ಬೆಂಗಳೂರು. ಏ.26 : ಕಾಡಾನೆ ದಾಳಿಗೆ (Elephant Attack) ರೈತರೊಬ್ಬರು ಬಲಿಯಾಗಿರುವ (farmer death) ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಚೀಲಂದವಾಡಿಯಲ್ಲಿ ಘಟನೆ ನಡೆದಿದೆ. ರೈತ ಕರಿಗುಂಡ (55) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಚೀಲಂದವಾಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ.
ಸಂಗಮ ಅರಣ್ಯ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿ ದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಘಟನಾ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಸಂಗಮ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ, ಮುತ್ತತ್ತಿ ಬಳಿ ಕಾವೇರಿ ನೀರಿನಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆಯೊಂದು ದಾಳಿ ಮಾಡಿತ್ತು. ಮಹಿಳೆಯೊಬ್ಬರಿಗೆ ಗಾಯವಾಗಿತ್ತು. ಪ್ರವಾಸಿ ತಾಣದಲ್ಲಿ ಕಾಡಾನೆ ಕಾಟದಿಂದ ಪ್ರವಾಸಿಗರು ಭೀತಿಗೊಂಡಿದ್ದಾರೆ.
Elephant attack: ಪ್ರವಾಸಿ ತಾಣದಲ್ಲಿ ಆನೆ ದಾಳಿ: ಮೇಕೆದಾಟು ಬಳಿ ನುಗ್ಗಿಬಂದ ಕಾಡಾನೆ, ಮಹಿಳೆಗೆ ಗಾಯ
ಸಾಂಬಾರ್ ಮಾಡಿಲ್ಲ ಎಂದು ಅಪ್ಪ ಬೈದಿದ್ದಕ್ಕೆ ಮಗಳು ಆತ್ಮಹತ್ಯೆ
ಚಿಕ್ಕಮಗಳೂರು: ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ (22) ಮೃತ ದುರ್ದೈವಿ.
ಶನಿವಾರ ಬೆಳಗ್ಗೆ ತರಕಾರಿ ತಂದುಕೊಟ್ಟು ಸಾಂಬಾರ್ ಮಾಡುವಂತೆ ಯುವತಿಗೆ ಅಪ್ಪ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಮಗಳು ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಸಾಂಬಾರ್ ಏಕೆ ಮಾಡಿಲ್ಲ ಎಂದು ಅಪ್ಪ ಬೈದಿದ್ದಾರೆ. ಮಗಳಿಗೆ ಬೈದ ಅಪ್ಪ ಸಾಂಬಾರ್ ತರಲು ಪಕ್ಕದ ಮನೆಗೆ ಹೋಗಿದ್ದರು. ಅಪ್ಪ ಬರುವಷ್ಟರಲ್ಲಿ ಸೌಜನ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಗೋಣಿಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.