ಮಡಿವಾಳ ಮಾಚಿದೇವರು ಕಾಯಕ ತತ್ವದಲ್ಲಿ ನಂಬಿಕೆಯಿಟ್ಟವರು : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಶಿಕ್ಷಣಕ್ಕೆ ಒತ್ತು ಕೊಡಿ ಈ ಭಾಗದಲ್ಲಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಹಾಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ,ಉತ್ತಮ ಶಿಕ್ಷಣ ಕೊಡಿಸಬೇಕು.ಅದಕ್ಕೆ ಬೇಕಾದ ಸಹಕಾರ, ಸೌಲಭ್ಯ ಗಳನ್ನು ನೀಡುತ್ತೇನೆ ಎಂದು ಶಾಸಕರು ತಿಳಿಸಿದರು


ಬಾಗೇಪಲ್ಲಿ: ಮಡಿವಾಳ ಮಾಚಿದೇವರು ಕಾಯಕ ತತ್ವದಲ್ಲಿ ಹೆಚ್ಚು ನಂಬಿಕೆ ಇಟ್ಟವರಾಗಿದ್ದು, ಅಸಮಾನತೆಯನ್ನು ಹೋಗಲಾಡಿಸಲು ಮಾರ್ಗದಲ್ಲಿ ನಡೆದಾಗ ಹಾಗೂ ಅವರ ತತ್ವಾದರ್ಶ ಗಳನ್ನು ಅನುಸರಿಸಬೇಕಿದೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಬಹು ತೇಕ ವರ್ಗಗಳ ಸಾಮಾಜಿಕ ಅಸಮಾನತೆಯಿಂದ ಶೋಷಣೆಗೆ ಒಳಗಾಗಿದ್ದರು. ಆ ಕಾಲಘಟ್ಟ ದಲ್ಲಿ ಸರ್ವರಿಗೂ ಸಮಪಾಲು, ಸಹಬಾಳ್ವೆ ಒದಗಿಸಲು ಮಾಚಿದೇವರು ಶರಣರು ಸಾಮಾಜಿಕ ಕ್ರಾಂತಿ ಯನ್ನೆ ಮಾಡಿದ್ದರು ಎಂದು ಹೇಳಿದರು.
ಶಿಕ್ಷಣಕ್ಕೆ ಒತ್ತು ಕೊಡಿ ಈ ಭಾಗದಲ್ಲಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಹಾಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ,ಉತ್ತಮ ಶಿಕ್ಷಣ ಕೊಡಿಸಬೇಕು.ಅದಕ್ಕೆ ಬೇಕಾದ ಸಹಕಾರ, ಸೌಲಭ್ಯಗಳನ್ನು ನೀಡುತ್ತೇನೆ ಎಂದು ಶಾಸಕರು ತಿಳಿಸಿದರು.
ಎಸ್.ಸಿ, ಎಸ್ ಟಿ ಪಟ್ಟಿಗೆ ಸೇರಿಸಲು ಧ್ವನಿ
ಅನಾದಿ ಕಾಲದಿಂದಲೂ ಮಡಿವಾಳ ಸಮಾಜ ಎಲ್ಲಾ ಸಮಾಜದ ಸ್ವಚ್ಛತೆಯ ಬಗ್ಗೆ ಕಾಯಕವನ್ನು ಮಾಡುತ್ತಾ ನಿರಂತರವಾಗಿ ಸೇವೆ ಮಾಡುತ್ತಾ ಬಂದಿದೆ. ಮಡಿವಾಳ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ತೀರ ಹಿಂದುಳಿದಿರುವುದು ಒಂದು ಕಡೆ ಆದರೆ ವ್ಯವಸಾಯ ಮಾಡಲು ಭೂಮಿ ಇಲ್ಲದೆ ಬೇರೆ ಬೇರೆ ವೃತ್ತಿಗಳನ್ನು ಅಶ್ರಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಗಸರನ್ನು ಮತ್ತು ಸವಿತಾ ಸಮಾಜವನ್ನು ಎಸ್ ಸಿ ಮತ್ತು ಎಸ್ ಟಿ ಪಟ್ಟಿಗೆ ಸೇರಿಸಲು ಸರಕಾರದ ಗಮನ ಸೆಳೆಯಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾಯಕದ ಮೂಲಕ ಸಮಾನತೆ
