ಮೈಸೂರು : ಮೈಸೂರಿನ (Mysuru news) ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಕೆಲವು ಹುಡುಗರು ಸೇರಿಕೊಂಡು ಬರ್ಬರವಾಗಿ ರ್‍ಯಾಗಿಂಗ್ (Ragging Case) ಮಾಡಿದ್ದಾರೆ. ಹಲ್ಲೆಗೊಳಗಾದ (Assault) ಹುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆ ಪೊಲೀಸರು ಇದೀಗ ಶಾಲಾ ಆಡಳಿತ ಮಂಡಳಿ A1 ಹಾಗೂ ಮೂವರು ಬಾಲಕರ ಮೇಲೆ J1, J2, J3 ಆಗಿ ಎಫ್‌ಐಆರ್ (FIR) ದಾಖಲಿಸಿದ್ದಾರೆ.
13 ವರ್ಷದ ಬಾಲಕನ ಮೇಲೆ ಮೂವರಿಂದ ಹಲ್ಲೆ ನಡೆದಿದ್ದು, ಬಾಲಕನ ಮರ್ಮಾಂಗಕ್ಕೆ ಮೂವರು ಬಾಲಕರು ಒದ್ದಿದ್ದಾರೆ. ಹಲ್ಲೆಯಿಂದ ಬಾಲಕನ ಮರ್ಮಾಂಗಕ್ಕೆ ಗಂಭೀರವಾದ ಗಾಯಗಳಾಗಿವೆ. ಎಂಟನೇ ತರಗತಿಗೆ ಬಾಲಕ ಕ್ಲಾಸ್ ಲೀಡರ್ ಆಗಿದ್ದ. ಮೂವರು ಬಾಲಕರು ಇವನನ್ನು ಪ್ರತಿನಿತ್ಯ ಹಣ ಕೊಡು, ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೆ ಕೇಳು ಎಂದು ಪೀಡಿಸುತ್ತಿದ್ದರು. ಅಕ್ಟೋಬರ್ 25ರಂದು ಬಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಶೌಚಾಲಯದಲ್ಲಿ ಬಾಲಕನ ಮರ್ಮಾಂಗಕ್ಕೆ ಒದ್ದಿದ್ದಾರೆ. ಬಾಲಕನ ಸ್ಥಿತಿ ಕಂಡು ಪೋಷಕರು ಹೌಹಾರಿದ್ದಾರೆ.
ಈ ವಿಚಾರವಾಗಿ ಬಾಲಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ ನಾನು ಶೌಚಾಲಯಕ್ಕೆ ಹೋದೆ. ಶೌಚಾಲಯದಲ್ಲಿ, ಶಿಕ್ಷಕರಿಗೆ ನಮ್ಮ ಬಗ್ಗೆ ಕಂಪ್ಲೇಂಟ್ ಮಾಡುತ್ತೀಯಾ ಅಂತ ಹೇಳಿ ಒದ್ದಿದ್ದಾರೆ. ಶಿಕ್ಷಕರಿಗೆ ನಮ್ಮ ತಾಯಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 3000 ರೂ. ದುಡ್ಡು ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ. ನನ್ನನ್ನು ಕ್ಲಾಸ್ ಲೀಡರ್ ಮಾಡಿದಾಗ ಅವರ ಮೇಲೆ ಶಿಕ್ಷಕರಿಗೆ ದೂರು ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ.
ಇದನ್ನೂ ಓದಿ: Chikkamagaluru News: ಜಮೀನು ವಿವಾದ; ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!
ಲಾರಿ ಚಾಲಕನ ಅವಾಂತರಕ್ಕೆ ಕಂದಮ್ಮ ಬಲಿ
ಬೆಂಗಳೂರು: ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ (Wall Collapse) ಬಲಿಯಾಗಿರುವ ಘಟನೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ನವಂಬರ್ 7 ರಂದು ಸಂಜೆ 3:11 ಸುಮಾರಿಗೆ ಈ ಘಟನೆ ನಡೆದಿದ್ದು, ಸಿಮೆಂಟ್ ಮಿಕ್ಸರ್ ಲಾರಿ 1 ವರ್ಷ 8 ತಿಂಗಳ ಮುದ್ದಾದ ಮಗು ಪ್ರಣವ್ನ ಬಲಿ ಪಡೆದಿದೆ. ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ಬರ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ, ಪ್ರಣವ್ ಮನೆಯ ರಸ್ತೆಯಲ್ಲೇ ಹಾದು ಹೋಗ್ತಿತ್ತು. ಈ ವೇಳೆ (Wall Collapse) ಲಾರಿಯು ಮೇಲಿದ್ದ ವಿದ್ಯುತ್ ತಂತಿಗೆ ತಾಗಿದೆ. ಇದನ್ನ ಅರಿಯದ ಚಾಲಕ ತಂತಿಯನ್ನು ಎಳೆದುಕೊಂಡೆ ಹೋಗಿದ್ದಾನೆ.
ವೈರಿಂಗ್ ಕಂಬ ಕಿತ್ತು ಬಂದು ಮನೆಯ ಗೋಡೆ ಮೇಲೆ ಕುಸಿದಿದೆ. ಈ ವೇಳೆ ಮನೆ ಕಾಂಪೌಂಡ್ನಲ್ಲಿ ಆಟ ಆಡ್ತಿದ್ದ ಏನೂ ಅರಿಯದ ಮಗು ಮೇಲೆ ಮನೆ ಗೋಡೆ ಅವಶೇಷ ಬಿದ್ದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಈ ಘಟನೆ ಬಳಿಕ ಕಾಂಕ್ರೀಟ್ ಮಿಕ್ಸರ್ ಚಾಲಕ ಪರಾರಿಯಾಗಿದ್ದಾನೆ. ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಮಗು ಪ್ರಣವ್ ಸಾವನ್ನಪ್ಪಿದ ಬಾಲಕ. ಮಗನನ್ನು ಕಳೆದುಕೊಂಡ ಪೋಷಕರು ಗೋಳಿಡುತ್ತಿದ್ದಾರೆ. ಸದ್ಯ ಬೌರಿಂಗ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹವನ್ನ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: Assault Case: ಮಹಿಳೆಯ ಖಾಸಗಿ ಅಂಗಕ್ಕೆ ಹಲ್ಲೆ ದೂರು, ವರ್ತೂರು ಪೊಲೀಸರ ಮೇಲೆ ಪ.ಬಂಗಾಳ ಸಿಎಂ ಕಚೇರಿ ಅಸಮಾಧಾನ