ಬೆಂಗಳೂರು: ಬೆಂಗಳೂರಿನ (Bengaluru) ಯುವ ಉದ್ಯಮಿಯೊಬ್ಬರು ತಮ್ಮ ಮನೆಯಲ್ಲೇ ವೈಕುಂಠ ಏಕಾದಶಿಯ (Vaikunta Ekadasi) ದಿನ ವೆಂಕಟೇಶ್ವರ ಸ್ವಾಮಿಯ ಪ್ರತಿಕೃತಿಯನ್ನು ಆರಾಧಿಸಿ, ಅಲಂಕಾರ ಮಾಡಿ, ಸುತ್ತಮುತ್ತಲಿನವರ ಗಮನ ಸೆಳೆದಿದ್ದಾರೆ. ವಿಶೇಷವೇನೆಂದರೆ ಕಳೆದ ಮೂರು ವರ್ಷಗಳಿಂದ ತಮ್ಮ ಮನೆಯಲ್ಲಿಯೇ ಇವರು ವೈಕುಂಠ ಏಕಾದಶಿಯ ದಿನ ವೆಂಕಟೇಶ್ವರ ಸ್ವಾಮಿಯ ಪ್ರತಿಕೃತಿಯ ವಿಶೇಷ ಅಲಂಕಾರವನ್ನು ಮಾಡಿ ಆರಾಧಿಸುತ್ತಾರೆ. ಈ ಉದ್ಯಮಿಯ ಹೆಸರು ದೀಪಕ್ ಬೊಗ್ಗರಾಮ್.
ದೀಪಕ್ ಅವರು ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಭಕ್ತರು. ಕಳೆದ 9 ವರ್ಷಗಳಿಂದ ಪ್ರತಿ ತಿಂಗಳೂ ತಿರುಮಲ ಬೆಟ್ಟವನ್ನು ಹತ್ತಿ ಬಾಲಾಜಿಯ ದರ್ಶನ ಪಡೆಯುತ್ತಾರೆ. ಬೆಂಗಳೂರಿನ ಜಯನಗರದಲ್ಲಿರುವ ಫ್ಲ್ಯಾಟ್‌ನಲ್ಲಿ ವೆಂಕಟೇಶ್ವರ ಸ್ವಾಮಿಯ ಪ್ರತಿಕೃತಿಯ ವಿಶೇಷ ಅಲಂಕಾರವನ್ನು ಮಾಡಿ, ಮಕ್ಕಳಿಗೆ , ಭಕ್ತರಿಗೆ ಆಧ್ಯಾತ್ಮಿಕ, ಸಂಸ್ಕೃತಿಯನ್ನು ಪರಿಚಯಿಸುತ್ತಾರೆ.
"ಕಳೆದ 9 ವರ್ಷಗಳಿಂದ ಪ್ರತಿ ತಿಂಗಳೂ ತಿರುಪತಿಗೆ ಹೋಗಿ 2,400 ಮೆಟ್ಟಿಲುಗಳಿರುವ ತಿರುಮಲ ಬೆಟ್ಟವನ್ನು ಏರುತ್ತೇನೆ. ನಲುವತ್ತು ನಿಮಿಷಗಳಲ್ಲಿ ಬೆಟ್ಟವನ್ನು ಏರುತ್ತೇನೆ. ಬಳಿಕ ದೇವರ ದರ್ಶನ ಪಡೆಯುತ್ತೇನೆ. ಕಳೆದ 9 ವರ್ಷಗಳಿಂದ ಚಾಚೂತಪ್ಪದೆ ಇದನ್ನು ಮಾಡುತ್ತೇನೆ. ಭಗವಂತನ ಪ್ರೇರಣೆಯಿಂದ ವೈಕುಂಠ ಏಕಾದಶಿಯ ದಿನದಂದು ಮನೆಯಲ್ಲಿ ಸ್ವಾಮಿಯ ಪ್ರತಿಕೃತಿಯನ್ನು ಮಾಡಿ ಆರಾಧಿಸಲಾಗುತ್ತಿದೆ. ಫ್ಲ್ಯಾಟ್‌ನಲ್ಲಿ ವಾಸಿಸುವ ನೆರೆಹೊರೆಯರು, ಬಂಧು ಬಳಗ, ಸ್ನೇಹಿತರು ಬಂದು ಹೋಗುತ್ತಾರೆ. ದೇವರ ದರ್ಶನ ಪಡೆಯುತ್ತಾರೆʼʼ ಎಂದು ಉದ್ಯಮಿ ದೀಪಕ್ ಬೊಗ್ಗರಾಮ್ ತಿಳಿಸಿದ್ದಾರೆ.
ದೀಪಕ್ ಬೊಗ್ಗರಾಮ್ ಅವರು ಫ್ಯೂಚರ್ ಪ್ರಿಂಟ್ಜ್ ಎಂಬ ಕಂಪನಿಯನ್ನು ನಡೆಸುತ್ತಿದ್ದು, ಉದ್ಯಮಿಯಾಗಿಯೂ ಯಶಸ್ವಿಯಾಗಿದ್ದಾರೆ. ಈ ಕಂಪನಿಯು ಬಿಸಿನೆಸ್ ಕಾರ್ಡ್ಸ್, ಬ್ರೋಶರ್ಸ್, ಐಡಿಕಾರ್ಡ್, ಬುಕ್ ಮಾರ್ಕ್ಸ್, ಲೆಟರ್ ಹೆಡ್, ಟಿ-ಶರ್ಟ್, ಗ್ಲಾಸ್ ಪ್ರಿಂಟಿಂಗ್, ಇನ್ವಿಟೇಶನ್, ಎನ್ ವಲಪ್, ಕ್ಯಾಲೆಂಡರ್ಸ್, ಪ್ರಾಜೆಕ್ಟ್ ಬುಕ್ ಮೊದಲಾದ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತದೆ.