ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raichur News: ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

Snake Bite: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದೆ. ಮಾರ್ಚ್ 8ರಂದು ರಾತ್ರಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವು ಕಡಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮನೆ ಮುಂದೆ ಮಲಗಿದ್ದ ವೃದ್ಧೆ ಬಳಿ ಬಂದ ಹಾವು.

ರಾಯಚೂರು: ಬೇಸಿಗೆ ಹಿನ್ನೆಲೆಯಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಾಜ್ಯದ ಜನರು ಹೈರಾಣಾಗುತ್ತಿದ್ದಾರೆ. ಇನ್ನು ಸೆಕೆ ತಾಳಲಾರದೆ ಮನೆ ಹೊರಗೆ ಬಂದು ಮಲಗುವ ಜನರು ಸ್ವಲ್ಪ ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ, ಮನೆ ಮುಂದೆ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿರುವ ಘಟನೆ (Snake Bite) ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ನಡೆದಿದೆ.

ಮಾರ್ಚ್ 8ರಂದು ರಾತ್ರಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಲ್ಲಮ್ಮ ಎಂಬ ವೃದ್ಧೆ ಬೇಸಿಗೆ ಹಿನ್ನೆಲೆ ಮನೆಯ ಹೊರಾಂಗಣದಲ್ಲಿ ಮಲಗಿದ್ದರು. ಈ ವೇಳೆ ಕಪ್ಪೆಯನ್ನು ತಿನ್ನಲು ಬಂದ ಹಾವು ಹಾಸಿಗೆ ಬಳಿ ಬಂದಾಗ ಯಲ್ಲಮ್ಮಗೆ ಕಚ್ಚಿದೆ. ಹಾವು ಕಡಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾವು ಕಚ್ಚುತ್ತಿದ್ದಂತೆ ಯಲ್ಲಮ್ಮ ಗಾಬರಿಕೊಂಡು ಎದ್ದು ನೋಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಹಾವು ಇದ್ದದ್ದನ್ನು ಕಂಡು, ಅದನ್ನು ಓಡಿಸಿದ್ದಾರೆ. ಬಳಿಕ ವೃದ್ದೆ ಮನೆಯೊಳಗೆ ಹೋಗಿ ಕುಟುಂಬಸ್ಥರಿಗೆ ತಿಳಿಸಿದ್ದು, ತಕ್ಷಣ ಆಕೆಯನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿದ್ಯಾರ್ಥಿನಿಗೆ ಹಾವು ಕಡಿತ; ಬಾಯಿಯಿಂದ ವಿಷ ತೆಗೆದು ಪ್ರಾಣ ಉಳಿಸಿದ ಶಿಕ್ಷಕ

ಚಿತ್ರದುರ್ಗ: ಶಾಲಾ ಆವರಣದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿಗೆ ಹಾವು ಕಚ್ಚಿರುವ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ(6) ಹಾವು ಕಡಿತಕ್ಕೊಳಗಾದ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಶಾಲಾ ಆವರಣದಲ್ಲಿ ಕುಳಿತಿದ್ದಾಗ ನಾಗರಹಾವು ಕಡಿದಿದೆ. ಈ ವೇಳೆ ಶಾಲಾ ಶಿಕ್ಷಕ ರವಿಶಂಕರ್ ಬಾಯಿಂದ ವಿಷ ತೆಗೆಯಲು ಯತ್ನಿಸಿದ್ದಾರೆ.

ಬಾಲಕಿಗೆ ಹಾವು ಕಚ್ಚಿ ವಿಷ ದೇಹದೊಳಗೆ ವೇಗವಾಗಿ ಹರಡುತ್ತಿರುವ ಲಕ್ಷಣಗಳು ಕಂಡುಬಂದ ಹಿನ್ನಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಪಾಯ ಹೆಚ್ಚಾಗಬಹುದು ಎಂದು ಅಂದಾಜಿಸಿದ ಶಿಕ್ಷಕ ರವಿಶಂಕ‌ರ್, ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹಾವು ಕಚ್ಚಿದ ಭಾಗದಿಂದ ವಿಷವನ್ನು ಬಾಯಿಯಿಂದ ಹೊರತೆಗೆದು ಬಾಲಕಿಯ ಪ್ರಾಣ ಉಳಿಯುವಂತೆ ಮಾಡಿದ್ದಾರೆ.

Murder Case: ವೈರ್‌ನಿಂದ ಕುತ್ತಿಗೆ ಬಿಗಿದು ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ

ಆ ನಂತರ ಸೃಷ್ಟಿಯನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕಿಯನ್ನು ರಕ್ಷಿಸುವ ವೇಳೆ ವಿಷದ ಅಂಶವನ್ನು ತಮ್ಮ ಬಾಯಿಯಿಂದ ಹೊರತೆಗೆದ ಶಿಕ್ಷಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದ್ದುದರಿಂದ ರವಿಶಂಕ‌ರ್ ಅವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.