ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raichur News: ದೇವದುರ್ಗದಲ್ಲಿ ಕಟ್ಟಡದ ಮೇಲ್ಚಾವಣಿ ಕುಸಿದು ಇಬ್ಬರ ಸಾವು; ಕಿರುಚಿತ್ರದ ಪೋಸ್ಟರ್ ಅಂಟಿಸುವ ವೇಳೆ ದುರಂತ

ಯುವಕರು ತಾವೇ ನಿರ್ಮಿಸಿದ್ದ ಕಿರುಚಿತ್ರದ ಪೋಸ್ಟರ್ ಅಂಟಿಸಲು ಹೋಗಿದ್ದ ವೇಳೆ ಅವಘಡ ನಡೆದಿದೆ. ಕಟ್ಟಡದ ಮೇಲ್ಚಾವಣಿಯ ಸಜ್ಜಾ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಾಳುಗಳನ್ನು ದೇವದುರ್ಗ ತಾಲೂಕಾಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಯಚೂರು: ಜಿಲ್ಲೆಯ (Raichur) ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿ ಕಟ್ಟಡದ ಮೇಲ್ಚಾವಣಿ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿವೆ. ಘಟನೆಯಲ್ಲಿ ಇನ್ನೂ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಟ್ಟಡದ ಅವಶೇಷದಡಿ ಸಿಲುಕಿ ರವಿಚಂದ್ರ (35) ಹಾಗೂ ನಾಗರಾಜ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾವೇ ನಿರ್ಮಿಸಿದ್ದ ಕಿರುಚಿತ್ರದ ಪೋಸ್ಟರ್ ಅಂಟಿಸಲು ಹೋಗಿದ್ದ ವೇಳೆ ಅವಘಡ ನಡೆದಿದೆ. ಮೇಲ್ಚಾವಣಿಯ ಸಜ್ಜಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ದೇವದುರ್ಗ ತಾಲೂಕಾಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಏಕಾಏಕಿ ಸಿಮೆಂಟ್ ಕಳಚಿ ಬಿದ್ದಿದ್ದರಿಂದ ಅವಘಡ ಉಂಟಾಗಿದೆ. ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗ ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ವ್ಯಕ್ತಿ

ಬೆಳಗಾವಿ: ಗಂಡು ಮಗು ಹುಟ್ಟಿದೆ ಪಾರ್ಟಿ ಕೊಡಿಸು ಎಂದು ಕೇಳಿದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ‌ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ. ವಣ್ಣೂರ (Murder Case) ಗ್ರಾಮದ ಹನುಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ವ್ಯಕ್ತಿ. ಅದೇ ಊರಿನ ವಿಶ್ವನಾಥ ಪೂಜೇರಿ ಕೊಲೆ ಮಾಡಿರುವ ಆರೋಪಿ. ಹನುಮಂತಪ್ಪನನ್ನು ವಿಶ್ವನಾಥ ಕಲ್ಲಿನಿಂದ ಕೊಲೆ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯ ಮೇಲೆ ಕುಳಿತು ಇಬ್ಬರು ಮಾತನಾಡುತ್ತಾ ಕುಳಿತಿದ್ದರು. ಇದೇ ವೇಳೆ ವಿಶ್ವನಾಥಗೆ ಹನುಮಂತಪ್ಪ ಆತ್ಮೀಯತೆಯಿಂದ ಪಾರ್ಟಿ ಕೊಡಿಸುವಂತೆ ಕೇಳಿದ್ದಾನೆ.

ಈ ವೇಳೆ ಮಾತಿನ ಭರದಲ್ಲಿ ವಿಶ್ವನಾಥ ಕಣ್ಣಿಗೆ ರಭಸವಾಗಿ ಹನುಮಂತಪ್ಪ ಬೆರಳು ತಾಗಿದೆ. ಇದೇ ಸಿಟ್ಟು ಇಟ್ಟುಕೊಂಡ ವಿಶ್ವನಾಥ ಹನುಮಂತಪ್ಪ ತಲೆಗೆ ಕಲ್ಲಿನಿಂದ ಹೊಡೆದಿದ್ದಾ‌ನೆ.‌ ಹೊಡೆತದ ತೀವ್ರತೆಗೆ ರಕ್ತಸ್ರಾವವಾಗಿ ಸ್ಥಳದಲ್ಲೇ ಹನುಮಂತಪ್ಪ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹನುಮಂತಪ್ಪ ‌ಕುಸಿದು ಬೀಳುತ್ತಿದ್ದಂತೆ ಸ್ಥಳದಿಂದ ಆರೋಪಿ ವಿಶ್ವನಾಥ ‌ಪರಾರಿಯಾಗಿದ್ದ. ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ನೇಸರಗಿ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧನ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೊಲೆಯಾದ ಹನುಮಂತಪ್ಪ ಅವರ ತಾಯಿ ಸುಜಾತಾ ಇಟಗಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದು, ನನ್ನ ಕಾಲಿನ ಸಮಸ್ಯೆ ಆಗಿದ್ದಕ್ಕೆ ನಾಲ್ಕು ವರ್ಷಗಳಿಂದ ನನ್ನ ಮಗ ಜೋಪಾನ ಮಾಡುತ್ತಿದ್ದ. ಅವನೇ ಅಡುಗೆ ಮಾಡಿ ಊಟ ಮಾಡಿಸುತ್ತಿದ್ದ. ಊರಿನಲ್ಲಿ ಎಲ್ಲರ ಜೊತೆಗೂ ಒಳ್ಳೆಯ ಸಂಬಂಧ ಹೊಂದಿದ್ದ. ಬಹಳ ಒಳ್ಳೆಯ ಹುಡುಗ ಇದ್ದ. ಯಾರ ಜೊತೆಯೂ ಜಗಳ ಮಾಡುತ್ತಿರಲಿಲ್ಲ. ಈ ವರ್ಷ ಮದುವೆ ಮಾಡಲು ಹುಡುಗಿ ನೋಡುತ್ತಿದ್ದೆವು. ಅಷ್ಟರೊಳಗೆ ಈ ರೀತಿ ಆಗಿದೆ. ಈಗ ನಮ್ಮನ್ನು ಅನಾಥ ಮಾಡಿ ಹೋದ. ಕೊಲೆ ಮಾಡಿರುವ ಆರೋಪಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.‌