ಪರಿಣಾಮಕಾರಿತ್ವದ ಥೆರಪಿಗಳು: ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ
ಪ್ರಸ್ತುತ ದೇಶದಲ್ಲಿ ಮಲ್ಟಿಪಲ್ ಸ್ಲೆರೋಸಿಸ್ (ಎಂ.ಎಸ್.) ಕುರಿತು ಸೀಮಿತ ಜ್ಞಾನವಿದೆ ಮತ್ತು ರೋಗ ಲಕ್ಷಣಗಳು ಅಗೋಚರವಾಗಿರುತ್ತವೆ, ಇದರಿಂದ ರೋಗ ಪರೀಕ್ಷೆ ತಡವಾಗುತ್ತದೆ. ಅಲ್ಲದೆ ಇದು ಕೇಂದ್ರ ನರವ್ಯವಸ್ಥೆಯ ರೋಗವಾಗಿದ್ದು ಇದು ತಡವಾಗಿ ರೋಗ ಪರೀಕ್ಷೆ ಹಾಗೂ ದುರ್ಬಲ ಚಿಕಿತ್ಸೆಯ ಆಯ್ಕೆಗಳಿಂದ ರೋಗ ಪ್ರಗತಿ ಸಾಧಿಸುವ ಮೂಲಕ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಉಂಟು ಮಾಡುತ್ತದೆ. ರೋಗ ಪತ್ತೆಯಾದರೂ ಕೆಲವರು ಚಿಕಿತ್ಸೆ ಮುಂದುವರಿಸುವುದಿಲ್ಲ

-

ಬೆಂಗಳೂರು: ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಹಾಗೂ ವಿಶ್ವದಾದ್ಯಂತ ಕೋಟ್ಯಂತರ ಜನರು ಮಲ್ಟಿಪಲ್ ಸ್ಲೆರೋಸಿಸ್ ಸಮಸ್ಯೆಯಿಂದ ಬಾಧಿತರಾಗಿದ್ದಾರೆ. ಈ ಸಂಖ್ಯೆಗಳು ರೋಗ ಪರೀಕ್ಷೆಯ ಪ್ರಕರಣಗಳನ್ನು ಮಾತ್ರ ಪ್ರತಿನಿಧಿಸುತ್ತಿದ್ದು ಒಟ್ಟಾರೆ ಸಂಖ್ಯೆ ಮತ್ತಷ್ಟು ಹೆಚ್ಚಿರ ಬಹುದು.
ಪ್ರಸ್ತುತ ದೇಶದಲ್ಲಿ ಮಲ್ಟಿಪಲ್ ಸ್ಲೆರೋಸಿಸ್ (ಎಂ.ಎಸ್.) ಕುರಿತು ಸೀಮಿತ ಜ್ಞಾನವಿದೆ ಮತ್ತು ರೋಗಲಕ್ಷಣಗಳು ಅಗೋಚರವಾಗಿರುತ್ತವೆ, ಇದರಿಂದ ರೋಗ ಪರೀಕ್ಷೆ ತಡವಾಗುತ್ತದೆ. ಅಲ್ಲದೆ ಇದು ಕೇಂದ್ರ ನರವ್ಯವಸ್ಥೆಯ ರೋಗವಾಗಿದ್ದು ಇದು ತಡವಾಗಿ ರೋಗ ಪರೀಕ್ಷೆ ಹಾಗೂ ದುರ್ಬಲ ಚಿಕಿತ್ಸೆಯ ಆಯ್ಕೆಗಳಿಂದ ರೋಗ ಪ್ರಗತಿ ಸಾಧಿಸುವ ಮೂಲಕ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಉಂಟು ಮಾಡುತ್ತದೆ. ರೋಗ ಪತ್ತೆಯಾದರೂ ಕೆಲವರು ಚಿಕಿತ್ಸೆ ಮುಂದುವರಿಸುವುದಿಲ್ಲ. ಇದು ರೋಗದ ಮರು ಕಳಿಕೆ ಉಂಟು ಮಾಡುತ್ತದೆ. ಎಂ.ಎಸ್.ರೋಗ ಲಕ್ಷಣಗಳು ರೋಗಿಯಿಂದ ರೋಗಿಗೆ ವ್ಯತ್ಯಾಸಗೊಳ್ಳುತ್ತವೆ, ಅದಕ್ಕೆ ಆಯಾಸ, ದೃಷ್ಟಿಯ ಅಡೆತಡೆಗಳು, ಸ್ನಾಯುವಿನ ದೌರ್ಬಲ್ಯ, ಚಲನೆ ಯಲ್ಲಿಕಷ್ಟ, ಸಮತೋಲನದ ಸಮಸ್ಯೆಗಳು, ಅರಿವಿನ ದೋಷ ಮತ್ತು ಖಿನ್ನತೆ ಒಳಗೊಂಡಿರಬಹುದು.
ಭಾರತದಲ್ಲಿ ಎಂ.ಎಸ್. ಚಿಕಿತ್ಸೆಯ ಕ್ಷೇತ್ರವನ್ನು ಮರು ವ್ಯಾಖ್ಯಾನಿಸುವುದು ಏನು?
