3ನೇ ಪತ್ನಿಯನ್ನು ಕೊಂದಿದ್ದ ಪತಿ 23 ವರ್ಷಗಳ ಬಳಿಕ ಅರೆಸ್ಟ್!
Koppal News: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮದ ವ್ಯಕ್ತಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. 2002 ರಲ್ಲಿ ವೈಯಕ್ತಿಕ ಜಗಳಕ್ಕೆ ಪತ್ನಿಯನ್ನು ಕೊಚ್ಚಿ ಕೊಂದಿದ್ದ. ಬಳಿಕ ಗೋಣಿ ಚೀಲದಲ್ಲಿ ಶವ ತುಂಬಿ, ಲಗೇಜ್ ಎಂದು ನಂಬಿಸಿ, ಸರ್ಕಾರಿ ಬಸ್‌ನಲ್ಲಿ ಕಳುಹಿಸಿದ್ದ. ತಲೆಮರೆಸಿಕೊಂಡಿದ್ದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.