ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cabs price hike: ಮತ್ತೊಂದು ದರ ಏರಿಕೆ ಬರೆ, ಡೀಸೆಲ್‌ ದುಬಾರಿ ಹಿಂದೆಯೇ ಕ್ಯಾಬ್‌ ದರವೂ ಹೆಚ್ಚಳ

ಈ ತಿಂಗಳಲ್ಲಿ ಟೋಲ್, ಕಾರು ಕಂಪನಿಗಳ ದರ ಏರಿಕೆ, ರಾಜ್ಯ ಸಾರಿಗೆ ಇಲಾಖೆಯ ಕಾರಿನ ಮೇಲೆ ಟ್ಯಾಕ್ಸ್ ಹೆಚ್ಚಳ ಪ್ರಮುಖವಾಗಿ ಡಿಸೇಲ್ ಮೇಲೆ ಮಾರಾಟ ತೆರಿಗೆ ಹೆಚ್ಚಳ ಹೀಗೆ ಹಲವಾರು ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ಅಸೋಸಿಯೇಷನ್, ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್​ಗಳು ಪ್ರತಿ ಕಿಮೀಗೆ 2 ರಿಂದ 5 ರೂ. ವರೆಗೆ ಬಾಡಿಗೆ ಹೆಚ್ಚಳ ಮಾಡಲು ಮುಂದಾಗಿವೆ.

ಮತ್ತೊಂದು ದರ ಏರಿಕೆ ಬರೆ, ಡೀಸೆಲ್‌ ದುಬಾರಿ ಹಿಂದೆಯೇ ಕ್ಯಾಬ್‌ ದರವೂ ಹೆಚ್ಚಳ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Apr 4, 2025 12:56 PM

ಬೆಂಗಳೂರು: ಸಂಬಂಧಿಸಿದ ಎಲ್ಲ ದರಗಳು ಏರುತ್ತಿರುವುದರ (Price Hike) ಹಿನ್ನೆಲೆಯಲ್ಲಿ, ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ಕ್ಯಾಬ್​ಗಳು ಪ್ರಯಾಣ ದರವನ್ನು ಏರಿಸಿವೆ. ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ (Tours and travels) ಕ್ಯಾಬ್​ಗಳ ದರ (Cabs price hike) ಇಂದಿನಿಂದಲೇ ಪ್ರತಿ ಕಿಮೀ ಮೇಲೆ 2ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗುತ್ತಿದೆ. ಉಕ್ಕು ಮತ್ತು ಆಟೋಮೊಬೈಲ್ (Automobile) ದರ ಹೆಚ್ಚಳದ ಹಿನ್ನೆಲೆ ಕಾರು ತಯಾರಿಕಾ ಕಂಪನಿಗಳು ದರ ಹೆಚ್ಚಳ ಮಾಡಿವೆ. ಕೇಂದ್ರ ಸರ್ಕಾರ ಟೋಲ್ ದರ ಹೆಚ್ಚಳ (Toll price hike) ಮಾಡಿದೆ. ರಾಜ್ಯ ಸರ್ಕಾರ ಡಿಸೇಲ್ ಮೇಲಿನ ಮಾರಾಟ (Diesel price hike) ತೆರಿಗೆ ಹೆಚ್ಚಳ ಮಾಡಿದೆ. ಇದೆಲ್ಲದರ ಎಫೆಕ್ಟ್‌ನಿಂದಾಗಿ ಕ್ಯಾಬ್‌ ದರವನ್ನೂ ಏರಿಸಬೇಕಾಗಿ ಬಂದಿದೆ ಎಂದು ಕ್ಯಾಬ್‌ ಅಸೋಸಿಯೇಶನ್‌ಗಳು ಹೇಳಿವೆ.

