Shivaraj Tangadagi: 'ಶುಭವಾಗಲಿ' ಬರೆಯಲು ಪರದಾಡಿದ ವಿಡಿಯೊ ಟ್ರೋಲ್; ಸಚಿವ ತಂಗಡಗಿ ಹೇಳಿದ್ದೇನು?
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ʼಶುಭವಾಗಲಿʼ ಎಂದು ಬರೆಯಲು ಪರದಾಡಿದ ವಿಡಿಯೊ ವೈರಲ್ ಆಗಿದೆ. ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ನನ್ನ ಬಗ್ಗೆ ಟೀಕಿಸಲು ಏನು ಸಿಗ್ತಿಲ್ಲ ಎಂದು ಹತಾಶರಾಗಿ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
!['ಶುಭವಾಗಲಿ' ಬರೆಯಲು ಪರದಾಡಿದ ವಿಡಿಯೊ ಟ್ರೋಲ್; ಸಚಿವ ತಂಗಡಗಿ ನೀಡಿದ ಸ್ಪಷ್ಟನೆ ಇದು](https://cdn-vishwavani-prod.hindverse.com/media/original_images/Shivaraj_Tangadagi_DMLtw98.jpg)
ಶಿವರಾಜ ತಂಗಡಗಿ.
![Profile](https://vishwavani.news/static/img/user.png)
ಕೊಪ್ಪಳ: ʼಶುಭವಾಗಲಿʼ ಎಂದು ಬರೆಯಲು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ (Shivaraj Tangadagi) ಪರದಾಡಿದ ವಿಡಿಯೊ ವೈರಲ್ ಆಗಿದೆ. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ ಶಿವರಾಜ ತಂಗಡಗಿ ಅವರು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ (Viral Video). ನನ್ನ ಬಗ್ಗೆ ಟೀಕಿಸಲು ಏನು ಸಿಗ್ತಿಲ್ಲ ಎಂದು ಹತಾಶರಾಗಿ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸುಳೇಕಲ್‌ನಲ್ಲಿ ಅವರು ಮಾತನಾಡಿದ್ದಾರೆ.
''ನಾನು ಬಿಎಸ್ಸಿ ಪದವೀಧರ. ಕನ್ನಡ ಬರೆಯಲಿಕ್ಕೆ ಬಾರದಷ್ಟು ದಡ್ಡ ನಾನಲ್ಲ. ಪೂರ್ತಿ ಬರೆಯೋವರೆಗೆ ಕಾಯೋ ತಾಳ್ಮೆ ಇಲ್ಲದವರು ವಿಡಿಯೊ ಹರಿಯಬಿಟ್ಟಿದ್ದಾರೆ. ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೆ. ಆದರೆ ಅಲ್ಲಿದ್ದವರು ಶುಭವಾಗಲಿ ಅಂತ ಬರೆಯಲು ಹೇಳಿದ್ದರುʼʼ ಎಂದು ಸಚಿವರು ತಿಳಿಸಿದ್ದಾರೆ.
ʼʼಆಗ ಭ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿತ್ತು. ಆದರೆ ಅಕ್ಷರ ಬರೆಯಲಾರದ ಸ್ಥಿತಿಯಲ್ಲಿ ನಾನಿಲ್ಲ. ನನ್ನ ಬಗ್ಗೆ ಮಾತನಾಡುವವರು ತಾಳ್ಮೆ ಪರೀಕ್ಷೆ ಮಾಡಬೇಡಿ. ಕಳೆದ 12 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಾದರೂ ಕನ್ನಡ ತಪ್ಪಾಗಿ ಮಾತನಾಡಿದ್ದೇನಾ? ಯಾವುದಾದರೂ ಹೆಸರನ್ನು ತಪ್ಪಾಗಿ ಹೇಳಿದ್ದೇನಾ? ಸ್ಪಷ್ಟವಾಗಿ ಕನ್ನಡದಲ್ಲಿಯೇ ಭಾಷಣ ಮಾಡುತ್ತೇನೆ. ನನ್ನ ಸಾಮರ್ಥ್ಯವನ್ನು ನೋಡಿ ಮಾತನಾಡಿ. ಕಳೆದ 2 ವರ್ಷ ಇಲಾಖೆ ಹೇಗೆ ನಿಭಾಯಿಸಿದ್ದೇನೆ ಎನ್ನುವುದನ್ನು ನೋಡಿ. ನನ್ನ ಕಾರ್ಯನಿರ್ವಹಣೆ ಬಗ್ಗೆ ಸಾಹಿತಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಬಗ್ಗೆ ಏನು ಸಿಗ್ತಿಲ್ಲ ಅಂತ ಹತಾಶರಾಗಿ ಮಾತಾಡ್ತಿದ್ದಾರೆʼʼ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕಾರಟಗಿ ಜೆ.ಪಿ.ನಗರದ ಅಂಗನವಾಡಿಯಲ್ಲಿ ʼಶುಭವಾಗಲಿʼ ಎಂದು ಬರೆಯಲು ಸಚಿವ ಶಿವರಾಜ ತಂಗಡಗಿ ಒದ್ದಾಡಿದ್ದರು. ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಮಕ್ಕಳ ಎದುರಲ್ಲಿ ಕಪ್ಪುಹಲಗೆ ಮೇಲೆ ʼಶುಭವಾಗಲಿʼ ಎಂದು ಬರೆಯಲು ಹೋಗಿ ತಪ್ಪಾಗಿ ಬರೆದು ಪೇಚಿಗೆ ಸಿಲುಕಿದ್ದರು. ಈ ವಿಡಿಯೊ ವೈರಲ್ ಆಗಿದೆ.
ಶುಭವಾಗಲಿ ಎಂದು ಬರೆಯಲು ಕಷ್ಟಪಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ. #ಕನ್ನಡ #Kannada @BJP4Karnataka pic.twitter.com/tOmkpnJSnF
— Vinayak Mathapati (@Vinayak_Mathapa) February 1, 2025
ಈ ಸುದ್ದಿಯನ್ನೂ ಓದಿ: Shivaraj Tangadagi: 'ಶುಭವಾಗಲಿ' ಬರೆಯಲು ಸಚಿವ ತಂಗಡಗಿ ಪರದಾಟ; ವಿಡಿಯೊ ವೈರಲ್
ಮೊದಲು ಶಬವಾಗಲಿ ಎಂದು ಸಚಿವರು ಬರೆದಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳು, ʼʼಸಾರ್, 'ಶುಭ' ಎಂದಿದ್ದಾರೆ. ಎಚ್ಚೆತ್ತ ಸಚಿವರು, ಕೂಡಲೇ ಸರಿಮಾಡಿಕೊಂಡಿದ್ದಾರೆ. ಈ ಎಲ್ಲ ಪ್ರಹಸನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಸಚಿವರ ನಡೆಯನ್ನು ಟೀಕಿಸುತ್ತಿದ್ದಾರೆ..