ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PM Narendra Modi: ಮೈಸೂರಿನ ವಿವೇಕ ಸ್ಮಾರಕ ಯುವಕರಿಗೆ ಪ್ರೇರಣೆ ನೀಡಲಿದೆ: ಪ್ರಧಾನಿ ಮೋದಿ

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಯುವಮಂತ್ರ ಜಪಿಸಿದ ಪ್ರಧಾನಿಗಳು, ಯುವಕರಿಗೆ ಪ್ರೋತ್ಸಾಹ ನೀಡುವ ದೇಶ ಅಭಿವೃದ್ಧಿ ಹೊಂದುತ್ತದೆ. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕಿದೆ

ಮೈಸೂರು, ಆ.1: ಮೈಸೂರು ಆಧುನಿಕ ಭಾರತದ ಚೈತನ್ಯದ ಪ್ರತೀಕವಾಗಿದೆ. ಇದು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದ್ದು, ತನ್ನ ಪರಂಪರೆಯನ್ನು ಕಾಪಾಡಿಕೊಂಡುಬಂದಿದೆ. ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ್ದು ನನ್ನ ಸೌಭಾಗ್ಯ. ಇದು ಸ್ಮಾರಕ ಯುವಕರಿಗೆ ಪ್ರೇರಣೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ನಗರದ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಮಾತನಾಡಿದರು. ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ ಅವರು, ಮೊದಲಿಗೆ ನಾನು ಚಾಮುಂಡೇಶ್ವರಿ ತಾಯಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರಿಗೂ ರಾಮಕೃಷ್ಣ ಆಶ್ರಮದ ಜತೆ ನಂಟಿದೆ. ವಿವೇಕಾನಂದರ ಜೀವನದಲ್ಲಿ ಮೈಸೂರಿನ ಅತಿದೊಡ್ಡ ಕೊಡುಗೆ ಇದೆ. ಮೈಸೂರಿನ ಮಹಾರಾಜರು ವಿವೇಕಾನಂದರಿಗೆ ಸಹಾಯ ಮಾಡಿದ್ದರು. ಇನ್ನು ರಾಮಕೃಷ್ಣ ಆಶ್ರಮದ ಸೇವೆಯೂ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಭಾರತದ ಆರ್ಥಿಕತೆ ಇಂದು ತುಂಬಾ ವೇಗವಾಗಿ ಬೆಳೆಯುತ್ತಿದೆ. ಮೊಬೈಲ್‌ ಉತ್ಪಾದನೆ, ಎಐ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಯುವಕರು ಇತಿಹಾಸ ಸೃಷ್ಟಿಸುತ್ತಿದ್ದಾರೆ. ಇದು ಯಾರಿಂದ ಆಗಿರೋದು? ಭಾರತದ ಯುವಜನತೆಯ ಸಾಮರ್ಥ್ಯದಿಂದ ಇದೆಲ್ಲಾ ಸಾಧ್ಯವಾಗಿದೆ.



Viveka Smaraka in Mysuru: ಮೈಸೂರಿನಲ್ಲಿ 45 ಕೋಟಿ ವೆಚ್ಚದ ʼವಿವೇಕ ಸ್ಮಾರಕʼ ಉದ್ಘಾಟಿಸಿದ ಪ್ರಧಾನಿ ಮೋದಿ

ಯುವಕರಿಗೆ ಪ್ರೋತ್ಸಾಹ ನೀಡುವ ದೇಶ ಅಭಿವೃದ್ಧಿ ಹೊಂದುತ್ತದೆ. ದೇಶದಲ್ಲಿ ಕಳೆದ 12 ವರ್ಷದಲ್ಲಿ 650 ವಿವಿಗಳನ್ನು ಸ್ಥಾಪಿಸಲಾಗಿದೆ. 4 ಸಾವಿರಕ್ಕೂ ಹೆಚ್ಚು ಐಟಿಐ, 9 ಐಐಎಂ, 7ಐಐಟಿ, 813 ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ಎಂಬಿಬಿಎಸ್‌ ಸೀಟ್‌ಗಳ ಸಂಖ್ಯೆ 1.40 ಲಕ್ಷಕ್ಕೆ ಹೆಚ್ಚಳವಾಗಿದೆ. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕಿದೆ, ಯುವಕರ ಕೊಡುಗೆಯಿಂದ ದೇಶ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.