ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಶಿರಸಿಯಲ್ಲಿ ಬಾಲಗೋಪಾಲ ಫೋಟೋ ಸ್ಪರ್ಧೆ-2025; ವಿಜೇತರಿಗೆ ಬಹುಮಾನ ವಿತರಣೆ

Sirsi News: ವಿಶ್ವವಾಣಿ ಹಾಗೂ ಲೋಕಧ್ವನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲಗೋಪಾಲ ಫೋಟೋ ಸ್ಪರ್ಧೆ-2025ರಲ್ಲಿ ವೇದಿಕಾ ಅಕ್ಷಯ ಹೆಗಡೆ ಪ್ರಥಮ ಬಹುಮಾನ ಪಡೆದುಕೊಂಡಿದ್ದು, ಅದಿತಿ ನಾಯ್ಕ, ಮರಾಠಿಕೊಪ್ಪ ಎರಡನೇ ಬಹುಮಾನ ಹಾಗೂ ನಿಹಾನ್ ಶೆಟ್ಟಿ ಹೊನ್ನಾವರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಶಿರಸಿಯಲ್ಲಿ ಬಾಲಗೋಪಾಲ ಫೋಟೋ ಸ್ಪರ್ಧೆ-2025; ಬಹುಮಾನ ವಿತರಣೆ

-

Profile Siddalinga Swamy Sep 20, 2025 3:25 PM

ಶಿರಸಿ: ವಿಶ್ವವಾಣಿ ಹಾಗೂ ಲೋಕಧ್ವನಿ ಸಹಯೋಗದಲ್ಲಿ ಶನಿವಾರ ಶಿರಸಿ (Sirsi News) ನಗರದಲ್ಲಿ ಬಾಲಗೋಪಾಲ ಫೋಟೋ ಸ್ಪರ್ಧೆ-2025ರ ಬಹುಮಾನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವೇದಿಕಾ ಅಕ್ಷಯ ಹೆಗಡೆ ಪಡೆದುಕೊಂಡಿದ್ದು, ದ್ವಿತೀಯ ಬಹುಮಾನವನ್ನು ಅದಿತಿ ನಾಯ್ಕ, ಮರಾಠಿಕೊಪ್ಪ, ತೃತೀಯ ಬಹುಮಾನವನ್ನು ನಿಹಾನ್ ಶೆಟ್ಟಿ ಹೊನ್ನಾವರ ಅವರು ಪಡೆದುಕೊಂಡಿದ್ದಾರೆ.

ಧಾಮುಲ್ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ರಾತ್ರಿ ಮಲಗುವ ಹೊತ್ತಲ್ಲಾದರೂ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನಮ್ಮ ಪರಂಪರೆಯ ಕಥೆಗಳನ್ನು ಹೇಳಿ ಆಸಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

Sirsi News 1

ಕಾರ್ಯಕ್ರಮದಲ್ಲಿ ಸ್ಕೊಡ್ವೆಸ್ ಸಂಸ್ಥೆಯ ಸರಸ್ವತಿ ಎನ್ ರವಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕೆಂದರೆ ಕೃಷ್ಣನ ಕಥೆಗಳು ಮಕ್ಕಳಿಗೆ ತಿಳಿಸಬೇಕು. ಅವರಿಗೆ ಕೃಷ್ಣನ ವೇಷವನ್ನು ತೊಡಿಸಿ ನಾವು ಸಂತಸ ಪಡಬೇಕು. ಇಂಥ ಸ್ಪರ್ಧೆಗಳು ಅವರಿಗೆ ಸ್ಪೂರ್ತಿಯಾಗಲಿವೆ. ಇದಕ್ಕೆ ನಮ್ಮ ಸಹಯೋಗವೂ ಇರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.

ಛಾಯಾಗ್ರಾಹಕ ಹರ್ಷ ಅವರು ಫೋಟೋಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಈ ವೇಳೆ ಮಾತನಾಡಿದ ಅವರು, ಇಂಥ ಸ್ಪರ್ಧೆಗಳಲ್ಲಿ ಆಯ್ಕೆ ಮಾಡುವುದು ಕಷ್ಟದಾಯಕ ಆದರೂ ಆಯ್ಕೆ ಮಾಡಿ ಕೊಟ್ಟಿದ್ದೇನೆ. ಇಂಥ ಕಾರ್ಯಕ್ರಮಗಳು ನಡೆಯುತ್ತಲೇ ಇರಬೇಕು ಆದಾಗ ಮಾತ್ರ ಮಕ್ಕಳಲ್ಲೂ ಉತ್ಸಾಹ ಹೆಚ್ಚುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Navaratri Jewel trend 2025: ನವರಾತ್ರಿ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಜ್ಯುವೆಲರಿಗಳಿವು

ವಿಶ್ವವಾಣಿ ಜಿಲ್ಲಾ ವರದಿಗಾರ್ತಿ ವಿನುತಾ ಹೆಗಡೆ ಸ್ವಾಗತಿಸಿದರು. ಲೋಕಧ್ವನಿ ವರದಿಗಾರ ಸಂದೇಶ ಭಟ್ ನಿರ್ವಹಿಸಿದರು. ಲೋಕಧ್ವನಿಯ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಧರ ಕಬ್ನಳ್ಳಿ ಪ್ರಾರ್ಥಿಸಿದರು. ಬಹುಮಾನ ಘೋಷಣೆಯನ್ನು ಪತ್ರಕರ್ತ ಪ್ರವೀಣ ಹೆಗಡೆ ನಡೆಸಿಕೊಟ್ಟರು. ಪತ್ರಕರ್ತ ಗಣೇಶ ಮುರೇಗಾರ ವಂದಿಸಿದರು.