ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tamannaah Bhatia: ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ನಟಿ ತಮನ್ನಾ ಹೇಳಿದ್ದೇನು?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ವೈಯಕ್ತಿಕ ವಿಚಾರದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ನಟಿ ತಮನ್ನಾ ವಿರಾಟ್ ಕೊಹ್ಲಿ ಹಾಗೂ ಅಬ್ದುಲ್ ರಜಾಕ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಕಳೆದ ಕೆಲ ವರ್ಷದಿಂದಲೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಟಿ ತಮನ್ನಾ ಇದುವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ. ಇದೀಗ ವಿರಾಟ್ ಕೊಹ್ಲಿ ಹಾಗೂ ಅಬ್ದುಲ್ ರಜಾಕ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ನಟಿ ತಮನ್ನಾ ಅವರೇ ಸ್ಪಷ್ಟೀಕರಿಸಿದ್ದು ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಡೇಟಿಂಗ್- ನಟಿ ತಮನ್ನಾ ಹೇಳಿದ್ದೇನು?

Profile Pushpa Kumari Aug 4, 2025 2:03 PM

ನವದೆಹಲಿ: ಬಾಹುಬಲಿ, ಬಬ್ಲಿ ಬೌನ್ಸರ್, ಸೈರಾ ನರಸಿಂಹ ರೆಡ್ಡಿ, ಹ್ಯಾಪಿಡೇಸ್ ಸಿನಿಮಾ ಖ್ಯಾತಿಯ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಭಾರತೀಯ ಚಿತ್ರರಂಗದಲ್ಲಿ ತನ್ನ ಅದ್ಭುತ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ. ಅಂತೆಯೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ವೈಯಕ್ತಿಕ ವಿಚಾರದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ನಟಿ ತಮನ್ನಾ ವಿರಾಟ್ ಕೊಹ್ಲಿ ಹಾಗೂ ಅಬ್ದುಲ್ ರಜಾಕ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಕಳೆದ ಕೆಲ ವರ್ಷದಿಂದ ಲೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಟಿ ತಮನ್ನಾ ಇದುವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ. ಇದೀಗ ವಿರಾಟ್ ಕೊಹ್ಲಿ ಹಾಗೂ ಅಬ್ದುಲ್ ರಜಾಕ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ನಟಿ ತಮನ್ನಾ ಅವರೇ ಸ್ಪಷ್ಟೀಕರಿಸಿದ್ದು ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ತಮನ್ನಾ ಭಾಟಿಯಾ ಕೆಲ ಸೆಲೆಬ್ರೆಟಿಗಳ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಅನೇಕ ವರ್ಷದಿಂದಲೂ ಕೇಳಿ ಬರುತ್ತಿದೆ. ಭಾರತೀಯ ಕ್ರಿಕೆಟಿಗರಲ್ಲಿ ಖ್ಯಾತರಾದ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ತಮನ್ನಾ ಭಾಟಿಯಾ ಇತ್ತೀಚೆಗಷ್ಟೇ ತನ್ನ ಬಾಯ್‌ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಿತ್ತು. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಭಾಗಿಯಾದಾಗ ಈ ಎಲ್ಲ ಗಾಸಿಪ್‌ಗಳಿಗೂ ನಟಿ ಸ್ಪಷ್ಟನೆ ನೀಡಿದ್ದಾರೆ‌.

ಇದನ್ನು ಓದಿ:Loose Maada Movie: ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ʼಲೂಸ್ ಮಾದʼ ಚಿತ್ರಕ್ಕೆ ಚಾಲನೆ

ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ನಟಿ ತಮನ್ನಾ ಭಾಟಿಯಾ ಅವರು ಕೊಹ್ಲಿ ಜೊತೆ ಡೇಟಿಂಗ್ ವದಂತಿಗಳು ನನಗೆ ತುಂಬಾ ಬೇಸರ ತಂದಿದೆ. 2010ರಲ್ಲಿ ಕಮರ್ಷಿಯಲ್ ಜಾಹೀರಾತಿನ ಶೂಟ್‌ಗಾಗಿ ಮಾತ್ರವೇ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿದ್ದೆ. ಅದು ಬ್ರ್ಯಾಂಡ್ ಪ್ರಮೋಶನ್ ಶೂಟ್ ಆಗಿದ್ದು ಅದರ ಬಳಿಕ ವಿರಾಟ್ ಕೊಹ್ಲಿಯನ್ನು ಎಂದಿಗೂ ನಾನು ಭೇಟಿಯಾಗಿಲ್ಲ. ಒಂದೇ ಒಂದು ದಿನ ಕಾಲ್ ಮಾಡಿ ಮಾತನಾಡಿದವಳೂ ಅಲ್ಲ. ಹಾಗಿದ್ದರೂ ಈ ವಿಚಾರ ನನಗೆ ಮಾನಸಿಕ ಖಿನ್ನತೆ ಅನುಭವಿಸುವಂತೆ ಮಾಡಿದೆ ಎಂದು ತಮನ್ನಾ ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ಬಳಿಕ ಪಾಕಿಸ್ತಾನ ಕ್ರಿಕೆಟಿಗ ಅಬ್ದುಲ್ ರಜಾಕ್‌ಗೂ ನನಗೂ ಸಂಬಂಧ ಇದೆ ಎಂಬ ಗಾಸಿಪ್ ಆಗಿದ್ದು ಅದರ ಬಗ್ಗೆಯೂ ನನಗೆ ಬಹಳ ಬೇಸರವಿದೆ.‌ ನಾನು ಪಾಕಿಸ್ತಾನ ಕ್ರಿಕೆಟಿಗ ಅಬ್ದುಲ್ ರಜಾಕ್‌ ಅವರನ್ನು ಆಭರಣದ ಮಳಿಗೆ ಉದ್ಘಾಟನೆಯ ಸಂದರ್ಭದಲ್ಲಿ ಭೇಟಿಯಾಗಿದ್ದೆ. ಉದ್ಘಾಟನೆಗಾಗಿ ನನಗೂ ಹಾಗೂ ಕ್ರಿಕೆಟಿಗ ಅಬ್ದುಲ್ ರಜಾಕ್‌ಗೂ ಆಹ್ವಾನ ನೀಡಲಾಗಿತ್ತು. ಆದರೆ ಇದನ್ನೇ ಡೇಟಿಂಗ್ ಎಂದು ಗಾಸಿಪ್ ಮಾಡಿದರು. ಇನ್ನು ಕೆಲವರು ನಾನು ಅವರನ್ನು ಮದುವೆ ಆಗಿದ್ದೇನೆ ಎಂದೆಲ್ಲ ಗಾಸಿಪ್ ಮಾಡಿದರು ಆದರೆ ಇವೆಲ್ಲವೂ ಸುಳ್ಳು ಎಂದು ತಮನ್ನಾ ಭಾಟಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ನಟಿ ತಮನ್ನಾ ಅವರಿಗೆ ತಮಿಳು, ತೆಲುಗು ಹಾಗೂ ಬಾಲಿವುಡ್ ನಲ್ಲಿ ಉತ್ತಮ ಆಫರ್ಸ್ ಗಳು ಬರುತ್ತಿವೆ. ಆಂಡಳ್ ರಮೇಶ್ ನಿರ್ದೇಶನದ 'ಕಾತು ಕರುಪ್ಪು' ಸಿನಿಮಾದಲ್ಲಿ ನಟಿ ತಮನ್ನಾ ನಾಯಕಿಯಾಗಿ ಮಿಂಚಲಿದ್ದಾರೆ. ಇದಾದ ಬಳಿಕ 'ದೆಟ್ ಇಸ್ ಮಹಾಲಕ್ಷ್ಮೀ', 'ಎನ್ ಎಂದರು ಕಾದಲ್ ಎನ್ ಬೇನ್' ಸಿನಿಮಾಗಳನ್ನು ಕೂಡ ಮಾಡಲಿದ್ದಾರೆ.