ಬೆಂಗಳೂರು, ನ. 28: 12 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಧರಣಿ ಮುಕ್ತಾಯವಾಗಿದೆ. ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಸರ್ಕಾರ 2 ಸಾವಿರ ರೂಪಾಯಿ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದ್ದರಿಂದ ಆಶಾ ಕಾರ್ಯಕರ್ತೆಯರ ಆಹೋರಾತ್ರಿ ಧರಣಿ ಅಂತ್ಯಗೊಂಡಿದೆ. ಮಾಸಿಕ ವೇತನ 15 ಸಾವಿರ ರೂಪಾಯಿಗೆ ಏರಿಸಬೇಕೆಂದು ಆಗ್ರಹಿಸಿದ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಚಳಿ, ಮಳೆ, ಬಿಸಲು ಎನ್ನದೆ ಆಹೋರಾತ್ರಿ ಧರಣಿ ಕೂತಿದ್ದರು. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿರುವ ಸಂಧಾನ ಯಶಸ್ವಿಯಾಗಿದೆ.
ಸದ್ಯ ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂಪಾಯಿ ವೇತನ ಲಭಿಸುತ್ತಿದೆ. ಇದೀಗ 2 ಸಾವಿರ ರೂಪಾಯಿ ಹೆಚ್ಚಳದೊಂದಿಗೆ 10 ಸಾವಿರ ರೂಪಾಯಿ ವೇತನ ದೊರೆಯಲಿದೆ. 2027ರ ಜನವರಿಯಿಂದಲೇ ಪರಿಷ್ಕೃತ ವೇತನ ಜಾರಿಗೆ ಬರಲಿದೆ.