ಬೆಂಗಳೂರು, ಜ.02: ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್ಗಳಲ್ಲಿ (private buses) ಅಗ್ನಿ ದುರಂತಗಳು (Fire accident) ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅಲರ್ಟ್ ಆಗಿರುವ ಕೆಎಸ್‌ಆರ್‌ಟಿಸಿ (KSRTC) ನಿಗಮ, ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅಳವಡಿಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿ ಅಂಬಾರಿ ಉತ್ಸವ (Ambari bus) ಮತ್ತು ಅಂಬಾರಿ 2.0 ಬಸ್ಗಳಲ್ಲಿ ಅತ್ಯಾಧುನಿಕ ಮುಂಜಾಗ್ರತಾ ಕ್ರಮಗಳನ್ನು (Safety measures) ತೆಗೆದುಕೊಳ್ಳಲು ಮುಂದಾಗಿದೆ.
ಮೊದಲಿಗೆ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್ಗಳಲ್ಲಿ ಅಳವಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ನೋಡುವುದಾದರೆ, ಡ್ರೈವರ್ ಸೀಟ್ ಬಳಿ ಡ್ಯಾಶ್ ಕ್ಯಾಮ್ ಅಳವಡಿಸಲಾಗಿದೆ. ಈ ಕ್ಯಾಮೆರಾದಿಂದ ಬಸ್ ಆಕ್ಸಿಡೆಂಟ್ಗೆ ಕಾರಣ ಗೊತ್ತಾಗಲಿದೆ. ಏನಾದರೂ ಬಸ್ನಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ, ಪ್ರಯಾಣಿಕರನ್ನು ಅಲರ್ಟ್ ಮಾಡಲು ಡ್ರೈವರ್ ಮುಂಭಾಗದಲ್ಲಿ ಅನೌನ್ಸರ್ ಇಡಲಾಗಿದೆ. ಅಂದರೆ ಫೈರ್ ಡಿಟೆಕ್ಷನ್ ಆ್ಯಂಡ್ ಸಪ್ರೇಷನ್ ಸಿಸ್ಟಮ್ (FDSS). ಇಂಜಿನ್ ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡರೆ ಇಂಜಿನ್ ಕಂಪಾರ್ಟ್ಮೆಂಟ್ನಲ್ಲಿ ಆಟೋಮ್ಯಾಟಿಕ್ ಆಗಿ 15 ನಾಜಲ್ಗಳಿಂದ ಫೋಮ್ ಸ್ಪ್ರೇ ಆಗುತ್ತದೆ.
ಒಂದು ವೇಳೆ ಸ್ಪ್ರೇ ಆಗಲಿಲ್ಲ ಅಂದರೆ ಡ್ರೈವರ್ ಮುಂಭಾಗದ ಡಿಸ್ಪ್ಲೇಯಲ್ಲಿರುವ ಬಟನ್ ಪ್ರೆಸ್ ಮಾಡಿದರೆ, ನಾಜಲ್ಗಳ ಮೂಲಕ ಅಗ್ನಿ ಅವಘಡ ತಪ್ಪಲಿದೆ. ಇದಕ್ಕಾಗಿ ಬಸ್ ಹಿಂಭಾಗದಲ್ಲಿ 4 ಕೆಜಿಯ ಫೋಮ್ ಸಿಲಿಂಡರ್ ಅಳವಡಿಸಲಾಗಿದೆ. ಬಸ್ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೆ ಫ್ರಂಟ್ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ಡ್ರೈವರ್ ಸೀಟ್ ಹಿಂಭಾಗದಲ್ಲಿ ದೊಡ್ಡದಾದ ಹ್ಯಾಮರ್ ಇಡಲಾಗಿದೆ. ತಪ್ಪಿಸಿಕೊಳ್ಳಲು ಪ್ರತಿ ಬರ್ತ್ ಸೀಟ್ನಲ್ಲೂ ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್ ಇಡಲಾಗಿದೆ. ಬಸ್ನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಾಗ ಡ್ರೈವರ್ ಮುಂಭಾಗದಲ್ಲಿ ಪ್ಯಾನಿಕ್ ಬಟನ್ ಅನ್ನು ಕೂಡ ಅಳವಡಿಸಿದೆ. ಅದನ್ನು ಡ್ರೈವರ್ ಪ್ರೆಸ್ ಮಾಡಿದಾಗ ಶಬ್ದ ಉಂಟಾಗಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗುತ್ತದೆ. ಬಸ್ ಒಳಗೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 4 ಕೆಜಿಯ ಎರಡು ಫೈರ್ ಎಸ್ಟಿಂಗ್ವಿಷರ್ ಅಳವಡಿಸಲಾಗಿದೆ.
