ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dubare Elephant Camp: ಕೊಡಗಿನ ದುಬಾರೆಯಲ್ಲಿ ಘೋರ ಘಟನೆ; ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮಹಿಳೆ ಸಾವು!, Video

ಕೊಡಗಿನ ದುಬಾರೆಯ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತಿತ್ತು. ಈ ವೇಳೆ 'ಕಂಜನ್' ಎಂಬ ಆನೆಯು ಮತ್ತೊಂದು ಆನೆಯಾದ 'ಮಾರ್ತಾಂಡ'ನಿಗೆ ಜೋರಾಗಿ ತಿವಿದಿದೆ. ಆನೆಗಳ ನಡುವೆ ಇದ್ದಕ್ಕಿದ್ದಂತೆ ಕಾದಾಟ ಶುರುವಾಗಿದ್ದು, ಈ ವೇಳೆ ಆನೆಯಡಿ ಸಿಲುಕಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಮೃತಪಟ್ಟಿದ್ದಾರೆ.

ಕೊಡಗಿನ ದುಬಾರೆ ಆನೆ ಶಿಬಿರಲ್ಲಿ ಸಾಕಾನೆಗಳ ನಡುವೆ ಕಾಳಗ.

ಕೊಡಗು: ಪ್ರವಾಸಿ ತಾಣವಾದ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಘೋರ ಘಟನೆ ಸಂಭವಿಸಿದೆ. ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ವೇಳೆ ಎರಡು ಸಾಕಾನೆಗಳ ನಡುವೆ ನಡೆದ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಆನೆಯಡಿ ಸಿಲುಕಿ ಮೃತಪಟ್ಟಿದ್ದಾರೆ.

ಮೃತ ಮಹಿಳೆಯನ್ನು ತಮಿಳುನಾಡಿನ ಚೆನ್ನೈ ಮೂಲದ ಜ್ಯುನೇಶ್ (33) ಎಂದು ಗುರುತಿಸಲಾಗಿದೆ. ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕೊಡಗಿಗೆ ಪ್ರವಾಸ ಬಂದಿದ್ದ ಇವರು, ದುಬಾರೆ ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು.

ದುಬಾರೆಯ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತಿತ್ತು. ಈ ವೇಳೆ 'ಕಂಜನ್' ಎಂಬ ಆನೆಯು ಮತ್ತೊಂದು ಆನೆಯಾದ 'ಮಾರ್ತಾಂಡ'ನಿಗೆ ಜೋರಾಗಿ ತಿವಿದಿದೆ. ಆನೆಗಳ ನಡುವೆ ಇದ್ದಕ್ಕಿದ್ದಂತೆ ಕಾದಾಟ ಶುರುವಾದ ಕಾರಣ ಸುತ್ತಮುತ್ತಲಿದ್ದವರು ಆತಂಕಗೊಂಡಿದ್ದಾರೆ. ಈ ಕಾದಾಟದ ವೇಳೆ ಆನೆಯೊಂದು ಹತೋಟಿ ತಪ್ಪಿ ಪ್ರವಾಸಿ ಮಹಿಳೆ ಜ್ಯುನೇಶ್ ಅವರ ಮೇಲೆ ಬಿದ್ದಿದೆ. ಬೃಹತ್ ಗಾತ್ರದ ಆನೆಯ ಭಾರಕ್ಕೆ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.



ಸಂಬಂಧಿಕರ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದು, ಶವ ಹೂತು ಹಾಕಿದ ಪಾಪಿ ತಂದೆ!

ಆನೆಗಳ ಸ್ನಾನ ಮಾಡಿಸುವ ದೃಶ್ಯವನ್ನು ನೋಡಲು ನೂರಾರು ಪ್ರವಾಸಿಗರು ನದಿಯ ದಡದಲ್ಲಿ ಸೇರಿದ್ದರು. ಕಣ್ಮುಂದೆಯೇ ನಡೆದ ಈ ಅನಾಹುತ ಕಂಡು ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದಾರೆ. ಆನೆ ಶಿಬಿರದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.