ಈ ತಿಂಗಳಲ್ಲಿ ಸಾರಿಗೆಗೆ ಸಂಬಂಧಿಸಿದಂತೆ ಟೋಲ್, ಕಾರು ಕಂಪನಿಗಳ ದರ ಏರಿಕೆ, ರಾಜ್ಯ ಸಾರಿಗೆ ಇಲಾಖೆಯ ಕಾರಿನ ಮೇಲೆ ಟ್ಯಾಕ್ಸ್ ಹೆಚ್ಚಳ ಪ್ರಮುಖವಾಗಿ ಡಿಸೇಲ್ ಮೇಲೆ ಮಾರಾಟ ತೆರಿಗೆ ಹೆಚ್ಚಳ ಹೀಗೆ ಹಲವಾರು ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ಅಸೋಸಿಯೇಷನ್, ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್​ಗಳು ಪ್ರತಿ ಕಿಮೀಗೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಿದ್ದೇವೆ. ಇಲ್ಲದಿದ್ದರೆ ನಾವು ಉದ್ಯಮ ನಡೆಸುವುದು ಕಷ್ಟ ಎಂದಿದ್ದಾರೆ.

ಈಗಾಗಲೇ ‌ಕೇಂದ್ರ ಸರ್ಕಾರ ಟೋಲ್ ದರವನ್ನು 5% ರಷ್ಟು ಹೆಚ್ಚಳ ಮಾಡಿದೆ. ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ 3% ರಿಂದ 4% ರಷ್ಟು ದರ ಹೆಚ್ಚಳ ಮಾಡಿದೆ. ಇತ್ತ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ಕಾರುಗಳಿಗೆ ಬರೋಬ್ಬರಿ 5% ರಷ್ಟು ಲೈಫ್ ಟೈಮ್ ಟ್ಯಾಕ್ಸ್ 1% ರಷ್ಟು ಸೆಸ್ ವಿಧಿಸಿದೆ. ಈ ಎಲ್ಲಾ ದರ ಏರಿಕೆಯಿಂದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಅಸೋಸಿಯೇಷನ್ ತಮ್ಮ ಕ್ಯಾಬ್​ಗಳ ಕಿಮೀ ದರ ಏರಿಕೆ ಮಾಡಿದೆ.

ಹತ್ತು ಲಕ್ಷ ರೂ. ಕಾರು ಖರೀದಿ ಮಾಡಿದರೆ, ಹೆಚ್ಚುವರಿಯಾಗಿ 30 ರಿಂದ 40 ಸಾವಿರ ರೂ ಪಾವತಿ ಮಾಡಬೇಕು. 20 ಲಕ್ಷ ರೂ ಕಾರು ಖರೀದಿ ಮಾಡಿದರೆ ಹೆಚ್ಚುವರಿಯಾಗಿ 60 ರಿಂದ 80 ಸಾವಿರ ರೂ. ಪಾವತಿ ಮಾಡಬೇಕು. ಹತ್ತು ಲಕ್ಷ ರೂ. ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ ರಾಜ್ಯ ಸಾರಿಗೆ ಇಲಾಖೆಗೆ ಲೈಫ್ ಟೈಮ್ ಟ್ಯಾಕ್ಸ್ ಹೆಸರಲ್ಲಿ ಹೆಚ್ಚುವರಿಯಾಗಿ 50 ರಿಂದ 60 ಸಾವಿರ ರೂ ಪಾವತಿ ಮಾಡಬೇಕು.

ಈ ಬೆಲೆ ಏರಿಕೆಗಳಿಂದ ನಗರವಾಸಿಗಳಿಗೆ ತುಂಬಾ ಸಮಸ್ಯೆ ಆಗಲಿದೆ. ಒಟ್ಟಿನಲ್ಲಿ ಡಿಸೇಲ್ ದರದ ಎಫೆಕ್ಟ್ ಎಲ್ಲಾ ವರ್ಗದ ಮೇಲೂ ತಟ್ಟುತ್ತಿದೆ. ಅತ್ತ ರಿಕ್ಷಾ ಬಾಡಿಗೆ ದರವನ್ನು ಹೆಚ್ಚಿಸಲು ಸಲ ಬೇಡಿಕೆ ಮಂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾವ ಯಾವ ವಸ್ತುಗಳ ಮೇಲೆ ದರ ಏರಿಕೆ ಆಗಲಿದೆಯೋ ಗೊತ್ತಿಲ್ಲ.

ಇದನ್ನೂ ಓದಿ: Power Cut: ವಿದ್ಯುತ್‌ ದರ ಏರಿಕೆ ಜೊತೆಗೆ ಈಗ ಲೋಡ್‌ ಶೆಡ್ಡಿಂಗ್‌ ಶಾಕ್‌