ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KRS dam: ವಿಶಿಷ್ಟ ದಾಖಲೆ ಬರೆದ ಕೃಷ್ಣರಾಜಸಾಗರ ಜಲಾಶಯ

Mandya: ಕಳೆದ ಹಲವಾರು ವರ್ಷಗಳಲ್ಲಿ ಸರಿಯಾದ ಅವಧಿಗೆ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗದೇ ಸಾಕಷ್ಟು ಸಮಸ್ಯೆ ನಿರ್ಮಾಣವಾಗ್ತಿತ್ತು. ಅಣೆಕಟ್ಟು ಭರ್ತಿಯಾಗದ ಸಂದರ್ಭಗಳಲ್ಲಿ ತಮಿಳುನಾಡು (Tamilnadu) ನೀರಿಗಾಗಿ ಕ್ಯಾತೆ ತೆಗೆದು ವಿವಾದ ಉಲ್ಬಣಿಸುತ್ತಿತ್ತು. ಈ ವರ್ಷ ಹಾಗೆ ಆಗುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ.

ಮಂಡ್ಯ: ನಾಡಿಗೆ ನೀರುಣಿಸುವ ಮಂಡ್ಯ (Mandya) ಜಿಲ್ಲೆಯ ಕೆಆರ್‌ಎಸ್‌ ಜಲಾಶಯ, ಈ ವರ್ಷ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದೆ. ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಕೃಷ್ಣರಾಜಸಾಗರ ಜಲಾಶಯ (KRS dam) ಭರ್ತಿಯಾಗಿ ದಾಖಲೆ ನಿರ್ಮಿಸಿದೆ. ಈ ವರ್ಷ ಕಾವೇರಮ್ಮ ನಾಡಿನ ಹಾಗೂ ತಮಿಳುನಾಡಿನ ರೈತರ ಕೈ ಹಿಡಿದಿದ್ದಾಳೆ.

ಕಳೆದ ಹಲವಾರು ವರ್ಷಗಳಲ್ಲಿ ಸರಿಯಾದ ಅವಧಿಗೆ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗದೇ ಸಾಕಷ್ಟು ಸಮಸ್ಯೆ ನಿರ್ಮಾಣವಾಗ್ತಿತ್ತು. ಅಣೆಕಟ್ಟು ಭರ್ತಿಯಾಗದ ಸಂದರ್ಭಗಳಲ್ಲಿ ತಮಿಳುನಾಡು (Tamilnadu) ನೀರಿಗಾಗಿ ಕ್ಯಾತೆ ತೆಗೆದು ವಿವಾದ ಉಲ್ಬಣಿಸುತ್ತಿತ್ತು. ಈ ವರ್ಷ ಹಾಗೆ ಆಗುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ.

ಕಳೆದ ಜೂನ್ ತಿಂಗಳಲ್ಲಿ ಅಂದರೆ ಜುಲೈ ಅಥವಾ ಆಗಸ್ಟ್‌ನಲ್ಲಿ ಭರ್ತಿಯಾಗುತ್ತಿದ್ದ ಕೆಆರ್‌ಎಸ್‌ ಜಲಾಶಯ ಜೂನ್‌ನಲ್ಲೇ ಅವಧಿಗೂ ಮೊದಲೇ ಸಂಪೂರ್ಣ ಭರ್ತಿಯಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಇದಾದ ಬಳಿಕ ಈಗ ಹಿಂಗಾರು ಮಳೆಯಲ್ಲೂ ಜಲಾಶಯ ಸಂಪೂರ್ಣ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. 124.80 ಅಡಿಗಳ ಸಾಮರ್ಥ್ಯ ಇರುವ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ 20 ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ನೀರನ್ನು ಹರಿಸಲಾಗುತ್ತಿದೆ. ಹಿಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹಾಗೂ ಜನ ಜಾನುವಾರುಗಳು ನದಿಗೆ ಇಳಿಯದಂತೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ಸಂದೇಶ ನೀಡಿದೆ.

ಇದನ್ನೂ ಓದಿ: Cauvery Aarti: ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಐದು ದಿನಗಳ ಕಾವೇರಿ ಆರತಿಗೆ ತೆರೆ

ಸದ್ಯ ಈ ಬಾರಿ ಹಿಂಗಾರು ಮಳೆಯಲ್ಲೂ ಕೂಡ ಕೆ.ಆರ್.ಎಸ್ ಜಲಾಶಯ ಮತ್ತೊಮ್ಮೆ ಭರ್ತಿಯಾಗುವ ಮೂಲಕ, ಮಂಡ್ಯ ಜಿಲ್ಲೆಯ ಕೃಷಿ ಭೂಮಿಗೆ ಸಂತೃಪ್ತಿಯ ಜೊತೆಗೆ ರೈತರಿಗೆ ಸಂತಸ ತಂದಿದೆ. ಇದೇ ತಿಂಗಳು ಕೆಆರೆಸ್‌ ಜಲಾಶಯದಲ್ಲಿ ಸರ್ಕಾರದ ವತಿಯಿಂದ ಕಾವೇರಿ ಆರತಿ ಕೂಡ ವಿಜೃಂಭಣೆಯಿಂದ ನಡೆದಿತ್ತು.

ಹರೀಶ್‌ ಕೇರ

View all posts by this author