ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

karnataka Hijab row: ಶಾಲೆಗಳಿಗೆ ಕೇಸರಿ ಶಾಲು ಕೂಡ ಹಾಕಿಕೊಂಡು ಬರುವಂತಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಸರ್ಕಾರ ಮತ್ತೆ ಅವಕಾಶ ನೀಡಿದೆ. ಹೀಗಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಶಾಲಾ, ಕಾಲೇಜುಗಳಲ್ಲಿ ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಮೈಸೂರು: ಶಾಲೆಗಳಿಗೆ ಕೇಸರಿ ಶಾಲು (saffron shawl) ಹಾಕಿಕೊಂಡು ಬರುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದ್ದು, ನಾವು ಹಿಜಬ್‌ಗೆ ಮಾತ್ರ ಅವಕಾಶ ಕೊಟ್ಟಿಲ್ಲ. ಜನಿವಾರ, ಶಿವಧಾರ, ಪೇಟಕ್ಕೂ ಅವಕಾಶ ಕೊಟ್ಟಿದ್ದೇವೆ. ಆದರೆ ಹೊಸ ರೂಪದ ಪೇಟಕ್ಕೆ ಅವಕಾಶ ಇಲ್ಲ. ಮೊದಲಿನಿಂದ ಯಾವ ಪೇಟಗಳಿವೆ ಆ ಪೇಟಗಳಿಗಷ್ಟೇ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್‌ ಭೇಟಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನ್ನನ್ನ ಹೈಕಮಾಂಡ್ ಕರೆದಿಲ್ಲ. ಹೀಗಾಗಿ ನಾನು ಸದ್ಯಕ್ಕೆ ದೆಹಲಿಗೆ ಹೋಗುವುದಿಲ್ಲ. ಮೇ 15 ರಂದು ದೆಹಲಿಗೆ ಹೋಗುತ್ತೇನೆಂದು ಹೇಳಿದವರು ಯಾರು? ನಿಶ್ಚಿತ ದಿನಾಂಕವನ್ನು ನೀವೆ ಯಾಕೆ ನಿಗದಿ ಮಾಡಿದ್ದೀರಿ? ಹೈಕಮಾಂಡ್ ಕರೆದಾಗ ಹೋಗುತ್ತೇನೆ. ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿದರೆ, ಪುನಾರಚನೆ ಮಾಡುತ್ತೇನೆ ಎಂದರು.

ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು, ಎರಡನೇ ಬಾರಿ ಸಿಎಂ ಆದ ಮೇಲೆ ಮೊದಲ ಬಾರಿ ಮೈಸೂರು ನಗರದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

12 ನೇ ತರಗತಿಯವರೆಗೆ ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು: ಸಿಎಂ ಸಿದ್ದರಾಮಯ್ಯ

ಕೆ.ಎಸ್.ಐ.ಸಿ ಹತ್ತಿರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನಡೆಯುತ್ತಿರುವ ಯು.ಜಿ ಕೇಬಲಿಂಗ್ ಕಾಮಗಾರಿ, ಮಾನಂದವಾಡಿ ರಸ್ತೆಯ ಎನ್.ಐ ಕಾಲೇಜಿನ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ, ಮೆಟ್ರೋಪೋಲ್ ಸರ್ಕಲ್ ಬಳಿ ಕೆ.ಹೆಚ್.ಬಿ ಮಹಾರಾಣಿ ಕಾಲೇಜು ಕಾಮಗಾರಿ ಪರಿಶೀಲನೆ, ಬನ್ನಿ ಮಂಟಪದ ಹತ್ತಿರದ ಹೊಸ ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿ ಸಿಎಂ ಪರಿಶೀಲಿಸಿದರು. ಸಿಎಂಗೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.