Viral Video: ನಡುರಸ್ತೆಯಲ್ಲಿ ಕಟ್ಕೊಂಡವಳ ಕತ್ತು ಸೀಳಿದ ಭೂಪ! ವಿಡಿಯೊ ಇದೆ
ಒಡಿಶಾದ ಬಾಲಸೋರ್‌ನಲ್ಲಿ ಬಾಲಸೋರ್ ಪಟ್ಟಣ ಪೊಲೀಸ್ ವ್ಯಾಪ್ತಿಯ ಪೋಥನಾ ಮೊಹಲ್ಲಾ ಗ್ರಾಮದ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಈ ಘಟನೆಗೆ ಹಲವಾರು ಮಂದಿ ಸಾಕ್ಷಿಯಾಗಿದ್ದು, ತಕ್ಷಣ ಸ್ಥಳೀಯರು ಮಧ್ಯಪ್ರವೇಶಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

-

ಬಾಲಸೋರ್: ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕುತ್ತಿಗೆ ಸೀಳಿದ ಘಟನೆ (husband attacks wife) ಒಡಿಶಾದ (odisha) ಬಾಲಸೋರ್ (Balasore) ಪಟ್ಟಣ ಪೊಲೀಸ್ ವ್ಯಾಪ್ತಿಯ ಪೋಥನಾ ಮೊಹಲ್ಲಾ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯು ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆಗೆ ಹಲವಾರು ಮಂದಿ ಸಾಕ್ಷಿಯಾಗಿದ್ದರು. ಈ ಭಯಾನಕ ಘಟನೆಯ ದೃಶ್ಯವಾಳಿಗಳು ಸಿಸಿಟಿವಿ ಕೆಮರಾದಲ್ಲಿ (CCTV Camera) ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ (Viral Video) ಆಗಿದೆ.
ಒಡಿಶಾದ ಬಾಲಸೋರ್‌ನಲ್ಲಿ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಈ ದಾಳಿಯಲ್ಲಿ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆಪ್ಟೆಂಬರ್ 18ರಂದು ಗುರುವಾರ ಸಂಜೆ 4.30ರ ಸುಮಾರಿಗೆ ಬಾಲಸೋರ್ ಪಟ್ಟಣ ಪೊಲೀಸ್ ವ್ಯಾಪ್ತಿಯ ಪೋಥನಾ ಮೊಹಲ್ಲಾ ಗ್ರಾಮದಲ್ಲಿ ಪತಿ ಪತ್ನಿ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿತ್ತು. ಬಳಿಕ ಇದು ಹಿಂಸಾತ್ಮಕ ರೂಪತಾಳಿತ್ತು. ಈ ಘಟನೆಗೆ ಹಲವಾರು ಮಂದಿ ಸಾಕ್ಷಿಯಾಗಿದ್ದು, ಎಲ್ಲರನ್ನೂ ಆಘಾತಕ್ಕೀಡುಮಾಡಿತ್ತು. ಸ್ಥಳೀಯರು ತಕ್ಷಣ ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
ಶೇಖ್ ಅಮ್ಜದ್ ಮತ್ತು ಆತನ ಪತ್ನಿನಡುವೆ ವೈಮನಸ್ಸು ಉಂಟಾಗಿದ್ದರಿಂದ ಆತನ ಪತ್ನಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇಬ್ಬರ ನಡುವೆ ಗುರುವಾರ ವಾದ ಉಂಟಾಗಿದ್ದು ಹಿಂಸಾತ್ಮಕ ರೂಪ ತಾಳಿದೆ. ಅಮ್ಜದ್ ತನ್ನ ಹೆಂಡತಿಯನ್ನು ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಆತ ಸಿಟ್ಟುಗೊಂಡು ಜೇಬಿನಿಂದ ಹರಿತವಾದ ಚಾಕುವನ್ನು ಹೊರತೆಗೆದು ಆಕೆಯ ಕತ್ತು ಸೀಳಿದ್ದಾನೆ.
ಇದರ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಇದರಲ್ಲಿ ಅಮ್ಜದ್ ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಗಲೇ ಅವಳ ಕೂದಲನ್ನು ಹಿಡಿದು ಅನಂತರ ಅವಳ ಕತ್ತು ಸೀಳಿದ್ದನ್ನು ಕಾಣಬಹುದು. ಸ್ಥಳದಲ್ಲಿದ್ದ ಸ್ಥಳೀಯರು ಮಹಿಳೆಯ ಸಹಾಯಕ್ಕೆ ಧಾವಿಸಿದ್ದು, ಕೂಡಲೇ ಆಕೆಯನ್ನು ಬಾಲಸೋರ್ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆಕೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದುದರಿಂದ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಕಟಕ್‌ನ ಬಕ್ಸಿ ಬಜಾರ್ ನಿವಾಸಿ ಅಮ್ಜದ್ ನನ್ನು ಹಿಡಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಸೋರ್ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Bidar News: ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ಅನುಚಿತ ವರ್ತನೆ; ಆರೋಪಿ ಬಂಧನ
ಇದೇ ರೀತಿಯ ಘಟನೆ ಈ ವರ್ಷದ ಮಲ್ಕಂಗಿರಿ ಜಿಲ್ಲೆಯಲ್ಲಿ ನಡೆದಿತ್ತು. ಕಲಿಮೇಲಾ ಬ್ಲಾಕ್‌ನ ಎಂವಿ -66 ಗ್ರಾಮದಲ್ಲಿ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿ ಜಗಳವಾಡಿದ ಅನಂತರ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದನು.