ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mahavir Jayanti 2026: ಭಗವಾನ್ ಶ್ರೀ ಮಹಾವೀರ ಜಯಂತಿ ಸಾರ್ವತ್ರಿಕ ರಜಾದಿನ ಬದಲು

ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆಗೆ ನಿಗದಿಪಡಿಸಿರುವ ಸಾರ್ವತ್ರಿಕ ರಜಾ ದಿನವನ್ನು 31.03.2026 ರ ಬದಲಾಗಿ 30.03.2026 ಎಂದು ಮಾರ್ಪಡಿಸಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಜೈನ ಜ್ಯೋತಿಷಿಗಳು ಹಾಗೂ ಧಾರ್ಮಿಕ ಪಂಡಿತರ ಅಭಿಪ್ರಾಯ ಪಡೆಯಲಾಗಿದೆ.

ಮಹಾವೀರ ಜಯಂತಿ 2026

ಬೆಂಗಳೂರು, ಮಾರ್ಚ್‌ 7: ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆಗೆ ನಿಗದಿ ಪಡಿಸಿರುವ ಸಾರ್ವತ್ರಿಕ ರಜಾ ದಿನವನ್ನು 31.03.2026 ರ ಬದಲಾಗಿ 30.03.2026 ಎಂದು ಮಾರ್ಪಡಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಜೈನ ಸಂಪುದಾಯದ ಜ್ಯೋತಿಷಿಗಳು ಮತ್ತು ಧಾರ್ಮಿಕ ಮುಖಂಡರ ಅಭಿಪ್ರಾಯದಂತೆ ಇದನ್ನು ಬದಲಿಸಲಾಗಿದೆ.

ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆಗೆ ನಿಗದಿಪಡಿಸಿರುವ ಸಾರ್ವತ್ರಿಕ ರಜಾ ದಿನವನ್ನು 31.03.2026 ರ ಬದಲಾಗಿ 30.03.2026 ಎಂದು ಮಾರ್ಪಡಿಸಿ ತಿದ್ದುಪಡಿ ಆದೇಶ ಹೊರಡಿಸುವ ಬಗ್ಗೆ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯ/ಶಿಫಾರಸ್ಸಿನೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಉಲ್ಲೇಖಿತ ಪತ್ರದಲ್ಲಿ ಸೂಚಿಸಲಾಗಿರುತ್ತದೆ. ಈ ಕುರಿತು ಈ ಕಚೇರಿಯ ಆಗಮ ಪಂಡಿತರು ಪರಿಶೀಲಿಸಿ ಈ ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಜಯಂತಿಯನ್ನು ನಿಗದಿಪಡಿಸುವಾಗ ಅವರವರ ಸಂಪ್ರದಾಯಕ್ಕೆ ಅನುಸಾರವಾಗಿ ನಿಗದಿಪಡಿಸಲಾಗುತ್ತದೆ. ಅಂದರೆ ಸೂರ್ಯ ಉದಯವಾಗುವ ಕಾಲದಲ್ಲಿ ಯಾವ ತಿಥಿ ಅಥವಾ ನಕ್ಷತ್ರಗಳು ಇರುತ್ತವೆಯೋ ಅದನ್ನು ಕೆಲವರು ಪ್ರಧಾನವಾಗಿ ಪರಿಗಣಿಸುತ್ತಾರೆ. ಮತ್ತೆ ಕೆಲವರು ಪೂರ್ಣ ದಿನ ಇರುವ ತಥಿಯನ್ನು ಸ್ವೀಕರಿಸುತ್ತಾರೆ. ಈ ರೀತಿ ಎರಡು ವಿಧವಾಗಿ ಆಚರಣೆ ಮಾಡಲಾಗುತ್ತದೆ.

ಪ್ರಸ್ತುತ ಈ ಹಿಂದೆ ನೀಡಲಾಗಿರುವ ಪ್ರಸ್ತಾಪಿತ ಮಹಾವೀರ ಜಯಂತಿಯು ಪರಿಗಣಿಸಲಾಗಿದ್ದು, ಸದರಿ ತಿಥಿಯು ದಿನಾಂಕ: 30.03.2026 ರ ಬೆಳಿಗ್ಗೆ ಪ್ರಾರಂಭಗೊಂಡು ದಿನಾಂಕ: 31.03.2026 ರಂದು ಬೆಳಗ್ಗೆ 07 ಗಂಟೆಯ ವರೆಗೆ ಸೂರ್ಯೋದಯಕ್ಕೆ ತ್ರಯೋದಶಿ ತಿಥಿಯು ಇದ್ದ ಕಾರಣ ಅದರೊಂದಿಗೆ ಅರುಣೋದಯವು ಸೇರಿರುವುದರಿಂದ ಇದನ್ನು ಮುಖ್ಯವೆಂದು ಪರಿಗಣಿಸಿ ಸದರಿ ಜಯಂತಿಯನ್ನು ನಿಗದಿಪಡಿಸಲಾಗಿತ್ತು.

Chikkaballapur News: ಜಿಲ್ಲಾಡಳಿತದಿಂದ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಹೇಳಿಕೆ

ತ್ರಯೋದಶಿ ಶುಕ್ಲ ಎಂದು ಆದರೆ ಸದರಿ ಮಹಾವೀರ ಜಯಂತಿಯು ಜೈನ ಸಂಪುದಾಯದ ಗುರುಗಳಾಗಿದ್ದು, ಈ ಸಂಪುದಾಯಸ್ಥರಿಗೆ ಸದರಿ ಮಹಾವೀರ ಮುನಿಗಳು ಮುಖ್ಯವಾಗುವುದರಿಂದ ಜೈನ ಸಂಪುದಾಯದ ಜ್ಯೋತಿಷ್ಯಗಳು ಮತ್ತು ಮುಖಂಡರು ಅವರ ಸಂಪ್ರದಾಯದಂತೆ ದಿನಾಂಕ: 30.03.2026 ರಂದು ಸದರಿ ಮಹಾವೀರ ಜಯಂತಿಯನ್ನು ಆಚರಿಸುವ ಸಲುವಾಗಿ ಸರ್ಕಾರದ ಸಾರ್ವತ್ರಿಕ ರಜೆಯನ್ನು ಘೋಷಿಸಲು ಕೋರಿರುವುದರಿಂದ ಸದರಿ ದಿನದಂದು ಅಚರಿಸುವ ಶಿಫಾರಸ್ಸು ಸಂಬಂಧ ಸರ್ಕಾರಕ್ಕೆ ಮಾಡಬಹುದಾಗಿರುತ್ತದೆ. ಈ ಕಛೇರಿಯ ಆಗಮ ಪಂಡಿತರ ಅಭಿಪ್ರಾಯದ ಹಿನ್ನೆಲೆಯಲ್ಲಿ ಶ್ರೀ ಮಹಾವೀರ್ ಜಯಂತಿ ನಿಮಿತ್ತ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ:31.03.2026 ರ ಬದಲಿಗೆ ದಿನಾಂಕ:30.03.2026 ರಂದು ಮಾರ್ಪಡಿಸಬಹುದಾಗಿರುತ್ತದೆ ಎಂಬ ಅಂಶವನ್ನು ವರದಿ ಮಾಡಿದೆ.

ಮಾರ್ಚ್ 1ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಹರೀಶ್‌ ಕೇರ

View all posts by this author