KSRTC ticket Price: ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ, ಆಯ್ದ ಬಸ್‌ಗಳಲ್ಲಿ ಟಿಕೆಟ್ ದರ ವಿನಾಯಿತಿ
ಏಪ್ರಿಲ್‌ನಿಂದ ಜೂನ್ ಮತ್ತು ಅಕ್ಟೋಬರ್‌ನಿಂದ ಡಿಸೆಂಬರ್ ಸಮಯದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುತ್ತೆ. ಈ ಸಮಯದಲ್ಲಿ ಕೆಎಸ್ಆರ್‌ಟಿಸಿ ಸಾಮಾನ್ಯವಾಗಿ ಪ್ರೀಮಿಯಂ ಸೇವೆಗಳ ದರವನ್ನು 10–15% ರಷ್ಟು ಹೆಚ್ಚಿಸುತ್ತದೆ. ಆದ್ರೆ ಇದೀಗ ಆಫ್ ಸೀಸನ್ ಸಮಯದಲ್ಲಿ ಬಸ್ ಟಿಕೆಟ್ ದರ ಇಳಿಸುವ ಮೂಲಕ, ಪ್ರಯಾಣಿಕರಿಗೆ ಇಲಾಖೆ ಬಿಗ್ ಆಫರ್ ನೀಡಿದೆ. ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು,. ಜನವರಿ 05 ರಿಂದಲೇ ದರ ರಿಯಾಯಿತಿ ಜಾರಿಯಾಗಿದೆ.
ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ವಿನಾಯಿತಿ -
ಬೆಂಗಳೂರು, ಜ.06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಜ್ಯದ ಜನರರಿಗೆ ಇನ್ನೊಂದು ಆಫರ್ ನೀಡಿದೆ. ಜನವರಿ ಮತ್ತು ಮಾರ್ಚ್ ನಡುವಿನ ಸೀಸನ್‌ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಕೆಎಸ್‌ಆರ್‌ಟಿಸಿ ಬಿಗ್ ಆಫರ್ (Big Offer) ನೀಡ್ತಿದೆ. ಸೋಮವಾರ ಜನವರಿ 5, 2026 ರಿಂದ ಜಾರಿಗೆ ಬರುವಂತೆ ಬಹು ಮಾರ್ಗಗಳಲ್ಲಿ ತನ್ನ ಹಲವಾರು ಪ್ರೀಮಿಯಂ ಬಸ್ ಸೇವೆಗಳ (Bus Services) ಟಿಕೆಟ್ ದರವನ್ನು (Ticket price) ಶೇ. 5 ರಿಂದ ಶೇ. 15 ರಷ್ಟು ಕಡಿಮೆ ಮಾಡಿದೆ.
ಏಪ್ರಿಲ್‌ನಿಂದ ಜೂನ್ ಮತ್ತು ಅಕ್ಟೋಬರ್‌ನಿಂದ ಡಿಸೆಂಬರ್ ಸಮಯದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುತ್ತೆ. ಈ ಸಮಯದಲ್ಲಿ ಕೆಎಸ್ಆರ್‌ಟಿಸಿ ಸಾಮಾನ್ಯವಾಗಿ ಪ್ರೀಮಿಯಂ ಸೇವೆಗಳ ದರವನ್ನು 10–15% ರಷ್ಟು ಹೆಚ್ಚಿಸುತ್ತದೆ. ಆದ್ರೆ ಇದೀಗ ಆಫ್ ಸೀಸನ್ ಸಮಯದಲ್ಲಿ ಬಸ್ ಟಿಕೆಟ್ ದರ ಇಳಿಸುವ ಮೂಲಕ, ಪ್ರಯಾಣಿಕರಿಗೆ ಇಲಾಖೆ ಬಿಗ್ ಆಫರ್ ನೀಡಿದೆ.
ಆಯ್ದ ಮಾರ್ಗಗಳಲ್ಲಿ ರಿಯಾಯಿತಿ
ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು,. ಜನವರಿ 05 ರಿಂದಲೇ ದರ ರಿಯಾಯಿತಿ ಜಾರಿಯಾಗಿದೆ. ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಸಾರಿಗೆ ಬಸ್ಗಳ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಆಫರ್ ನೀಡಲಾಗ್ತಿದೆ.
ಯಾವ ಮಾರ್ಗಗಳ ಬಸ್ ದರ ಇಳಿಕೆ?
ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಮತ್ತೂರು, ಬೆಂಗಳೂರು-ತ್ರಿಶೂರು ಮಾರ್ಗಗಳ ಬಸ್ನಲ್ಲಿ ರಿಯಾಯಿತಿ ಪಡೆಯಬಹುದಾಗಿದೆ. ಜನವರಿ 05 ರಿಂದಲೇ ದರ ರಿಯಾಯಿತಿ ಜಾರಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ksrtc.in ಗೆ ಕ್ಲಿಕ್ ಮಾಡಿ.
KSRTC news: ದುರಂತಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ರಾತ್ರಿ ಬಸ್ಸುಗಳಿಗೆ ಫುಲ್ ಸೇಫ್ಟಿ ವ್ಯವಸ್ಥೆ!
"ಚಳಿಗಾಲದ ಸಮಯದಲ್ಲಿ ಪ್ರೀಮಿಯಂ ಪ್ರಯಾಣವನ್ನು ಹೆಚ್ಚು ಕೈಗೆಟುಕುವಂತೆ ಮಾಡುವುದು ಮತ್ತು ಪ್ರಯಾಣಿಕರು ಖಾಸಗಿ ನಿರ್ವಾಹಕರಿಗಿಂತ ಕೆಎಸ್‌ಆರ್‌ಟಿಸಿಯನ್ನು ಆಯ್ಕೆ ಮಾಡುವಂತೆ ಪ್ರೋತ್ಸಾಹಿಸೋದು ಇದರ ಉದ್ದೇಶವಾಗಿದೆ. ಸ್ಪರ್ಧಾತ್ಮಕ ದರಗಳನ್ನು ನೀಡುವ ಮೂಲಕ ನಿರಂತರ ಆದಾಯವನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.