ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾರ್ಗಿಲ್ ವಿಜಯೋತ್ಸವ ದಿನ: ಹೆತ್ತ ನೆಲಕ್ಕಾಗಿ ನೆತ್ತರು ಚೆಲ್ಲಿದ ವೀರ ಯೋಧರಿಗೆ ನಮನ

ಅಪ್ರತಿಮ ಶೌರ್ಯ, ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ದೇಶದ ಶತ್ರುಗಳನ್ನು ಸದೆಬಡಿದು, ಭಾರತಾಂಬೆ ಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮ ಯೋಧರಿಗೆ "ಕಾರ್ಗಿಲ್‌ ವಿಜಯ ದಿನ" ದಂದು ಗೌರವ ನಮನಗಳೊಂದಿಗೆ ಆಚರಿಸುತ್ತಿದ್ದವೆ

ಹೆತ್ತ ನೆಲಕ್ಕಾಗಿ ನೆತ್ತರು ಚೆಲ್ಲಿದ ವೀರ ಯೋಧರಿಗೆ ನಮನ

Ashok Nayak Ashok Nayak Jul 27, 2025 3:48 PM

ಬಾಗೇಪಲ್ಲಿ: ಕಾರ್ಗಿಲ್ ವಿಜಯ ದಿನಕ್ಕೆ 26ನೇ ವರ್ಷದ ಸಂಭ್ರಮ. ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣಾದಾಯಕ, ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನ ಸ್ಮರಿಸುವ ಜೊತೆಗೆ ಕಾರ್ಗಿಲ್ ವೀರ ಮರಣ ಹೊಂದಿದ ಯೋಧ ಬಿ.ಎ. ರಫೀವುಲ್ಲಾ ನಮನ ಗಳನ್ನು ಸಲ್ಲಸುತ್ತಿದ್ದವೆ ಎಂದು ಭಾರತೀಯ ನಿವೃತ್ತ ಯೋಧ ಅಮರನಾಥ್ ಬಾಬು ತಿಳಿಸಿದರು.

ಪಟ್ಟಣದ ಡಿ.ಸಿ.ಸಿ.ಬ್ಯಾಂಕ್ ಮುಂದೆ ಕಾರ್ಗಿಲ್ ವೀರ ಅಮರ ಯೋಧ ಬಿ.ಎ.ರಫೀವುಲ್ಲಾ ವಿವಿಧ ಮುಖಂಡರು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು

ಅಪ್ರತಿಮ ಶೌರ್ಯ, ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ದೇಶದ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮ ಯೋಧರಿಗೆ "ಕಾರ್ಗಿಲ್‌ ವಿಜಯ ದಿನ" ದಂದು ಗೌರವ ನಮನಗಳೊಂದಿಗೆ ಆಚರಿಸುತ್ತಿದ್ದವೆ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕಾನೂನಿನ ಅರಿವು ಅಗತ್ಯ

ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು ಮಾತನಾಡಿ, 1999 ರಲ್ಲಿ ಆಪರೇಷನ್ ವಿಜಯ್ ಕಾರ್ಯಾಚರಣೆ ವೇಳೆ ಪಾಕಿಸ್ತಾನಿ ಸೈನಿಕರು ಭಾರತದ ಗಡಿಗಳನ್ನು ದಾಟಿ ಎತ್ತರದ ಬೆಟ್ಟದಲ್ಲಿನ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತ್ತು. ಈ ಸಂಘರ್ಷವು ಕಾರ್ಗಿಲ್ ಯುದ್ಧವಾಗಿ ಬದಲಾಯಿತು. ಅಂದು ಉಗ್ರರ ಸಮೇತ, ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿ ವಿಜಯದುಂದುಬಿ ಬಾರಿಸಿದೆವು. ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ಪಾಕಿಸ್ತಾನಕ್ಕೆ ಮುಟ್ಟಿ ನೋಡಿ ಕೊಳ್ಳುವಂತೆ ನಮ್ಮ ಯೋಧರು ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಫೀವುಲ್ಲಾ ಅವರ ಕುಟುಂಬ ಸದಸ್ಯರಿಂದ ಸಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಅದ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ‌ ಸುಜಾತ ನರಸಿಂಹ ನಾಯ್ಡು,ಸದಸ್ಯರ ನಂಜುಂಡಪ್ಪ, ಶ್ರೀನಿವಾಸ್ ರೆಡ್ಡಿ,ನಿಜಾಮುದ್ದೀನ್ ಬಾಬು,ಮಂಜುನಾಥ, ಇರ್ಫಾನ್ ಖಾನ್ ಹಾಗೂ ಸಾರ್ವಜನಿಕರು ಹಾಜರಿದ್ದರು.