ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Legislative Council: ವಿಧಾನ ಪರಿಷತ್‌ಗೆ ರಮೇಶ್ ಬಾಬು, ಆರತಿ ಕೃಷ್ಣ ಸೇರಿ ನಾಲ್ವರ ನಾಮ ನಿರ್ದೇಶನ ಮಾಡಿದ ಸರ್ಕಾರ

Karnataka Legislative Council: ಸಿಎಂ ಸಿದ್ದರಾಮಯ್ಯ ಅವರು ಎರಡು ವಾರಗಳ ಹಿಂದೆ ನಾಲ್ವರ ಹೆಸರನ್ನು ನಾಮನಿರ್ದೇಶಿಸುವಂತೆ ಕೋರಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದರು. ಹೀಗಾಗಿ ರಾಜ್ಯಪಾಲರು ವಿಧಾನ ಪರಿಷತ್‌ಗೆ ನಾಲ್ವರ ನಾಮ ನಿರ್ದೇಶನ ಮಾಡಲು ಅನುಮೋದನೆ ನೀಡಿದ್ದಾರೆ.

ವಿಧಾನ ಪರಿಷತ್‌ಗೆ ರಮೇಶ್ ಬಾಬು ಸೇರಿ ನಾಲ್ವರ ನಾಮ ನಿರ್ದೇಶನ

-

Prabhakara R Prabhakara R Sep 7, 2025 6:30 PM

ಬೆಂಗಳೂರು: ವಿಧಾನ ಪರಿಷತ್‌ಗೆ (Karnataka Legislative Council) ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಎನ್ಆರ್​ಐ ಸೆಲ್ ಮುಖ್ಯಸ್ಥೆ ಆರತಿ ಕೃಷ್ಣ, ಹುಬ್ಬಳ್ಳಿ ಧಾರವಾಡ ದಲಿತ ಮುಖಂಡ ಜಕ್ಕಪ್ಪನವರ್ ಹಾಗೂ ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಸೇರಿ ನಾಲ್ವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಭಾನುವಾರ ಅಧಿಕೃತ ಆದೇಶ ಹೊರಡಿಸಲಾಗಿದೆ.

ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಯು.ಬಿ.ವೆಂಕಟೇಶ್‌, ಪ್ರಕಾಶ್ ರಾಥೋಡ್ ಅವರ ಅವಧಿ 2024ರ ಅಕ್ಟೋಬರ್‌ ಮತ್ತು ಕೆ.ಎ.ತಿಪ್ಪೇಸ್ವಾಮಿ ಅವಧಿ 2025ರ ಜನವರಿ ವೇಳೆಗೆ ಮುಕ್ತಾಯವಾಗಿತ್ತು. ಇನ್ನು ಸಿ.ಪಿ.ಯೋಗೇಶ್ವರ ಅವರು ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ 4 ಸ್ಥಾನಕ್ಕೆ ಹೊಸ ನಾಲ್ವರು ಅಭ್ಯರ್ಥಿಗಳನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದೆ.

ನಾಮ ನಿರ್ದೇಶನಗೊಂಡಿರುವ ನಾಲ್ವರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್‌ ಬಾಬು ಅವರು ಹಿಂದುಳಿದ ವರ್ಗ, ಜಕ್ಕಪ್ಪನವರ್‌ ಹಾಗೂ ಶಿವಕುಮಾರ್‌ ದಲಿತ ಸಮುದಾಯಕ್ಕೆ ಸೇರಿದವರು.

ಈ ಸುದ್ದಿಯನ್ನೂ ಓದಿ | Siddaraju swamiji: ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ?; ಪಾಲನಹಳ್ಳಿ ಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ!

ಸಿಎಂ ಸಿದ್ದರಾಮಯ್ಯ ಅವರು ಎರಡು ವಾರಗಳ ಹಿಂದೆ ನಾಲ್ವರ ಹೆಸರನ್ನು ನಾಮನಿರ್ದೇಶಿಸುವಂತೆ ಕೋರಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದರು. ಹೀಗಾಗಿ ರಾಜ್ಯಪಾಲರು ಮೇಲ್ಮನೆಗೆ ನಾಲ್ವರ ನಾಮ ನಿರ್ದೇಶನ ಮಾಡಲು ಅನುಮೋದನೆ ನೀಡಿದ್ದಾರೆ.