ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ballari Firing: ಸಸ್ಪೆಂಡ್‌ ಆಗಿದ್ದ ಬಳ್ಳಾರಿ ಎಸ್‌ಪಿ ಪವನ್‌ ನಜ್ಜೂರು ಆತ್ಮಹತ್ಯೆ ಯತ್ನ?

ಬಳ್ಳಾರಿ ಘಟನೆಗೆ ಸಂಬಂಧಿಸಿ ಸೇವೆಯಿಂದ ಅಮಾನತುಗೊಂಡ ಬಳ್ಳಾರಿ ಎಸ್‌ಪಿ ಪವನ್ ನಜ್ಜೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾದ ಬರಗೂರಿನ ಫಾರಂಹೌಸ್‌ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸಸ್ಪೆಂಡ್‌ ಆಗಿದ್ದ ಬಳ್ಳಾರಿ ಎಸ್‌ಪಿ ಪವನ್‌ ನಜ್ಜೂರು ಆತ್ಮಹತ್ಯೆ ಯತ್ನ?

ಪವನ್‌ ನಜ್ಜುರು -

ಹರೀಶ್‌ ಕೇರ
ಹರೀಶ್‌ ಕೇರ Jan 3, 2026 1:59 PM

ತುಮಕೂರು, ಜ.03 : ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣದಲ್ಲಿ ಫೈರಿಂಗ್ ಆಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದಡಿ ಸಸ್ಪೆಂಡ್ ಆಗಿದ್ದ ಎಸ್‌ಪಿ ಪವನ್ ನಜ್ಜೂರು ಇದೀಗ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ನೇಹಿತನ ಫಾರ್ಮ್ ಹೌಸ್‌ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾದ ಬರಗೂರಿನ ಫಾರಂಹೌಸ್‌ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಹೊಸ ವರ್ಷದ ಎರಡನೇ ದಿನ ನಡೆದ ಬಳ್ಳಾರಿ ಫೈಂರಿಂಗ್‌ ಹಾಗೂ ಗಲಭೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನು ರಾಜ್ಯ ಸರ್ಕಾರವೂ ಸಹ ಗಂಭೀರವಾಗಿ ಪರಿಗಣಿಸಿದೆ. ಇದರಿಂದ ಬಳ್ಳಾರಿ ಎಸ್ಪಿ ಪವನ್ ನಜ್ಜೂರು ಅವರನ್ನು ಅಮಾನತು ಮಾಡಲಾಗಿತ್ತು. ರಾಜಕೀಯ ಕಿತ್ತಾಟದಿಂದ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನಜ್ಜೂರು ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.

ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಘಟನೆಯನ್ನ ಸರಿಯಾಗಿ ನಿಭಾಯಿಸಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದು ಡಿಜಿ & ಐಜಿಪಿ ವರದಿ ನೀಡಿದ್ದರು. ಹೀಗಾಗಿ ಪವನ್ ನಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಜ.1 ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನಜ್ಜೂರು ಅವರು ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಮರುದಿನವೇ ಅಮಾನತು ಮಾಡಲಾಗಿದೆ.