ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

11 ಜಿಲ್ಲೆಗಳಲ್ಲಿ 12 ಕಡೆ ಹೊಸ ಪೊಲೀಸ್‌ ಠಾಣೆ ಆರಂಭ: ಸಿಎಂ

ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹೊಸ ಪೊಲೀಸ್‌ ಠಾಣೆ ಆರಂಭ ಮಾಹಿತಿ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಎರಡು ಸೇರಿದಂತೆ 12 ಜಿಲ್ಲೆಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಈ ಪೊಲೀಸ್‌ ಠಾಣೆಗಳು ನಿರ್ಮಾಣವಾಗಲಿವೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕ್ರಮ ಎಂದು ತಿಳಿಸಲಾಗಿದೆ.

‌ಕರ್ನಾಟಕ ಬಜೆಟ್

ಬೆಂಗಳೂರು, ಮಾರ್ಚ್‌ 06: ಕರ್ನಾಟಕದ 11 ಜಿಲ್ಲೆಗಳಲ್ಲಿ ಹೊಸದಾಗಿ ಪೊಲೀಸ್‌ ಠಾಣೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 2 ಕಡೆ ಹೊಸ ಠಾಣೆ ಬರಲಿದ್ದು, ಉಳಿದಂತೆ ದಾವಣಗೆರೆ, ಕೋಲಾರ ಸೇರಿ 11 ಜಿಲ್ಲೆಯ ವಿವಿಧೆಡೆ ಹೊಸ ಠಾಣೆ ತಲೆ ಎತ್ತಲಿವೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹೊಸ ಪೊಲೀಸ್‌ ಠಾಣೆ ಆರಂಭ ಮಾಹಿತಿ ನೀಡಲಾಗಿದೆ. 12 ಜಿಲ್ಲೆಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಈ ಪೊಲೀಸ್‌ ಠಾಣೆಗಳು ನಿರ್ಮಾಣವಾಗಲಿವೆ.

ಹೊಸ ಠಾಣೆಗಳು ಹೀಗಿವೆ:

ದಕ್ಷಿಣ ಕನ್ನಡದಲ್ಲಿ ಮಾಣಿ ಹಾಗೂ ಸಜಿಪನಡು. ಬೆಂಗಳೂರು ಗ್ರಾಮಾಂತರದಲ್ಲಿ ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ. ಬೆಳಗಾವಿಯಲ್ಲಿ ಯರಗಟ್ಟಿ, ಯಾದಗಿರಿಯಲ್ಲಿ ಕಕ್ಕೇರಾ, ಚಿತ್ರದುರ್ಗದಲ್ಲಿ ಹಿರಿಯೂರು ಸಂಚಾರ ಪೊಲೀಸ್ ಠಾಣೆ, ದಾವಣಗೆರೆಯಲ್ಲಿ ಆನಗೋಡು, ಹಾವೇರಿಯಲ್ಲಿ ತಿಳುವಳ್ಳಿ, ಮೈಸೂರಿನಲ್ಲಿ ಉದಯಗಿರಿ ದಕ್ಷಿಣ, ವಿಜಯಪುರದಲ್ಲಿ ಮುದ್ದೇಬಿಹಾಳ ಗ್ರಾಮಾಂತರ, ಕೋಲಾರದಲ್ಲಿ ನರಸಾಪುರ ಕೈಗಾರಿಕಾ ವಲಯ, ಚಾಮರಾಜನಗರದಲ್ಲಿ ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆಗಳು ಬರಲಿವೆ.

ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ, ಪ್ರಗತಿಶೀಲ ರಾಜ್ಯದ ತೆರಿಗೆ ಹಣಕ್ಕೆ ಪ್ರಮುಖ ದೃಷ್ಟಿಯಾದ ನಾನು ಸರ್ವರ ಏಳಿಗೆ ಬಯಸಿ ಆಯವ್ಯಯ ಬಜೆಟ್ ಮಂಡಿಸುತ್ತಿದ್ದೇನೆ. 6 ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ನಾವು ಅರಿತಿದ್ದೇವೆ. ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ರೈತರ ದಮನಿತರ ಕಾರ್ಮಿಕರ ಮಹಿಳೆಯರ ಅಶಕ್ತರ ಅಲ್ಪಸಂಖ್ಯಾತರ ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳಿಗೆ ಒದಗಿಕೊಂಡರುವ ಕನಸು ಮತ್ತು ವಿಶ್ವಾಸವನ್ನು ಪ್ರತಿನಿಧಿಸುವ ಜೀವಂತ ದಾಖಲೆಯಾಗಿದೆ ಎಂದು ತಿಳಿಸಿದರು.

ಹರೀಶ್‌ ಕೇರ

View all posts by this author