ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mysuru Pub Fire: ಮೈಸೂರು ಪಬ್‌ ಅಗ್ನಿ ಅವಘಡದಲ್ಲಿ ಸ್ಯಾಂಡಲ್‌ವುಡ್‌ ನಟನಿಗೆ ತೀವ್ರ ಗಾಯ; ಜಿಗಿದು ಪ್ರಾಣ ರಕ್ಷಿಸಿಕೊಳ್ಳಲು ಯತ್ನಿಸಿದ ಗ್ರಾಹಕರು! video

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಫಾಕ್ಸ್​ ಡೆನ್​​ ಪಬ್​​​​ ಅನ್ನು ಆಫ್ರಿಕನ್ ಸ್ಟೈಲ್​ನಲ್ಲಿ ನಿರ್ಮಾಣ ಮಾಡಲಾಗಿತ್ತು. ಹುಲ್ಲು, ಗೋಣಿ ತಾಟು, ವುಡ್ ಹೆಚ್ಚಾಗಿ ಬಳಸಿ ನಿರ್ಮಾಣವಾಗಿತ್ತು. ದಟ್ಟವಾಗಿ ಬೆಂಕಿ ಹೊತ್ತಿ ಉರಿಯಲು ಇದೇ ಕಾರಣ ಎನ್ನಲಾಗಿದೆ. ದುರಂತದಲ್ಲಿ ಇಬ್ಬರು, ಮೃತಪಟ್ಟಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ.

ಮೈಸೂರಿನ ಫಾಕ್ಸ್​ ಡೆನ್ ಪಬ್‌ ಮಾಲೀಕ ಹಾಗೂ ನಟ ಪ್ರೀತಮ್.

ಮೈಸೂರು: ನಗರದ ಫಾಕ್ಸ್​ ಡೆನ್​​​ ಪಬ್ ಅಗ್ನಿ ಅವಘಡದಲ್ಲಿ ಸೋಮವಾರ ಮಧ್ಯಾಹ್ನ ಇಬ್ಬರು ಸಜೀವ ದಹನವಾಗಿ, 6 ಮಂದಿ ಗಾಯಗೊಂಡಿದ್ದರು. ಇನ್ನು ಈ ಅಗ್ನಿ ದುರಂತದಲ್ಲಿ ಕನ್ನಡ ಚಲನಚಿತ್ರ ನಟರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಹ್ಮ ವಿಷ್ಣು ಮಹೇಶ್ವರ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದ ಪ್ರೀತಮ್ ಅವರ ಒಡೆತನದ ಫಾಕ್ಸ್​ ಡೆನ್​​ ರೆಸ್ಟೋಬಾರ್​ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಪಬ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಪಬ್​ನಲ್ಲಿದ್ದ ಮಾಲೀಕ ಪ್ರೀತಮ್​​ಗೂ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Mysuru Pub Fire (2)

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಫಾಕ್ಸ್​ ಡೆನ್​​ ಪಬ್​​​​ ಅನ್ನು ಆಫ್ರಿಕನ್ ಸ್ಟೈಲ್​ನಲ್ಲಿ ನಿರ್ಮಾಣ ಮಾಡಲಾಗಿತ್ತು, ಹುಲ್ಲು, ಗೋಣಿ ತಾಟು, ವುಡ್ ಹೆಚ್ಚಾಗಿ ಬಳಸಿ ನಿರ್ಮಾಣವಾಗಿತ್ತು. ಬೆಂಕಿ ಹೊತ್ತಿ ಉರಿಯಲು ಇದೇ ಕಾರಣ ಎನ್ನಲಾಗಿದೆ.

Mysuru Fire accident: ಮೈಸೂರಿನ ಪಬ್‌ನಲ್ಲಿ ಬೆಂಕಿ ಅವಘಡ; ಇಬ್ಬರ ಸಾವು, ಏಳು ಮಂದಿಗೆ ಗಾಯ



ಅವಘಡ ಸಂಭವಿಸಿದ ವೇಳೆ ಹೋಟೆಲ್‌ನಲ್ಲಿ 25ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದ್ದು, ದಟ್ಟ ಹೊಗೆ ಆವರಿಸಿದ್ದರಿಂದ ಕೆಲವರು ಆತಂಕಗೊಂಡು ಮೇಲಂತಸ್ತಿನಿಂದ ಜಿಗಿದು ಪಾರಾಗಲು ಯತ್ನಿಸಿದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.