ಬೆಂಗಳೂರು, ಏ.20: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು (Transport Employees strike) ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಹಿಂಬಾಕಿ ಹಾಗೂ 2024ರ ಜನವರಿಯಿಂದ ವೇತನ ಪರಿಷ್ಕರಣೆಗೆ (Salary Revision) ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ (Protest) ಸಜ್ಜಾಗಿದ್ದು, ರಾಜ್ಯದ ಬಸ್ ಸಂಚಾರದಲ್ಲಿ (Bus Traffic) ಬಹುತೇಕ ಏರುಪೇರು ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಶೇಕಡಾ 7 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಆದರೆ ಶೇಕಡಾ 25 ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ. ವೇತನ ಏರಿಕೆ ಮಾಡದ ಸರಕಾರದ ವಿರುದ್ದ ಮತ್ತೊಂದು ಹಂತದ ಹೋರಾಟಕ್ಕೆ ನೌಕರರು ಸಜ್ಜಾಗಿದ್ದು, ನಾಳೆಯಿಂದ ಧರಣಿಗೆ ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ನಾಲ್ಕು ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿದೆ. ಸಾರಿಗೆ ನೌಕರರು ಭರವಸೆ ಈಡೇರಿಸುವಂತೆ ಪಟ್ಟು ಹಿಡಿದಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಧರಣಿ
ಕರ್ತವ್ಯಕ್ಕೆ ಗೈರಾಗಿ ಸಾವಿರಾರು ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವ ಸಾಧ್ಯತೆ ಇದೆ. ಮುಷ್ಕರಕ್ಕೆ ಮುಂದಾದ ನೌಕರರಿಗೆ ನಿಗಮಗಳು ಶಾಕ್ ಕೊಟ್ಟಿದ್ದು, ನೌಕರರ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ವಾರದ ರಜೆ, ದೀರ್ಘಾವಧಿ ರಜೆ ಹೊರತುಪಡಿಸಿ ಎಲ್ಲರೂ ಹಾಜರಾಗಬೇಕು. ಬೇಕಾಬಿಟ್ಟಿ ರಜೆ ಹಾಕಿ ಪ್ರತಿಭಟನೆಯಲ್ಲಿ ಕುಳಿತುಕೊಂಡರೆ ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದ್ದು, ಬಿಎಂಟಿಸಿ, KSRTC ಯಿಂದ ನೌಕರರಿಗೆ ಸೂಚನೆ ನೀಡಲಾಗಿದೆ.
ನೌಕರರ ಬೇಡಿಕೆಗಳು ಏನು?
2020-2023 ಮೂರು ವರ್ಷ 2 ತಿಂಗಳು
38 ತಿಂಗಳ ಹಿಂಬಾಕಿ ಹಣ ಪಾವತಿಸಬೇಕು
2024ರ ಜನವರಿ 1 ಕ್ಕೆ ಅನ್ವಯವಾಗುವಂತೆ
ಸರ್ಕಾರದ ವಾದವೇನು?
2024ರ ಬದಲು 2026ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನವನ್ನು ಪರಿಷ್ಕರಣೆ ಮಾಡುತ್ತೇವೆ.
38 ತಿಂಗಳ ಬದಲು 18/20 ತಿಂಗಳ ಹಿಂಬಾಕಿ ಕೊಡುತ್ತೇವೆ.
KSRTC Strike: ನಾಳೆ ರಾಜ್ಯಾದ್ಯಂತ KSRTC ಸೇರಿ 4 ನಿಗಮದ ಸಾರಿಗೆ ನೌಕರರ ಪ್ರತಿಭಟನೆ; ಬಸ್ ಸಂಚಾರ ಇರುತ್ತಾ?