Heart Attack: ಹಾಸನದಲ್ಲಿ ಹೃದಯಾಘಾತಗಳಿಗೆ ಅತಿಯಾದ ಮಾಂಸಾಹಾರ ಕಾರಣ: ಎಚ್‌ಡಿ ರೇವಣ್ಣ
Heart Attack: ಜನತೆ ಬೀಗರೂಟದಲ್ಲಿ ಅತಿಯಾಗಿ ರೆಡ್ ಮೀಟ್ ಸೇವನೆ ಮಾಡುತ್ತಿದ್ದಾರೆ. ಅಲ್ಲದೇ ಹಾಸನ ಜಿಲ್ಲೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಆದಾಯ ಬರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ. ಬಾರ್‌ನಲ್ಲಿ ಕುಡಿದು ಅನಾಹುತವಾಗುತ್ತಿದೆ ಎಂದು ಕಿಡಿಕಾರಿದರು.

ಎಚ್‌ಡಿ ರೇವಣ್ಣ

ಹಾಸನ : ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದ್ದು, ನಿನ್ನೆ ಕೂಡ ರಾಜ್ಯದಲ್ಲಿ ಹಾಸನ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೃದಯಾಘಾತಕ್ಕೆ ಒಟ್ಟು 5 ಜನರು ಬಲಿಯಾಗಿದ್ದಾರೆ. ಕಳೆದ 46 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಜನರು ಹೃದಯಸ್ತಂಭನದಿಂದ (Heart Failure) ಸಾವನ್ನಪ್ಪಿದ್ದಾರೆ. ಹಾಸನದಲ್ಲಿ (Hassan news) ಈ ಸರಣಿ ಸಾವಿಗೆ ಅತಿಯಾದ ಮಾಂಸಾಹಾರ ಸೇವನೆ (Meat Eating) ಕಾರಣ ಎಂದು ಶಾಸಕ ಎಚ್.ಡಿ ರೇವಣ್ಣ (MLA HD Revanna) ಹೇಳಿದ್ದಾರೆ.
ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತನಾಡಿದ ಎಚ್.ಡಿ ರೇವಣ್ಣ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಆಗುತ್ತಿರುವ ಸರಣಿ ಸಾವುಗಳಿಗೆ ಮಾಂಸಾಹಾರ ಸೇವನೆಯೇ ಕಾರಣ. ಜನತೆ ಬೀಗರೂಟದಲ್ಲಿ ಅತಿಯಾಗಿ ರೆಡ್ ಮೀಟ್ ಸೇವನೆ ಮಾಡುತ್ತಿದ್ದಾರೆ. ಅಲ್ಲದೇ ಹಾಸನ ಜಿಲ್ಲೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಆದಾಯ ಬರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ. ಬಾರ್‌ನಲ್ಲಿ ಕುಡಿದು ಅನಾಹುತವಾಗುತ್ತಿದೆ ಎಂದು ಕಿಡಿಕಾರಿದರು.
ವೈದ್ಯರ ಜೊತೆ ಶಾಸಕ ಎಚ್.ಡಿ ರೇವಣ್ಣ ಈ ಎಲ್ಲಾ ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಎಚ್.ಡಿ ರೇವಣ್ಣ ಮಾತನಾಡುತ್ತಿದ್ದಾಗ ಶಾಸಕ ಸಿಎನ್ ಬಾಲಕೃಷ್ಣ ಮಧ್ಯಪ್ರವೇಶಿಸಿ, ಹಾಸನ ಜಿಲ್ಲೆಯಲ್ಲಿ ಬಾರ್‌ಗಳಿಗೆ ಸಮಯ ನಿಗದಿ ಮಾಡಬೇಕು. ಬೆಳಗ್ಗೆ 10ಕ್ಕೆ ಬಾರ್ ತೆರೆದರೆ ರಾತ್ರಿ 8 ಗಂಟೆಗೆ ಕ್ಲೋಸ್ ಮಾಡಲಿ ಎಂದು ಶಾಸಕ ಸಿಎನ್ ಬಾಲಕೃಷ್ಣ ಹೇಳಿಕೆ ನೀಡಿದರು. ಜನರ ಜೀವನಶೈಲಿ ಬದಲಾಗಬೇಕು ಎಂದು ಇದೇ ವೇಳೆ ಹಿಮ್ಸ್ ವೈದ್ಯರು ಸಲಹೆ ನೀಡಿದರು.
ಇದನ್ನೂ ಓದಿ: Heart Attack: ಹೃದಯಾಘಾತ ಸರಣಿ ಮುಂದುವರಿಕೆ, ನಿನ್ನೆ ಒಂದೇ ದಿನ ರಾಜ್ಯದಲ್ಲಿ 11 ಬಲಿ