Satish Jarkiholi: ಸತೀಶ್ ಜಾರಕಿಹೊಳಿ ಹೊಸ ಹೆಲಿಕಾಪ್ಟರ್ ಖರೀದಿ, ಬೆಲೆ ಎಷ್ಟು ಗೊತ್ತಾ?
ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿರುವ ಡಬಲ್ ಎಂಜಿನ್‌ನ ಹೆಲಿಕಾಪ್ಟರ್ ಇದಾಗಿದ್ದು, 6 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ ಪ್ರಯಾಣಿಸಬಹುದಾಗಿದೆ. ಈ ಚಾಪರ್ನನ್ನು ಜರ್ಮನಿಯಿಂದ ಖರೀದಿ ಮಾಡಲಾಗಿದ್ದು, ಅಗಸ್ಟಾ ಕಂಪನಿ ಈ ಹೆಲಿಕಾಪ್ಟರ್ ಸಿದ್ದಪಡಿಸಿದೆ ಎಂದು ತಿಳಿದು ಬಂದಿದೆ.

-

ಬೆಂಗಳೂರು: ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದು, ರಾಜ್ಯಾದ್ಯಂತ ಪ್ರವಾಸಕ್ಕೆ ಅನುಕೂಲವಾಗುವಂತೆ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ. ನೂತನ ಹೆಲಿಕಾಪ್ಟರ್ (Helicopter) ಖರೀದಿಸಿದ ಸತೀಶ್ ಜಾರಕಿಹೊಳಿ, ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್‌ನಲ್ಲಿ ಚಾಪರ್ ಪರಿಶೀಲನೆ ನಡೆಸಿದ್ದಾರೆ.
'ಶೀಘ್ರ ನೂತನ ಹೆಲಿಕಾಪ್ಟರ್ ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ' ಎಂದು ಸೋಶಿಯಲ್ ಮೀಡಿಯಾದಲ್ಲಿ ಜಾರಕಿಹೊಳಿ ಮಾಹಿತಿ ನೀಡಿದ್ದು, ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನಮಣ್ಣರ, ಅಲಿ ಗೊರವನಕೊಳ್ಳ ಜೊತೆಯಲ್ಲಿ ಇದ್ದರು.
ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿರುವ ಡಬಲ್ ಎಂಜಿನ್‌ನ ಹೆಲಿಕಾಪ್ಟರ್ ಇದಾಗಿದ್ದು, 6 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ ಪ್ರಯಾಣಿಸಬಹುದಾಗಿದೆ. ಈ ಚಾಪರ್ನನ್ನು ಜರ್ಮನಿಯಿಂದ ಖರೀದಿ ಮಾಡಲಾಗಿದ್ದು, ಅಗಸ್ಟಾ ಕಂಪನಿ ಈ ಹೆಲಿಕಾಪ್ಟರ್ ಸಿದ್ದಪಡಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯಾದ್ಯಂತ ಪ್ರವಾಸಕ್ಕೆ ಅನುಕೂಲವಾಗಲೆಂದು ಈ ಹೆಲಿಕಾಪ್ಟರ್ ಖರೀದಿ ಮಾಡಲಾಗಿದೆ. ಜಕ್ಕೂರಿನಲ್ಲಿ ಚಾಪರ್ ಅಸೆಂಬಲ್ ಕಾರ್ಯ ನಡೆಯುತ್ತಿದ್ದು, ನಾಲ್ಕೈದು ದಿನದಲ್ಲಿ ಸಂಪೂರ್ಣವಾಗಿ ಅಸೆಂಬಲ್ ಆಗಿ ಹಾರಟಕ್ಕೆ ಸಿದ್ದವಾಗಲಿದೆ. ಸ್ನೇಹಿತರ ಜತೆ ಜಕ್ಕೂರಿಗೆ ತೆರಳಿ ನೂತನ ಚಾಪರ್ ಅಸೆಂಬಲ್ ಆಗುತ್ತಿರುವುದನ್ನು ಜಾರಕಿಹೊಳಿ ವೀಕ್ಷಿಸಿದ್ದಾರೆ. ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿರುವ ಡಬಲ್ ಎಂಜಿನ್‌ನ ಹೆಲಿಕಾಪ್ಟರ್ ಬೆಲೆ 20 ಕೋಟಿ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: Satish Jarakiholi: 2028ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆ: ಸತೀಶ್ ಜಾರಕಿಹೊಳಿ