#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Robbery Case: ಹಾಡಹಗಲೇ ಮೈಸೂರಿನಲ್ಲಿ ಉದ್ಯಮಿ ದರೋಡೆ, ಕಾರು- ಹಣ ಸಮೇತ ದುಷ್ಕರ್ಮಿಗಳು ಪರಾರಿ

ಜನನಿಬಿಡ ಪ್ರದೇಶದಲ್ಲಿ ಉದ್ಯಮಿಯ ಕಾರು ನಿಲ್ಲಿಸಿ ಹಣವನ್ನು ದೋಚಿ ಅವರ ಕಾರಿನ ಸಮೇತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಹಾಡಹಗಲೇ ಮೈಸೂರಿನಲ್ಲಿ ಉದ್ಯಮಿ ದರೋಡೆ, ಕಾರು- ಹಣ ಸಮೇತ ದುಷ್ಕರ್ಮಿಗಳು ಪರಾರಿ

ಹರೀಶ್‌ ಕೇರ ಹರೀಶ್‌ ಕೇರ Jan 20, 2025 1:31 PM

ಮೈಸೂರು: ಮೈಸೂರಿನಲ್ಲಿ (Mysuru news) ಬೆಚ್ಚಿ ಬೀಳಿಸುವಂಥ ಘಟನೆ ನಡೆದಿದೆ. ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಹಾಡಹಗಲೇ ಕಾರು ಅಡ್ಡಗಟ್ಟಿ ದರೋಡೆ (Robbery Case) ಮಾಡಿದ್ದಾರೆ. ಉದ್ಯಮಿಯ ಬಳಿ ಇದ್ದ ಹಣ ಕಸಿದುಕೊಂಡು ಕಾರು ಸಮೇತ ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ರಾಜ್ಯದ ಹಲವು ಕಡೆ ದರೋಡೆ ಸುದ್ದಿಗಳು ಕೇಳಿಬರುತ್ತಿರುವ ನಡುವೆಯೇ ಈ ಘಟನೆ ನಡೆದಿದೆ. ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೋವಾ ಕಾರು, ಹಣ ಎಗರಿಸಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಎರಡು ಕಾರುಗಳಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಉದ್ಯಮಿ ಸೂಫಿ ಅವರ ಕಾರು ಕಿತ್ತುಕೊಂಡ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮೈಸೂರಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉದ್ಯಮಿ ಸೂಫಿಯಿಂದ ಜಯಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಹಲವು ದರೋಡೆ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಬೀದರ್​​ನಲ್ಲಿ ಎಟಿಎಂಗೆ ಹಣ ತುಂಬಿಸುವವರ ಮೇಲೆ ಶೂಟೌಟ್ ನಡೆಸಿ ಇಬ್ಬರನ್ನು ಸಾಯಿಸಿ ಹಣ ದರೋಡೆ ಮಾಡಲಾಗಿತ್ತು. ಮಂಗಳೂರಿನ ಉಳ್ಳಾಲ ಕೋಟೆಕಾರು ಎಂಬಲ್ಲಿ ಬ್ಯಾಂಕ್ ದರೋಡೆ ಮಾಡಲಾಗಿತ್ತು. ಇವುಗಳ ಬೆನ್ನಲ್ಲೇ ಮೈಸೂರಿನಲ್ಲಿಯೂ ಹಾಡಹಗಲೇ ಈ ಕೃತ್ಯ ನಡೆದಿದೆ.