ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sub Registrar Office: ರಾಜ್ಯದಲ್ಲಿ ಇಂದು, ನಾಳೆ ರಜೆ ಇದ್ದರೂ ಉಪನೋಂದಣಾಧಿಕಾರಿ ಕಚೇರಿ ಓಪನ್‌

ಮಾರ್ಚ್ 28 ನಾಲ್ಕನೇ ಶನಿವಾರ ಹಾಗೂ ಮಾರ್ಚ್ 29 ಭಾನುವಾರವಾಗಿರುವ ಕಾರಣ ಕಚೇರಿಗಳಿಗೆ ನಿಯಮಾನುಸಾರ ಸರ್ಕಾರಿ ರಜೆ ಇರುತ್ತದೆ. ಆದರೆ, ಈ ಬಾರಿ ಸಾಲು ಸಾಲು ರಜೆಗಳಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಾರದು ಹಾಗೂ ವರ್ಷಾಂತ್ಯದ ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರಕಾರಿ ಸುತ್ತೋಲೆ

ಬೆಂಗಳೂರು, ಮಾ.28: ಯುಗಾದಿ (Ugadi) ಹಾಗೂ ರಂಜಾನ್ (Ramzan) ಹಬ್ಬಗಳ ಸಾಲು ಸಾಲು ಸರ್ಕಾರಿ ರಜೆಯಿದ್ದ ಹಿನ್ನೆಲೆಯಲ್ಲಿ ಮತ್ತು ಪ್ರಸಕ್ತ ಆರ್ಥಿಕ ವರ್ಷಾಂತ್ಯದ (ಮಾರ್ಚ್ ಅಂತ್ಯ) ಕಾರಣಕ್ಕಾಗಿ, ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿ (sub registrar office) ಕಚೇರಿಗಳು ಮಾರ್ಚ್ 28 (ಇಂದು) ಮತ್ತು 29 (ನಾಳೆ) ರಜಾ ದಿನಗಳಾದರೂ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಮಾರ್ಚ್ 28 ನಾಲ್ಕನೇ ಶನಿವಾರ ಹಾಗೂ ಮಾರ್ಚ್ 29 ಭಾನುವಾರವಾಗಿರುವ ಕಾರಣ ಕಚೇರಿಗಳಿಗೆ ನಿಯಮಾನುಸಾರ ಸರ್ಕಾರಿ ರಜೆ ಇರುತ್ತದೆ. ಆದರೆ, ಈ ಬಾರಿ ಸಾಲು ಸಾಲು ರಜೆಗಳಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಾರದು ಹಾಗೂ ವರ್ಷಾಂತ್ಯದ ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಎರಡು ರಜಾ ದಿನಗಳನ್ನು ‘ಕರ್ತವ್ಯ ನಿರ್ವಹಿಸುವ ದಿನ’ ಎಂದು ಪರಿಗಣಿಸಿ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯನಿರ್ವಹಿಸುವಂತೆ ಕಂದಾಯ ಇಲಾಖೆಯ (ನೋಂದಣಿ ಮತ್ತು ಮುದ್ರಾಂಕ) ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ

ಬೆಂಗಳೂರು: ಗುರುವಾರದಂದು ನಡೆದ ʼ ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ʼದಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ₹51,469 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದ್ದು, ಈ ಸಂಬಂಧ ಒಪ್ಪಂದಗಳಿಗೆ ಸಹಿ ಮಾಡಿವೆ. ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ವಿವಿಧ ಕಂಪೆನಿಗಳ ಮುಖ್ಯಸ್ಥರು ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿ, ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಕೇವಲ ನೋಂದಣಿ ಪತ್ರವಿದ್ದರೆ ಅದು ಮದುವೆಯಾಗುವುದಿಲ್ಲ; ಸುಪ್ರೀಂ ಕೋರ್ಟ್

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ ಅವರು, ʼಈ ಹೊಸ ಹೂಡಿಕೆಗಳು ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ದಾವೋಸ್‌ ಶೃಂಗಸಭೆಗೆ ಹೊರತಾಗಿದ್ದು, ಕಳೆದ ಎರಡು ತಿಂಗಳ ಸತತ ಪ್ರಯತ್ನದ ಫಲ ಇದಾಗಿದೆ. ಬಂಡವಾಳ ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ಮುಂದೆಯೂ ಸುಸ್ಥಿರ ರೀತಿಯಲ್ಲಿ ನಡೆಯಲಿವೆ. ಈ ಹೂಡಿಕೆ ಬದ್ಧತೆಗಳಿಂದ ರಾಜ್ಯದಲ್ಲಿ 70,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ದೇಶದ ಕೈಗಾರಿಕಾ ಭೂಪಟದಲ್ಲಿ ಪ್ರಮುಖ ಕೈಗಾರಿಕಾ ಮತ್ತು ಉದ್ಯೋಗ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವಲ್ಲಿ ಈ ಬಂಡವಾಳ ಹೂಡಿಕೆಗಳು ಮಹತ್ವದ ಪಾತ್ರವಹಿಸಲಿವೆʼ ಎಂದು ತಿಳಿಸಿದ್ದಾರೆ.

ʼಬಂಡವಾಳ ಹೂಡಿಕೆಗೆ ಗುರುತಿಸಲಾಗಿರುವ ವಿವಿಧ ವಲಯಗಳು ಮತ್ತು ಹೂಡಿಕೆಯ ಮೊತ್ತವು, ರಾಜ್ಯದಲ್ಲಿನ ಕೈಗಾರಿಕಾ ಸ್ನೇಹಿ, ಸುಲಲಿತ ಉದ್ಯಮ ನೀತಿ, ಕುಶಲ ಮಾನವ ಸಂಪನ್ಮೂಲದ ವಿಪುಲ ಲಭ್ಯತೆ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯದಲ್ಲಿ ಉದ್ಯಮ ದಿಗ್ಗಜರು ಹೊಂದಿರುವ ದೃಢ ವಿಶ್ವಾಸದ ಪ್ರತೀಕವಾಗಿದೆʼ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಟ್ರಾಫಿಕ್‌ಗೆ ಸ್ವಲ್ಪ ರಿಲೀಫ್‌, ನೈಸ್ ರಸ್ತೆ- ದೀಪಾಂಜಲಿ ನಗರ ಲಿಂಕ್‌ ರೋಡ್ ಪ್ರಾಯೋಗಿಕ ಸಂಚಾರ ಶುರು

ಹರೀಶ್‌ ಕೇರ

View all posts by this author