ಕೋಲಾರ: ವಿಶ್ವದ ಪ್ರಮುಖ ನಿರ್ಮಾಣ ಉಪಕರಣಗಳ ತಯಾರಿಕಾ ಸಂಸ್ಥೆಯಾದ ಜೆಸಿಬಿ ತನ್ನ ಅಧಿಕೃತ ಡೀಲರ್ ಟ್ರೈಡೆಂಟ್ ಜೆಸಿಬಿ ಸಹಯೋಗದೊಂದಿಗೆ ಕೋಲಾರದಲ್ಲಿ ಹೊಸ ಅತ್ಯಾಧುನಿಕ ಶೋರೂಮ್ (Trident JCB) ಆರಂಭಿಸಿದೆ. ಈ ಮೂಲಕ ಬೆಂಗಳೂರಿನಿಂದ ದೂರವಿರುವ ಗ್ರಾಹಕರಿಗೆ ಸ್ಥಳೀಯವಾಗಿಯೇ ಉತ್ತಮ ಸೇವೆ ನೀಡಲು ಸಂಸ್ಥೆ ಮುಂದಾಗಿದೆ.
ಜೆಸಿಬಿ ಸಂಸ್ಥೆಯು ಗ್ರಾಮೀಣ ಭಾಗದ ಗ್ರಾಹಕರಿಗೆ ಹತ್ತಿರವಾಗಲು ನಿರ್ಧಾರ ಕೈಗೊಂಡಿದ್ದು ಕೋಲಾರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಹಕರಿಗೆ ಇನ್ನು ಮುಂದೆ ಹೊಸ ಜೆಸಿಬಿ ಯಂತ್ರಗಳು, ಬಿಡಿಭಾಗಗಳು ಮತ್ತು ತಾಂತ್ರಿಕ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ. ಹೊಸ ಕೇಂದ್ರವು ಕೇವಲ ಮಾರಾಟ ಹಾಗೂ ಸರ್ವಿಸ್ ಘಟಕವಲ್ಲದೆ, ಲರ್ನಿಂಗ್ ಸೆಂಟರ್, ಎಂಜಿನ್ ರೂಮ್ ಮತ್ತು ವರ್ಕ್‌ಶಾಪ್ ಹೊಂದಿದೆ. ನುರಿತ ಎಂಜಿನಿಯರ್‌ಗಳು ಗ್ರಾಹಕರ ಯಂತ್ರಗಳ ನಿರ್ವಹಣೆಗೆ ಸದಾ ಲಭ್ಯವಿರುತ್ತಾರೆ.
ಜೆಸಿಬಿ ಯಂತ್ರಗಳಲ್ಲಿನ ಅತ್ಯಾಧುನಿಕ ಲೈವ್‌ಲಿಂಕ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಪ್ರತಿನಿಧಿಗಳು, ಈ ಸೌಲಭ್ಯದ ಮೂಲಕ ಯಂತ್ರದ ಸ್ಥಳ, ಇಂಧನ ದಕ್ಷತೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮೊಬೈಲ್ ಮೂಲಕವೇ ತಿಳಿಯಬಹುದು ಎಂದು ವಿವರಿಸಿದರು. ಕೋಲಾರ ಜಿಲ್ಲೆಯೊಂದರಲ್ಲೇ ಪ್ರಸ್ತುತ 1,052 ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರು ಇನ್ನು ಮುಂದೆ ಅಮೆಜಾನ್‌ನಂತಹ ಆ್ಯಪ್‌ಗಳ ಮೂಲಕವೇ ಜೆಸಿಬಿ ಬಿಡಿಭಾಗಗಳನ್ನು ಆನ್‌ಲೈನ್‌ನಲ್ಲೂ ಆರ್ಡರ್ ಮಾಡಬಹುದು. ಇದು ಗ್ರಾಹಕರಿಗೆ ಸಮಯದ ಉಳಿತಾಯ ಮತ್ತು ಸುಲಭ ಲಭ್ಯತೆಯನ್ನು ಖಚಿತಪಡಿಸುತ್ತದೆ.
ಸಿಮ್ಯುಲೇಟರ್ ಮೂಲಕ ಯಂತ್ರ ಆಪರೇಟರ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರಿಗೆ ಜೆಸಿಬಿ ಮತ್ತು ಎನ್‌ಎಸ್‌ಡಿಸಿಯಿಂದ ಜಂಟಿ ಪ್ರಮಾಣಪತ್ರ ನೀಡಲಾಗುತ್ತಿದ್ದು, ಇದು ಅವರಿಗೆ ವಿದೇಶಗಳಲ್ಲೂ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಈಗಾಗಲೇ ಮಿನಿ ಎಕ್ಸಾವೇಟರ್‌ಗಳಲ್ಲಿ ಎಲೆಕ್ಟ್ರಿಕ್ (ಇವಿ) ಆವೃತ್ತಿಯನ್ನು ಪರಿಚಯಿಸಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸೌಲಭ್ಯದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಡೀಸೆಲ್ ಯಂತ್ರಗಳಲ್ಲಿ ಶೇ. 15.5 ರಷ್ಟು ಹೆಚ್ಚಿನ ಇಂಧನ ದಕ್ಷತೆಯನ್ನು ತರಲಾಗಿದೆ ಎಂದು ಎಂದು ಜೆಸಿಬಿ ಸಂಸ್ಥೆಯ ಎಂಡಿ ದೀಪಕ್ ಶೆಟ್ಟಿ ತಿಳಿಸಿದರು.
ವಂತಾರದಿಂದ ವಿಶ್ವದ ಮೊದಲ ವನ್ಯಜೀವಿ ಮತ್ತು ಪಶುವೈದ್ಯಕೀಯ ವಿಜ್ಞಾನ ಜಾಗತಿಕ ವಿಶ್ವವಿದ್ಯಾಲಯ ಘೋಷಣೆ
ಡಿ.ಚೌದರಿ ಮಾತನಾಡಿ, ಸಂಸ್ಥೆಯು ಕಳೆದ 28 ವರ್ಷಗಳಿಂದ ಗ್ರಾಹಕರ ನಂಬಿಕೆಯನ್ನು ಗಳಿಸಿದೆ. ಕೋಲಾರದಲ್ಲಿನ ಈ ಹೊಸ ಘಟಕವು ಸುಮಾರು 350 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದೆ ಮತ್ತು ಈ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲಿದೆ ಎಂದು ತಿಳಿಸಿದರು.