ರಾಯಚೂರು, ಮಾ.10: ಜಿಲ್ಲೆಯ (Raichuru) ಲಿಂಗಸುಗೂರು (Lingasuguru) ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ತಮ್ಮದೇ ಕನಸಿನ ಮನೆಯ ಕಟ್ಟಡದ ಕೆಲಸ ಮಾಡುತ್ತಿದ್ದ ದಂಪತಿ (Couple death) ಮೇಲೆ ನಿರ್ಮಾಣ ಹಂತದ ಮನೆಯ ಮೆಟ್ಟಿಲು (staircase) ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ದ್ಯಾವಪ್ಪ ಸುಗೂರು (35), ಶಿವಮ್ಮ(33) ಮೃತ ದಂಪತಿ.
ತಮಗೊಂದು ಸೂರು ಬೇಕೆಂದು ಈ ದಂಪತಿ ಕನಸು ಕಂಡಿದ್ದು, ಅದರಂತೆ ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲು ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ಸಾವನ್ನಪ್ಪಿದ್ದಾರೆ. ದ್ಯಾವಪ್ಪ ಹಾಗೂ ಶಿವಮ್ಮ ದಂಪತಿ ಮನೆ ಕಟ್ಟುವ ಕನಸು ಕಂಡಿದ್ದು, ಅದರಂತೆ ಹಣ ಹೊಂದಿಸಿ ಮನೆ ನಿರ್ಮಾಣ ಮಾಡಲು ಶುರು ಮಾಡಿದ್ದರು. ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅರ್ಧ ಮನೆ ಸಹ ಕಟ್ಟಲಾಗಿತ್ತು. ನಿನ್ನೆ ಮನೆ ಗೋಡೆ ಪ್ಲಾಸ್ಟರಿಂಗ್ ಮಾಡುತ್ತಿದ್ದ ವೇಳೆ ದಂಪತಿ ಮೇಲೆ ಏಕಾಏಕಿ ಮೆಟ್ಟಿಲುಗಳ ಪಿಲ್ಲರ್ ಕುಸಿದು ಬಿದ್ದಿದೆ.
ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ದ್ಯಾವಪ್ಪ, ಶಿವಮ್ಮ ಕನಸಿನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ದಂಪತಿಯ ಮೃತದೇಹವನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರದಲ್ಲಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