Sirsi News: ವಿಶ್ವವಾವಾಣಿ ಹಾಗೂ ಲೋಕಧ್ವನಿಯ ಬಾಲಗೋಪಾಲ ಸ್ಪರ್ಧೆಯ ಬಹುಮಾನ ವಿತರಣೆ
ವಿಶ್ವವಾಣಿ ಹಾಗೂ ಲೋಕಧ್ವನಿ ಸಹಯೋಗದೊಂದಿಗೆ ಇಂದು ಬಾಲ ಗೋಪಾಲ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ದಾಮೂಲ್ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಉದ್ಘಾಟಿಸಿದರು. ಹರ್ಷ ಪೋಟೋ ಗ್ರಾಫರ್ ಪೋಟೋಗಳ ಆಯ್ಕೆ ಪ್ರಕ್ರಿಯೆ ನಡೆಸಿದೆ.

-

ಶಿರಸಿ: ವಿಶ್ವವಾಣಿ ಹಾಗೂ ಲೋಕಧ್ವನಿ ಸಹಯೋಗದೊಂದಿಗೆ ಇಂದು ಬಾಲ ಗೋಪಾಲ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ದಾಮೂಲ್ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಈಗಿನ ಪೀಳಿಗೆಯ ಮಕ್ಕಳಿಗೆ ತಿಳಿಸಲು ಇಂತಹ ಕಾರ್ಯಕ್ರಮದ ಆಯೋಜನೆ ಅತೀ ಅವಶ್ಯಕ ಎಂದು ಅಭಿಪ್ರಯ ಪಟ್ಟರು. ಶ್ರೀಕೃಷ್ಣ ಮನುಕುಲದ ಆದಿ. ಸಾಕಷ್ಟು ಮಕ್ಕಳಿಗೆ ಕೃಷ್ಣನ ಬಾಲ್ಯ, ಚರಿತ್ರೆ ಯಾವುದೂ ತಿಳಿದಿಲ್ಲ. ಈ ರೀತಿಯಲ್ಲಿ ಮಕ್ಕಳು ಬೆಳೆಯುವಾಗಲೇ ಹಿಂದೂ ಸಂಪ್ರದಾಯದ ಕುರಿತು ತಿಳುವಳಿಕೆಯನ್ನು ನೀಡುತ್ತಿರುವುದು ಉತ್ತಮ ಸಂಗತಿ ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿ ಸ್ಕೊಡ್ವೆಸ್ ಸಂಸ್ಥೆಯ ಸರಸ್ವತಿ ಎನ್ ರವಿ ಮಾತನಾಡಿ, ನಮ್ಮ ಮಕ್ಕಳೆಲ್ಲ ಬಾಲಗೋಪಾಲನಂತೆ ತುಂಟರಾಗಿ ಸಮೃದ್ಧರಾಗಿ ಬೆಳೆಯಬೇಕಿದೆ. ನಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕೆಂದರೆ ಕೃಷ್ಣ ಕಥೆಗಳು ಮಕ್ಕಳಿಗೆ ತಿಳಿಸಬೇಕು. ಅವರಿಗೆ ಕೃಷ್ಣನ ವೇಷವನ್ನು ತೊಡಿಸಿ ನಾವು ಸಂತಸಪಡಬೇಕು ಎಂದು ಹೇಳಿದ್ದಾರೆ. ಹರ್ಷ ಪೋಟೋ ಗ್ರಾಫರ್ ಪೋಟೋಗಳ ಆಯ್ಕೆ ಪ್ರಕ್ರಿಯೆ ನಡೆಸಿದೆ. ಪ್ರಥಮ ಬಹುಮಾನ ವೇದಿಕಾ ಅಕ್ಷಯ ಹೆಗಡೆ ಪಡೆದುಕೊಂಡಿದ್ದು, ಎರಡನೇ ಬಹಮಾನ ಅದಿತಿ ನಾಯ್ಕ, ಮರಾಠಿಕೊಪ್ಪ ಹಾಗೂ ಮೂರನೇ ಬಹುಮಾನ ನಿಹಾನ್ ಶೆಟ್ಟಿ ಹೊನ್ನಾವರ ಪಡೆದುಕೊಂಡಿದ್ದಾರೆ.
ವಿಶ್ವವಾಣಿ ಜಿಲ್ಲಾ ವರದಿಗಾರ್ತಿ ವಿನುತಾ ಹೆಗಡೆ ಸ್ವಾಗತಿಸಿದರು. ಲೋಕಧ್ವನಿ ವರದಿಗಾರ ಸಂದೇಶ ಭಟ್ ನಿರ್ವಹಿಸಿದರು. ಲೋಕಧ್ವನಿಯ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ ಪ್ರಾಸ್ತಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ಪ್ರಾರ್ಥಿಸಿದರು. ಬಹುಮಾನ ಘೋಷಣೆಯನ್ನು ಪತ್ರಕರ್ತ ಪ್ರವೀಣ ಹೆಗಡೆ ನಡೆಸಿಕೊಟ್ಟರು. ಪತ್ರಕರ್ತ ಗಣೇಶ ಮುರೇಗಾರ ವಂದಿಸಿದರು.