ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Weather: ಬಿಸಿಲಿನ ನಡುವೆ ಮಳೆಯ ಅಬ್ಬರ, ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್‌

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ (Hot and Humid) ತುಂಬಾ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯ ಸಾಧ್ಯತೆ ಹೆಚ್ಚಿದೆ. ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಆಕಾಶ ಭಾಗಶಃ ಮೋಡ ಕವಿದಿರುತ್ತದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಏ.11: ಬೇಸಿಗೆಯ (summer) ಬಿಸಿಲಿನ (sunlight) ನಡುವೆಯೂ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯ (rain) ಅಬ್ಬರ ಶುರುವಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ (bengaluru) ಇತ್ತೀಚೆಗೆ ವರುಣನ ಕೃಪೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ (IMD) ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಳೆಯ (Karnataka Weather forecast) ಸಾಧ್ಯತೆ ಇದೆ. ಏಪ್ರಿಲ್ 10ರಿಂದ 12ರವರೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಎಲ್ಲಾ ಜಿಲ್ಲೆಗಳಲ್ಲೂ ಒಂದೇ ರೀತಿಯಲ್ಲಿಲ್ಲ. ಕೆಲವು ಕಡೆ ಬಿಸಿ ಮತ್ತು ಆರ್ದ್ರತೆ ಹೆಚ್ಚಾಗುತ್ತಿದೆ, ಇನ್ನು ಕೆಲವು ಕಡೆ ಒಣ ಹವಾಮಾನವೇ ಮುಂದುವರಿಯುತ್ತದೆ. ಹೀಗಾಗಿ ಯಾವ ಯಾವ ಜಿಲ್ಲೆಗಳಲ್ಲಿ ವಾತಾವರಣ ಹೇಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ (Hot and Humid) ತುಂಬಾ ಹೆಚ್ಚಾಗಲಿದೆ. ಹವಾಮಾನ ಸಾಮಾನ್ಯವಾಗಿ ಒಣಗಿದ್ದರೂ ಸೆಖೆಯ ಅನುಭವ ಹೆಚ್ಚಾಗುತ್ತದೆ. ಜನರು ಬಿಸಿಲು ಮತ್ತು ಆರ್ದ್ರತೆಯಿಂದ ತುಂಬಾ ಅಸ್ವಸ್ಥರಾಗುವ ಸಾಧ್ಯತೆ ಇದೆ. ಹೀಗಾಗಿ ಈ ಮೂರು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಜಾಗರೂಕತೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯ ಸಾಧ್ಯತೆ ಹೆಚ್ಚಿದೆ. ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಆಕಾಶ ಭಾಗಶಃ ಮೋಡ ಕವಿದಿರುತ್ತದೆ. ವಿಶೇಷವಾಗಿ ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಹಗಲಿನ ವೇಳೆ ಬಿಸಿಲು ತೀವ್ರವಾಗಿರುತ್ತದೆ. ಸಂಜೆಗೆ ಮೋಡಗಳು ಹೆಚ್ಚಾಗಿ, ಹಗುರ ಮಳೆಯ ಸಾಧ್ಯತೆ ಕಂಡುಬರುತ್ತದೆ. ನಗರದ ಗರಿಷ್ಠ ಉಷ್ಣಾಂಶ ಸುಮಾರು 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 6 ರಿಂದ 13 ಕಿಲೋಮೀಟರ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Hot weather: ಬಿಸಿಲ ತಾಪ: 9 ಜಿಲ್ಲೆಗಳ ಕಚೇರಿ ಸಮಯ ಬದಲಾವಣೆ, ಮಧ್ಯಾಹ್ನ 1.30ವರೆಗೂ ಮಾತ್ರ ಕೆಲಸ