KSRTC Buses: ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವುದು ನಿಷೇಧ
ಎಮರ್ಜೆನ್ಸಿ ಎಕ್ಸಿಟ್ ಡೋರ್ ಅನ್ನು ವಾಹನದ ಬಲಭಾಗದ ಮೂರನೇ ಬರ್ತ್ನಲ್ಲಿ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡದ ವೇಳೆ ಪ್ರಯಾಣಿಕರು ಈ ಡೋರ್ ಮೂಲಕ ಎಕ್ಸಿಟ್ ಆಗಬಹುದು. ಈ ಬರ್ತ್ ಅನ್ನು ಯಾರಿಗೂ ಬುಕ್ ಮಾಡುವುದಿಲ್ಲ. ಇದು ಯಾವಾಗಲೂ ಖಾಲಿಯಾಗಿರಲಿದೆ. ಬಸ್ ಒಳಭಾಗದಲ್ಲಿ ಎರಡು ಸೆಲೂನ್ ಕ್ಯಾಮೆರಾ ಅಳವಡಿಸಲಾಗಿದೆ.
ಕುಡಿದು ಬಂದರೆ ಬಸ್ ಸ್ಟಾರ್ಟ್ ಆಗುವುದಿಲ್ಲ
ದೇಶದಲ್ಲಿ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ನಿಗಮದ ಬಸ್ಗಳಲ್ಲಿ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅನ್ನು ಕೆಎಸ್‌ಆರ್‌ಟಿಸಿ ಬಸ್ಗಳಲ್ಲಿ ಅಳವಡಿಸಲು ಮುಂದಾಗಿದೆ. ಈ ಅಡಾಸ್ ಸಿಸ್ಟಮ್ ಡ್ರೈವಿಂಗ್ ವೇಳೆ, ಫೋನ್ ಬಳಕೆ ಮಾಡಿದರೆ, ನಿದ್ರೆಗೆ ಜಾರಿದರೆ, ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೆ ಕೋಲಿಜಿಯನ್ ವಾರ್ನಿಂಗ್ ನೀಡುತ್ತದೆ. ಈ ವೇಳೆ ಮೊದಲಿಗೆ ಬೀಪ್ ಸೌಂಡ್ ನೀಡುತ್ತದೆ. ನಂತರ ಕ್ರಿಟಿಕಲ್ ವಾರ್ನಿಂಗ್ ನೀಡಿ, ವಾಹನದ ವೇಗ ಮಿತಿ ಕಡಿಮೆ ಮಾಡಿ ಆಕ್ಸಿಡೆಂಟ್ ತಡೆಗಟ್ಟಲು ಸಹಾಯ ಮಾಡುತ್ತದೆ. ಡ್ರೈವರ್ ಡ್ರೈವಿಂಗ್ ಮಾಡುವ ವೇಳೆ ಕುಡಿದು ಬಂದಿದ್ದರೆ ವಾಹನ ಸ್ಟಾರ್ಟ್ ಆಗುವುದಿಲ್ಲ.
ಐರಾವತ ಬಸ್‌ಗಳ ಮುಂಜಾಗ್ರತಾ ಕ್ರಮ
ಇತ್ತ ಐರಾವತ ಬಸ್ಗಳಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅಂತ ನೋಡುವುದಾದರೆ, ಪ್ರಯಾಣಿಕರ ಸೀಟ್ ಬಳಿ 30 ಸ್ಪ್ರಿಂಕ್ಲರ್ ನಾಜಲ್ ಅಳವಡಿಸಿದ್ದು, ಅಗ್ನಿ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ನೀರು ಸರಬರಾಜು ಆಗುತ್ತದೆ. ಇದಕ್ಕಾಗಿ ಬಸ್ ಲಗೇಜ್ ಕಂಪಾರ್ಟ್‌ಮೆಂಟ್ ಬಳಿ 170 ಲೀಟರ್ ಕೆಪಾಸಿಟಿಯ ಎರಡು ಸ್ಟೈನ್‌ಲೆಸ್ ಸ್ಟೀಲ್ ಟ್ಯಾಂಕರ್ಗಳನ್ನು ಅಳವಡಿಸಲಾಗಿದೆ.
ಬಸ್ ಬಲಭಾಗದ ಹಿಂಬದಿಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಟೀಲ್ ಲ್ಯಾಡರ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸೇಫ್ ಆಗಿ ಬಸ್ನಿಂದ ಕೆಳಗೆ ಇಳಿಯಬಹುದು ಎಂದು ಕೆಎಸ್‌ಆರ್‌ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳುತ್ತಾರೆ.