ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone-Ranbir: ಮುಂಬೈ ಏರ್‌ಪೋರ್ಟ್‌ನಲ್ಲಿ ಮಾಜಿ ಪ್ರಿಯಕರ ರಣಬೀರ್ ಕಪೂರ್ ಜತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣಬೀರ್ ಕಪೂರ್ ಅಕ್ಟೋಬರ್ 4ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದೆಹಲಿಯಿಂದ ಪ್ರಯಾಣ ಮಾಡಿದ್ದ ಇಬ್ಬರು ಮುಂಬೈ ಏರ್‌ಪೋರ್ಟ್‌ನಲ್ಲಿ ಜತೆಯಾಗಿ ಕಾಣಿಸಿ ಕೊಂಡಿದ್ದಾರೆ. ದೀಪಿಕಾ ಮತ್ತು ರಣಬೀರ್ ಕಪೂರ್ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಒಟ್ಟಿಗೆ ನಿರ್ಗಮಿಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಮುಂಬೈ ಏರ್ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಣಬೀರ್-ದೀಪಿಕಾ

Deepika Padukone and Ranbir -

Profile Pushpa Kumari Oct 5, 2025 4:46 PM

ಮುಂಬೈ: ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ನಟ ರಣಬೀರ್ ಸಿಂಗ್ ಬಾಲಿವುಡ್‌ನ ಕ್ಯೂಟ್‌ ಕಪಲ್‌. ತೆರೆಮೇಲೆ ಇವರಿಬ್ಬರ ಜೋಡಿಯನ್ನು ನೆಚ್ಚಿಕೊಂಡ ಅಭಿಮಾನಿಗಳು ರಿಯಲ್ ಲೈಫ್‌ನಲ್ಲೂ ಒಂದಾದರೆ ಚೆನ್ನಾಗಿರುತ್ತದೆ ಎಂದು ಬಯಸಿದ್ದರು. ಅಂತೆಯೇ ಇವರಿಬ್ಬರು ಎಲ್ಲರ ನಿರೀಕ್ಷೆಯಂತೆ 2018ರಲ್ಲಿ ವಿವಾಹವಾದರು. ಈ ದಂಪತಿಗೆ ದುವಾ ಎಂಬ ಮುದ್ದಾದ ಹೆಣ್ಣು ಮಗು ಕೂಡ ಇದೆ. ದುವಾ ಜನಿಸಿದ ಬಳಿಕ ದೀಪಿಕಾ ಪಡುಕೋಣೆ ಮಗುವಿನ ಲಾಲನೆ ಪಾಲನೆ ಕಡೆಗೆ ಗಮನ ಹರಿಸಿ ಚಿತ್ರರಂಗದಿಂದ ಚಿಕ್ಕ ಬ್ರೇಕ್‌ ಪಡೆದುಕೊಂಡಿದ್ದರು. ಇದೀಗ ಮತ್ತೆ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ. ಈ ಮಧ್ಯೆ ಅವರು ಮಾಜಿ ಪ್ರಿಯಕರ ರಣಬೀರ್‌ ಕಪೂರ್‌ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಆತ್ಮೀಯತೆಯಿಂದ ಅಪ್ಪಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ದೀಪಿಕಾ ಮದುವೆಯಾಗುವ ಮೊದಲು ರಣಬೀರ್ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು. ಅದೇನಾಯ್ತೋ ಗೊತ್ತಿಲ್ಲ ಬಳಿಕ ರಣವೀರ್‌ನನ್ನು ದೀಪುಕಾ ವರಿಸಿದರೆ, ರಣಬೀರ್‌ ಆಲಿಯಾ ಭಟ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲವು ಸಿನಿಮಾ ಇವೆಂಟ್ ಹೊರತು ಪಡಿಸಿ ಎಲ್ಲಿಯೂ ರಣಬೀರ್ ಹಾಗೂ ದೀಪಿಕಾ ಜತೆಯಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇಬ್ಬರು ಏರ್‌ಪೋರ್ಟ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಅವರ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ದೀಪಿಕಾ ಪಡುಕೋಣೆ ಹಾಗೂ ನಟ ರಣಬೀರ್ ಕಪೂರ್ ಅಕ್ಟೋಬರ್ 4ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದೆಹಲಿಯಿಂದ ಪ್ರಯಾಣ ಮಾಡಿದ್ದ ಇಬ್ಬರು ಮುಂಬೈ ಏರ್‌ಪೋರ್ಟ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ದೀಪಿಕಾ ಮತ್ತು ರಣಬೀರ್ ಕಪೂರ್ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಒಟ್ಟಿಗೆ ನಿರ್ಗಮಿಸಿದ ವಿಡಿಯೊ ನೆಟ್ಟಿಗರ ಮನ ಸೆಳೆಯುತ್ತಿದೆ.

