮದ ನಿವಾಸಿಗಳಾದ ವಿಜಯಕುಮಾರ್ ರೇವಣಸಿದ್ದಪ್ಪ ಕರೆಗೋಳ(23), ಸಂಜೀವ್ ಕುಮಾರ್ ಹನುಮಂತರಾಯ ಕರೆಗೋಳ(25), 17 ವರ್ಷದ ಬಾಲಕ ಹಾಗೂ ಅಲ್ದಿಹಾಳ ಗ್ರಾಮದ ಲಕ್ಷ್ಮಣ ಲಕ್ಷ್ಮೀಕಾಂತ್ ತಳವಾರ(24) ಬಂಧಿತ ಆರೋಪಿಗಳಾಗಿದ್ದಾರೆ.