ಉತ್ತರ ಒಳನಾಡು ಭಾಗದಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವಾಮಾನವೇ ನಿರೀಕ್ಷಿಸಲಾಗಿದೆ. ಇಲ್ಲಿ ತಾಪಮಾನದಲ್ಲಿ ಏರಿಕೆ ಕಂಡುಬರುತ್ತದೆ. ಬಿಸಿಲು ತೀವ್ರವಾಗಿರುತ್ತದೆ. ಜನರು ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಸಲಹೆ ನೀಡಲಾಗಿದೆ. ಕೃಷಿ ಕೆಲಸ ಮಾಡುವವರು ಮತ್ತು ಹೊರಾಂಗಣ ಕೆಲಸಗಾರರು ವಿಶೇಷ ಎಚ್ಚರಿಕೆ ವಹಿಸಬೇಕು.

ರಾಜ್ಯದ ಇತರ ಭಾಗಗಳಲ್ಲಿ ಮುಂದಿನ ಕೆಲವು ದಿನಗಳ ಮಳೆ ಮುನ್ಸೂಚನೆ ಹೀಗಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಹಗುರದಿಂದ ಮಧ್ಯಮ ಮಳೆಯ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಬಿಸಿ ಮತ್ತು ಆರ್ದ್ರತೆಯಿಂದಾಗಿ ಅಸ್ವಸ್ಥತೆ ಹೆಚ್ಚಾಗುತ್ತದೆ. ಉತ್ತರ ಒಳನಾಡಿನಲ್ಲಿ ಒಣ ಹವಾಮಾನ ಮುಂದುವರಿಯುತ್ತದೆ. ಏಪ್ರಿಲ್ 10 ರಿಂದ 12ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರುವುದರಿಂದ ಜನರು ಹೆಚ್ಚು ಎಚ್ಚರದಿಂದಿರುವುದು ಉತ್ತಮ.

Karnataka weather: ಈ ವರ್ಷ ಬೆನ್ನು ಸುಡಲಿದೆ ಬಿಸಿಲಿನ ಬೇಗೆ, ಐಎಂಡಿ ಎಚ್ಚರಿಕೆ

ಬೆಂಗಳೂರಿನಲ್ಲಿ ಇಂದು ಹಗಲು ಬಿಸಿಲು ತೀವ್ರವಾಗಿರುತ್ತದೆ. ಸಂಜೆಗೆ ಮೋಡ ಕವಿಯುವ ಸಾಧ್ಯತೆ ಹೆಚ್ಚಿದೆ. ಕೆಲವು ಕಡೆ ಹಗುರ ಮಳೆಯಾಗಬಹುದು. ನಗರದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ ಮೋಡಗಳು ಬಂದರೆ ಸ್ವಲ್ಪ ತಂಪು ಅನುಭವವಾಗಬಹುದು. ಗಾಳಿ ಸೌಮ್ಯವಾಗಿರುತ್ತದೆ.

ಕೃಷಿ, ಪ್ರಯಾಣ ಮತ್ತು ದೈನಂದಿನ ಕೆಲಸಗಳನ್ನು ಯೋಜಿಸುವಾಗ ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ. ಬೆಂಗಳೂರಿನಂತಹ ನಗರಗಳಲ್ಲಿ ಸಂಜೆ ಮಳೆಯ ಸಾಧ್ಯತೆ ಇರುವುದರಿಂದ ಜನರು ಆ ಸಮಯದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಬಿಸಿಲು ತೀವ್ರವಾದಾಗ ನೀರು ಹೆಚ್ಚು ಕುಡಿಯಿರಿ, ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಹೊರಗೆ ಕೆಲಸ ಮಾಡಿ. ಮಳೆ ಬಂದಾಗ ಗುಡುಗು ಸಹಿತವಾಗಿದ್ದರೆ ಮರಗಳ ಕೆಳಗೆ ನಿಲ್ಲದಿರಿ, ವಿದ್ಯುತ್ ಸಾಧನಗಳನ್ನು ಅನ್‌ಪ್ಲಗ್ ಮಾಡಿ.

ಹರೀಶ್‌ ಕೇರ

View all posts by this author