ಮೊದಲಿಗೆ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಬಂದಿದ್ದ ಅವರು ಒಟ್ಟಿಗೆ ಅಲ್ಲಿಂದ ಹೊರ ನಡೆದಿದ್ದಾರೆ. ಬಳಿಕ ತಮ್ಮ ತಮ್ಮ ಕಾರುಗಳು ಬರುವುದಕ್ಕಾಗಿ ಅಲ್ಲೇ ಕಾಯುತ್ತಾ ನಿಂತಿದ್ದಾರೆ. ಕಾರು ಬರುತ್ತಿದ್ದಂತೆ ದೀಪಿಕಾ ರಣಬೀರ್ ಅವರನ್ನು ಅಪ್ಪಿಕೊಂಡು ವಿದಾಯ ತಿಳಿಸಿ ತೆರಳಿದ್ದಾರೆ. ದೀಪಿಕಾ ಬಿಳಿ ಬಣ್ಣದ ಸೂಟ್ ಧರಿಸಿದ್ದು ಮುದ್ದಾಗಿ ಕಂಡಿದ್ದಾರೆ. ರಣಬೀರ್ ಕೂಡ ಬಿಳಿ ಬಣ್ಣದ ಟಿ-ಶರ್ಟ್, ಕಂದು ಬಣ್ಣದ ಜಾಕೆಟ್ ಮತ್ತು ಕಪ್ಪು ಜೀನ್ಸ್‌ ಧರಿಸಿ ಸ್ಟೈಲಿಶ್ ಲಿಕ್‌ನಲ್ಲಿ ಗಮನ ಸೆಳೆದಿದ್ದಾರೆ.

ಇದನ್ನು ಓದಿ:Kantara Chapter 1 Movie: ʼಕಾಂತಾರ: ಚಾಪ್ಟರ್‌ 1ʼ ಚಿತ್ರ ಯಾಕಾಗಿ ನೋಡಬೇಕು? ಇಲ್ಲಿದೆ 5 ಕಾರಣಗಳು

ಈ ವಿಡಿಯೊಕ್ಕೆ ಅಭಿಮಾನಿಗಳು ನಾನಾ ತೆರನಾಗಿ ಕಮೆಂಟ್ ಮಾಡುತ್ತಿದ್ದಾರೆ. ನಿಮ್ಮನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತದೆ. ಆದಷ್ಟು ಬೇಗ ಹೊಸ ಸಿನಿಮಾದಲ್ಲಿ ಇಬ್ಬರು ಜತೆಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ನಟಿ ದೀಪಿಕಾ ಮತ್ತು ರಣಬೀರ್‌ ʼಬಚ್ನಾ ಏ ಹಸಿನೋʼ ಚಿತ್ರದಲ್ಲಿ ಆರಂಭದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ʼಯೇ ಜವಾನಿ ಹೈ ದಿವಾನಿʼ (2013) ಮತ್ತು ʼತಮಾಶಾʼ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ʼಕಲ್ಕಿʼ ಸಿನಿಮಾದ ಬಳಿಕ ನಟಿ ದೀಪಿಕಾ ಮಗುವಿನ ಆರೈಕೆಗಾಗಿ ಹೆಚ್ಚು ಕಾಲಾವಕಾಶ ನೀಡುತ್ತಿದ್ದಾರೆ. ಸದ್ಯ ಅವರು ನಟ ಶಾರುಖ್ ಖಾನ್ ಅಭಿನಯದ ʼಕಿಂಗ್ʼ, ʼಪಠಾಣ್‌ 2ʼ ಸಿನಿಮಾ ಒಪ್ಪಿಕೊಂಡಿದ್ದಾರೆ. ಜತೆಗೆ ಅಲ್ಲು ಅರ್ಜುನ್‌-ಅಟ್ಲಿ ಕಾಂಬಿನೇಷನ್‌ನ ತೆಲುಗು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.