ನವದೆಹಲಿ: ಕನ್ನಡದ ಹಿರಿಯ ಸಾಹಿತಿ ಅಮರೇಶ ನುಗಡೋಣಿ (Amaresh Nugadoni) ಅವರ 'ದಡ ಸೇರಿಸು ತಂದೆ' ಕಥಾ ಸಂಕಲನಕ್ಕೆ 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (Sahitya Akademi award) ದೊರೆತಿದೆ. ಇವರು ಅವರು ಬಹುಮುಖಿ ಬರಹಗಾರರಾಗಿ ಮತ್ತು ಚಿಂತಕರಾಗಿ ಖ್ಯಾತರಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯು 1,00,000 ನಗದು ಬಹುಮಾನ, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
2025ರ ಸಾಲಿನ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ 2025 ಜನವರಿ 30ರಂದು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಜಯಲಲಿತ ಮತ್ತು ಸಹನಾ ಕಾಂತಬೈಲು ಅವರು ಆಯ್ಕೆ ಸಮಿತಿಯು, ಅಮರೇಶ ನುಗಡೋಣಿ ಅವರ 'ದಡ ಸೇರಿಸು ತಂದೆ' ಕಥಾ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅಮರೇಶ ನುಗಡೋಣಿ ಅವರ ಪರಿಚಯ
ಅಮರೇಶ ನುಗಡೋಣಿ ಅವರು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ನುಗಡೋಣಿ ಎಂಬಲ್ಲಿ 1969ರ ಜೂನ್ 2ರಂದು ಜನಿಸಿದರು. ಎಂ.ಎ. ಮತ್ತು ಪಿಎಚ್.ಡಿ ಗಳಿಸಿರುವ ಇವರು ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪ್ರಸಿದ್ಧ ಚಿತ್ರ 'ಕನಸೆಂಬೋ ಕುದುರೆಯನೇರಿ' ಅಮರೇಶ ನುಗಡೋಣಿ ಅವರ 'ಸವಾರಿ' ಕತೆಯನ್ನಾಧರಿಸಿದೆ. ಇದಲ್ಲದೆ ಇತರ ಚಲನಚಿತ್ರ ಮತ್ತು ರಂಗನಿರ್ದೇಶಕರು ಇವರ ಕತೆಯಾಧರಿಸಿ ಪ್ರಸಿದ್ಧ ಚಲನಚಿತ್ರ ಮತ್ತು ರಂಗರೂಪಕಗಳನ್ನು ನಿರ್ಮಿಸಿ ಪ್ರದರ್ಶಿಸಿದ್ದಾರೆ.
ಅಮರೇಶ ನುಗಡೋಣಿ ಅವರ ಕೃತಿಗಳು:
ಕಥಾಸಂಕಲನಗಳು:
- ಮಣ್ಣು ಸೇರಿತು ಬೀಜ
- ತಮಂಧದ ಕೇಡು
- ಸವಾರಿ
- ಒಡಲ ಹಂಗು
- ಚುಕ್ಕಿ ಮದುವೆ ಪ್ರಸಂಗ
- ಬುತ್ತಿ (ಬಾಲ್ಯದ ಅನುಭವ ಕಥನಗಳು),
- ದಡ ಸೇರಿಸು ತಂದೆ
ಕಾದಂಬರಿಗಳು:
- ದಂದುಗ
- ಗೌರಿಯರು
ವಿಮರ್ಶೆ ಮತ್ತು ಸಂಶೋಧನೆಗಳು:
- ಅರಿವು ನವಸಾಕ್ಷರಿಗಾಗಿ (ಕಥೆಗಳು)
- ಶ್ರೀಕೃಷ್ಣ ಆಲನಹಳ್ಳಿ (ವಿಮರ್ಶೆ)
- ನುಡಿವ ಬೆಡಗು (ತತ್ವಪದ ಸಾಂಸ್ಕೃತಿಕ ಅಧ್ಯಯನ)
- ರಾಯಚೂರು ಜಿಲ್ಲೆಯಲ್ಲಿ ಹೈದ್ರಾಬಾದು ಕರ್ನಾಟಕ ವವಿಮೋಚನಾ ಚಳುವಳಿ
- ಹೈದ್ರಾಬಾದು ಕರ್ನಾಟಕ ಹಾಡುಪಾಡು,
- ನುಡಿವ ಪಾಡು (ವಿಮರ್ಶೆ),.
- ನುಡಿ ದಂದುಗ (ಸಾಹಿತ್ಯ ಅಧ್ಯಯನ)
- ತತ್ವಪದ ಸಾಹಿತ್ಯ ಅಧ್ಯಯನ,
- ಸಣ್ಣಕಥೆ : ಸಾಮಾಜಿಕ ವಾಸ್ತವ
- ಜೇಡರ ದಾಸಿಮಯ್ಯ (ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆ).
- ವಚನಗಳ ಅನುಸಂಧಾನ
- ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ
ಇದನ್ನೂ ಓದಿ : ಕನ್ನಡ ಸಾಹಿತ್ಯ: ಶ್ರೀಸಾಮಾನ್ಯ ಮತ್ತು ಗುಂಪುಗಾರಿಕೆ
ಅಮರೇಶ ನುಗಡೋಣಿ ಅವರ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲ್ಲದೆ, ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳು, ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗುಲ್ಬರ್ಗ ರಾಜ್ಯೋತ್ಸವ ಪ್ರಶಸ್ತಿ (ಪುಸ್ತಕ ಬಹುಮಾನ), ಸರ್.ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಶಿವಾನಂದ ಪಾಟೀಲ್ ಪ್ರಶಸ್ತಿ,ಗೋರೂರು ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಉಗ್ರಾಣ ಸಾಹಿತ್ಯ ಪ್ರಶಸ್ತಿ (ಪುತ್ತೂರು), ಕುಂ. ವೀರಭದ್ರಪ್ಪ ಕಥಾಸಾಹಿತ್ಯ ಪ್ರಶಸ್ತಿ, ಚದುರಂಗ ಸಾಹಿತ್ಯ ಪ್ರಶಸ್ತಿ, ಮಾಸ್ತಿ ಕಥಾಪುರಸ್ಕಾರ, ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ,. ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ರಮಣಶ್ರೀ ಶರಣ ಪ್ರಶಸ್ತಿ, 'ನೀರು ತಂದವರು' ಚಲನಚಿತ್ರಕ್ಕೆ ಅತ್ಯುತ್ತಮ ಕತೆಗಾಗಿ ರಾಜ್ಯ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಕಥಾಸಾಹಿತ್ಯ ಪ್ರಶಸ್ತಿ. ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.