Bagepally News: ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಿ
ಪಟ್ಟಣದ ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿದ ಸಿಪಿಐಎಂ ನಗರದ ಘಟಕ ನಿಯೋಗವು, ಘಟಕದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಇಲ್ಲಿನ ನೀರನ್ನು ಶುದ್ಧೀಕರಣ ಮಾಡಬೇಕಾದ ಯಂತ್ರಗಳು ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಆಗಿವೆ. ಜೊತೆಗೆ ನೀರಿನ ಶುದ್ಧೀಕರಣ ಘಟಕದಲ್ಲಿ ಆಲಂ ಬಳಸುತ್ತಿಲ್ಲ, ಕಲ್ಮಶಗಳನ್ನು ತೆಗೆಯುವ ಯಾವೊಂದು ವಿಧಾನವನ್ನೂ ಅನುಸರಿಸುತ್ತಿಲ್ಲ

-

ಬಾಗೇಪಲ್ಲಿ: ಪಟ್ಟಣಕ್ಕೆ ನೀರನ್ನು ಒದಗಿಸುವ ಚಿತ್ರಾವತಿ ಡ್ಯಾಂ ನಿಂದ ನೀರಿನ ಶುದ್ಧೀಕರಣ ಘಟಕಕ್ಕೆ ಬಿಡಲಾಗುತ್ತದೆ. ಅಲ್ಲಿಂದ ಶುದ್ದೀಕರಣ ಮಾಡದೆಯೇ ಯಥಾವತ್ತಾಗಿ ಪಟ್ಟಣದ ನಿವಾಸಿ ಗಳಿಗೆ ಪಂಪ್ ಮಾಡಲಾಗುತ್ತಿದೆ ಎಂದು ಸಿಪಿಐಎಂ ಮುಖಂಡ ಚನ್ನರಾಯಪ್ಪ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿದ ಸಿಪಿಐಎಂ ನಗರದ ಘಟಕ ನಿಯೋಗವು, ಘಟಕದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಇಲ್ಲಿನ ನೀರನ್ನು ಶುದ್ಧೀಕರಣ ಮಾಡಬೇಕಾದ ಯಂತ್ರಗಳು ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಆಗಿವೆ. ಜೊತೆಗೆ ನೀರಿನ ಶುದ್ಧೀಕರಣ ಘಟಕದಲ್ಲಿ ಆಲಂ ಬಳಸುತ್ತಿಲ್ಲ, ಕಲ್ಮಶಗಳನ್ನು ತೆಗೆಯುವ ಯಾವೊಂದು ವಿಧಾನವನ್ನೂ ಅನುಸರಿಸುತ್ತಿಲ್ಲ. ನೇರವಾಗಿ ಡ್ಯಾಂ ನಿಂದ ಸಂಗ್ರಹಿಸಿದ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇದನ್ನೂ ಓದಿ: Bagepally News: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿಗೆ ಸನ್ಮಾನ
ಬಡವರ ಆರೋಗ್ಯಕ್ಕೆ ಬೆಲೆ ಇಲ್ಲವೇ?
ಇದರಿಂದಾಗಿ ಪಟ್ಟಣದ ಬಡವರ,ಅಸಹಾಯಕರ ಆರೋಗ್ಯದೊಂದಿಗೆ ಪುರಸಭೆಯವರು ಆಟವಾಡುತ್ತಿದ್ದಾರೆ. ಈಗಾಗಲೇ ಸರಿಯಾದ ವೈಜ್ಞಾನಿಕ ಚರಂಡಿ,ರಸ್ತೆಗಳು ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಕಾಟದಿಂದ ನಲುಗುತ್ತಿರುವ ಹಲವು ವಾರ್ಡ್ ಗಳಲ್ಲಿ,ಇಂಥಹ ಕಲ್ಮಷದ ನೀರನ್ನು ನೀಡಿ ಮತ್ತಷ್ಟು ರೋಗರುಜುನೆಗಳಿಂದ ನರಳುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕ, ವಾರ್ಡುಗಳ ಪುರಸಭೆ ಸದಸ್ಯರಿಗೆ ಕನಿಷ್ಟ ಕಾಳಜಿಯೂ ಇಲ್ಲದೆ ಬಡವರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಡ್ಯಾಂ ನೀರನ್ನು ಬಳಸುವುದಿಲ್ಲ. ಅವರೆಲ್ಲ ಸ್ಟ್ಯಾಂಡರ್ಡ್ ಫಿಲ್ಟರ್ ನೀರನ್ನು ಬಳಸುತ್ತಾರೆ. ಆದರೆ ನಾಗರೀಕರು ಅನಿವಾರ್ಯವಾಗಿ ಇದೇ ನೀರನ್ನು ಬಳಸಬೇಕಿದೆ. ಹಾಗಾಗಿ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸಮರ್ಪಕ ರೀತಿಯಲ್ಲಿ ನೀರನ್ನು ಶುದ್ಧೀಕರಿಸಿಯೇ ಪಟ್ಟಣಕ್ಕೆ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಸಿಪಿಐಎಂ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಹಿರಿಯ ಮುಖಂಡ ಡಿ.ಟಿ ಮುನಿಸ್ವಾಮಿ ಮಾತನಾಡಿ, ಅಮೂಲ್ಯವಾದ ನೀರನ್ನು ಬೇಕಾಬಿಟ್ಟಿ ಜನತೆಗೆ ಸರಬರಾಜು ಮಾಡುವುದು ಸರಿಯಲ್ಲ. ಇಲ್ಲಿನ ಯಂತ್ರಗಳನ್ನು ಸರಿಯಾಗಿ ದುರಸ್ತಿ ಪಡಿಸಬೇಕು.ಶುದ್ಧೀಕರಣ ಹಂತಗಳನ್ನು ತಪ್ಪದೇ ಪಾಲಿಸಿ,ನಂತರ ಪಟ್ಟಣಕ್ಕೆ ಸರಬರಾಜು ಮಾಡಬೇಕು.ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಯಂತ್ರಾಂಗ,ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ, ನಗರ ಘಟಕದ ಅಧ್ಯಕ್ಷ ವಾಲ್ಮೀಕಿ ಅಶ್ವತ್ಥಪ್ಪ,ಪುರಸಭೆಯ ಮಾಜಿ ಸದಸ್ಯ ಜಿ.ಕೃಷ್ಣಪ್ಪ,ಮಹ್ಮಮ್ಮದ್ ರಫಿಕ್, ಮತ್ತಿತರರು ಇದ್ದರು.