ಇದೇ ವೇಳೆ ತಹಶೀಲ್ದಾರ್ ಮನಿಷಾ ಮಹೇಶ್ ಎಸ್ ಪತ್ರಿಯವರು ಮಾತನಾಡಿ 12ನೇ ಶತಮಾನದ ಶಿವಶರಣರ ಮತ್ತು ಕಾಯಕ ನಿಷ್ಠೆಯುಳ್ಳವರಾಗಿದ್ದು,ಬಟ್ಟೆಗಳನ್ನು ಮಡಿ ಮಾಡಿ ಅವರಿಗೆ ಮುಟ್ಟಿ ಸುವ ಕಾಯಕ ಮಾಡುತ್ತಿದ್ದರು. ಕಾಯಕ ಮಾಡದ ಸೋಮಾರಿಗಳ, ಬಡವರನ್ನು ಶೋಷಿಸುವ, ದುರ್ಗಣವುಳ್ಳವರ ಬಟ್ಟೆಗಳನ್ನೆಂದೂ ಮುಟ್ಟುತ್ತಿರಲಿಲ್ಲ. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂಬುದನ್ನು ಜನಕ್ಕೆ ಸಾರಿದರು. ಹನ್ನೆರಡನೇ ಶತಮಾನದ ಸಾಂಸ್ಕೃತಿಕ ವೀರ, ವಚನಗಳ ರಕ್ಷಕ ಮಡಿವಾಳ ಮಾಚಿದೇವ ಜಂಗಮ ವೇಷದಲ್ಲಿ ಹಿಮಾಲಯಕ್ಕೆ ಬಂದ ಶಿವನ ಬಟ್ಟೆಯನ್ನು ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದು ರಕ್ತದಲ್ಲಿ ಬಟ್ಟೆ ಒಗೆದ ಕಥೆ ಮಾಚಿದೇವನ ಕಾಯಕನಿಷ್ಠೆ, ಹಿರಿಮೆಯನ್ನು ಸಾರುತ್ತದೆ. ಬ್ರಾಹ್ಮಣ್ಯದ ಶ್ರೇಣಿಕೃತ ಸಮಾಜಲ್ಲಿ ಕಾಯಕ ತತ್ವವೂ ದೇವರನ್ನು ಸೇರಬಹುದೆಂದು ಸಾರಿದರು ಎಂದು ತಿಳಿಸಿದರು.
ಮಡಿವಾಳ ಮಾಚಿದೇವರ ಭವನಕ್ಕೆ ಭೂಮಿ ಪೂಜೆ
ಪಟ್ಟಣದ ಶಿಂಗಿನಾಯಕನದಿನ್ನೆ ಸರ್ವೆ ನಂ 23 ರಲ್ಲಿ ಸುಮಾರು 2 ಕೋಟಿ ಬೆಲೆಬಾಳುವ 22 ಗಂಟೆ ಸ್ಥಳವನ್ನು ದೋಭೀಘಾಟ್‌ನ್ನು ನಿರ್ಮಿಸಿಕೊಳ್ಳುವುದರ ಜೊತೆಗೆ ಮಡಿವಾಳ ಮಾಚಿದೇವರ ಭವನ ನಿರ್ಮಾಣಕ್ಕೆ ಎಸ್.ಎನ್.ಸುಬ್ಬಾರೆಡ್ಡಿ ಯವರು ಸುಮಾರು 1 ಕೋಟಿ ಅಂದಾಜು ವೆಚ್ಚದಲ್ಲಿ ನೀಲಿ ನಕ್ಷೆ ತಯಾರಿಸಿದ್ದು ಅದರಲ್ಲಿ ಪ್ರಸ್ತುತ್ತ 20 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿಸಿ ಭವನ ನಿರ್ಮಿಸಲು ಭೂಮಿ ಪೂಜೆಯನ್ನು ಶಾಸಕ ಮತ್ತಿತರರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಸಮದಾಯದ ಮುಖಂಡ ಹೆಚ್.ವಿ.ನಾಗರಾಜು,ಮಡಿವಾಳ ಸಮು ದಾಯದ ಅಧ್ಯಕ್ಷ ಸುರೇಶ್, ಕ್ರಿಕೆಟ್ ಮೂರ್ತಿ, ಸಮುದಾಯದ ಇತರೆ ಮುಖಂಡರು ಉಪಸ್ಥಿತ ರಿದ್ದರು.