ಮಲ್ಟಿಪಲ್ ಸ್ಲೆರೋರಿಸಿಸ್ ಆಟೊ ಇಮ್ಯೂನ್ ಸಮಸ್ಯೆಯಾಗಿದ್ದು ಅದು ಸದೃಢ ಚಿಕಿತ್ಸೆ ನಿರೀಕ್ಷಿಸು ತ್ತದೆ. ಮಲ್ಟಿಪಲ್ ಸ್ಲೆರೋಸಿಸ್ ರೋಗಲಕ್ಷಣಗಳು ಬಹುತೇಕ ಊಹಿಸಲು ಕಷ್ಟಕರವಾಗಿದ್ದು ಕೆಲವರಿಗೆ ಕನಿಷ್ಠ ರೋಗಲಕ್ಷಣಗಳು ಕಂಡು ಬಂದರೆ ಕೆಲವರು ಹೆಚ್ಚಾದ ಅಂಗವೈಕಲ್ಯ ಅನು ಭವಿಸುತ್ತಾರೆ. ಎಚ್.ಇ.ಟಿ.ಗಳಿಗೆ ಮುಂಚೆಯೇ ಚಿಕಿತ್ಸೆ ನೀಡಿದರೆ ಅದು ಉರಿಯೂತ ಕಡಿಮೆ ಮಾಡುತ್ತದೆ, ಮರುಕಳಿಕೆಯ ಸಾಧ್ಯತೆ ಕಡಿಮೆ ಮಾಡುತ್ತದೆ ಮತ್ತು ನರಸಂಬಂಧಿ ಹಾನಿ ನಿವಾರಿಸು ತ್ತದೆ.
ವೈಯಕ್ತಿಕ ಚಿಕಿತ್ಸಾ ವಿಧಾನಗಳು, ಸತತ ಮೇಲ್ವಿಚಾರಣೆ ಮತ್ತು ರಿಸ್ಕ್ ನಿರ್ವಹಣೆಯ ಪ್ರೋಟೋ ಕಾಲ್ಗಳು ಎಚ್.ಇ.ಟಿ.ಗಳಿಗೆ ಅನುಕೂಲ ಕಲ್ಪಿಸುವುದಲ್ಲದೆ ರೋಗಿಯ ಸುರಕ್ಷತೆ ದೃಢಪಡಿಸುತ್ತವೆ.
ಬೆಂಗಳೂರಿನ ನಿಮ್ಹಾನ್ಸ್ ನ್ಯೂರಾಲಜಿ ವಿಭಾಗದ ಪ್ರೊಫೆಸರ್ ಡಾ.ನೇತ್ರಾವತಿ, “ಎಂ.ಎಸ್. 25ರಿಂದ 35 ವರ್ಷ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ ಮತ್ತು ದುರಾದೃಷ್ಟವಶಾತ್ ಒಟ್ಟಾರೆ ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಿದೆ. ಪ್ರಾರಂಭಿಕ ರೋಗ ಪರೀಕ್ಷೆಗೆ ಹೆಚ್ಚು ಒತ್ತ ನೀಡಬೇಕು.
ಮಲ್ಟಿಪಲ್ ಸ್ಲೆರೋಸಿಸ್ ನಿಯಂತ್ರಿಸುವ ಶಕ್ತಿ ನಮ್ಮ ಕೈಯಲ್ಲಿದೆ. ಎಂ.ಎಸ್. ಆರೈಕೆಯ ಪರಿವರ್ತನೆಯು ರೋಗದ ಪ್ರಗತಿ ನಿಧಾನಗೊಳಿಸುವ ಸಾಮರ್ಥ್ಯ ಹೊಂದಿದೆ” ಎಂದರು.
ಬೆಂಗಳೂರಿನ ಜಯನಗರದ ಅಪೋಲೋ ಹಾಸ್ಪಿಟಲ್ ನ್ಯೂರಾಲಜಿಸ್ಟ್ ಡಾ.ಸತೀಶ್ ಚಂದ್ರ, “ಎಂ.ಎಸ್. ಮತ್ತುಇತರೆ ಆಟೊ-ಇಮ್ಯೂನ್ ಸಮಸ್ಯೆಗಳು ಭಾರತದಲ್ಲಿ ತೀವ್ರವಾಗಿ ವೃದ್ಧಿಸುತ್ತಿವೆ. ಈ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಮುಖ್ಯವಾಗಿ ಜನರು ಕಿರಿಯ ವಯಸ್ಸಿನಲ್ಲಿರುವಾಗಲೇ ನಿಯಂತ್ರಿಸುವುದು ಅಗತ್ಯ. ಅದು ಅವರ ಜೀವನದ ಅತ್ಯಂತ ಉತ್ಪಾದಲ ಹಂತಗಳಲ್ಲಿ ಒಂದಾಗಿರುತ್ತದೆ. ಆದ್ದರಿಂದ ನಾವು ನಮ್ಮ ಸುಧಾರಿತ ಉನ್ನತ ಪರಿಣಾಮದ ಥೆರಪಿಗಳು ರೋಗದ ಬೆಳವಣಿಗೆಯನ್ನು ಪ್ರಭಾವಶಾಲಿಯಾಗಿ ತಡೆಯುತ್ತವೆ ಹಾಗೂ ಅಂಗವೈಕಲ್ಯತರುವ ರೋಗದ ಮರುಕಳಿಕೆ ನಿಯಂತ್ರಿಸುತ್ತವೆ” ಎಂದರು.