ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KSRTC Strike: ಆಗಸ್ಟ್‌ 5ರಿಂದ ಸಾರಿಗೆ ನೌಕರರ ಮುಷ್ಕರ, ಮಾತುಕತೆಗೆ ಕರೆದ ರಾಜ್ಯ ಸರಕಾರ

KSRTC, BMTC: ಬಸ್​​ಗಳ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ, ಖಾಸಗಿ ಬಸ್ ಮಾಲೀಕರ ಜೊತೆ ಸಭೆ ಕರೆದಿದೆ. ಸಾರಿಗೆ ಇಲಾಖೆ ಆಯುಕ್ತರು ಇಂದು ಮಧ್ಯಾಹ್ನ 12 ಗಂಟೆಗೆ ಸಿಬ್ಬಂದಿ ಜೊತೆ ಚರ್ಚೆ ನಡೆಸಲಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5ರಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು (KSRTC, BMTC Employees) ಅನಿರ್ದಿಷ್ಟಾವಧಿ ಮುಷ್ಕರ (KSRTC Strike) ಮಾಡಲು ನೌಕರರು ನಿರ್ಧರಿಸಿದ್ದಾರೆ. ಪ್ರತಿಭಟನೆಗೆ ಮಣಿಯದಿರಲು ರಾಜ್ಯ ಸರ್ಕಾರ (Karnataka Government) ನಿರ್ಧರಿಸಿದ್ದು, ಸಾರಿಗೆ ಇಲಾಖೆ, ಖಾಸಗಿ ಬಸ್ ಮಾಲೀಕರ ಅಸೋಸಿಯೇಷನ್ ಜೊತೆ ಇಂದು ಸಭೆ ಕರೆದಿದೆ. ಜೊತೆಗೆ, ಮುಷ್ಕರ ನಡೆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಹಾಗೂ ಪರ್ಯಾಯ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ.

ಬಸ್​​ಗಳ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ, ಖಾಸಗಿ ಬಸ್ ಮಾಲೀಕರ ಜೊತೆ ಸಭೆ ಕರೆದಿದೆ. ಸಾರಿಗೆ ಇಲಾಖೆ ಆಯುಕ್ತರು ಇಂದು ಮಧ್ಯಾಹ್ನ 12 ಗಂಟೆಗೆ ಸಿಬ್ಬಂದಿ ಜೊತೆ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ, ಮುಷ್ಕರ ನಡೆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಹಾಗೂ ಪರ್ಯಾಯ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಸಾರಿಗೆ ನೌಕರರು ಮುಷ್ಕರ ನಡೆಸಿದರೂ ಖಾಸಗಿ ಚಾಲಕರ ಮೂಲಕ ಬಸ್ ಓಡಿಸಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸರ್ಕಾರಿ ಬಸ್‌ಗಳಿಗೆ ಖಾಸಗಿ ಬಸ್ ಚಾಲಕರನ್ನು ಬಳಸಿಕೊಳ್ಳಬಹುದು.

ಸಾರಿಗೆ ನೌಕರರು ಮುಷ್ಕರ ಮಾಡದಂತೆ ತಡೆಯಲು ಮುಂದಾದ ಬಿಎಂಟಿಸಿ ಮುಂದಾಗಿದೆ. ಬಿಎಂಟಿಸಿಯು ಡ್ಯೂಟಿ ರೋಟಾಗೆ ನೌಕರರ ಕೌನ್ಸಿಲಿಂಗ್ ಕರೆದಿದೆ. ಬಿಎಂಟಿಸಿ ನಡೆಗೆ ಸಾರಿಗೆ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದೆ. ಇಷ್ಟು ದಿನ ಒಂದು ವರ್ಷಕ್ಕೆ ಒಂದು ಬಾರಿ ಡ್ಯೂಟಿ ರೋಟಾ ಕರೆಯುತ್ತಿದ್ರು. ಈಗ ಮುಷ್ಕರ ಮಾಡದಂತೆ ತಡೆಯಲು 6 ತಿಂಗಳಿಗೆ ಡ್ಯೂಟಿ ರೋಟಾ ಕರೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 4 ರಿಂದ ಕರೆದಿರುವ ಡ್ಯೂಟಿ ರೋಟಾ ಮುಂದೂಡುವಂತೆ ಬಿಎಂಟಿಸಿ ಎಂಡಿಗೆ KSRTC ಸ್ಟಾಫ್ ಆಂಡ್ ವರ್ಕರ್ಸ್‌ ಫೆಡರೇಷನ್ ಪತ್ರ ಬರೆದಿದೆ.

ಸಾರಿಗೆ ನೌಕರರ ಬೇಡಿಕೆಗಳೇನು?

- 38 ತಿಂಗಳ ವೇತನ ಬಾಕಿ ಹಣ ನೀಡಬೇಕು

- ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು

- ಖಾಸಗೀಕರಣ, ಭ್ರಷ್ಟಾಚಾರ, ಕಾರ್ಮಿಕರ ಕಿರುಕುಳ ನಿಲ್ಲಬೇಕು

- ನಗದು ರಹಿತ ವೈದ್ಯಕೀಯ ಸೌಲಭ್ಯ

- ನಮ್ಮ ಹಕ್ಕಿನ ರಜೆ

- 1-1-2024 ರಿಂದ ವೇತನ ಜಾರಿಗೊಳಿಸುವುದು

- ಉತ್ತಮ ಕ್ಯಾಂಟೀನ್ ವ್ಯವಸ್ಥೆ

- ಈ ಹಿಂದೆ 2020 ಮತ್ತು 2021 ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು

- ಸಾರಿಗೆ ನಿಗಮದ ವಿದ್ಯುತ್‌ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು

- ಇ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿ ಕೈಬಿಡಬೇಕು

ಇದನ್ನೂ ಓದಿ: CM Siddaramaih: ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಹಿಂಬಾಕಿ ಪಾವತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

ಹರೀಶ್‌ ಕೇರ

View all posts by this author