ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Poornachandra Tejaswi: ಮೌಲ್ಯವುಳ್ಳ ಬರವಣಿಗೆಯಿಂದ ಹೊಸ ಚಿಂತನೆಗೆ ಅವಕಾಶ: ಪ್ರೊ.ಮ.ಲ.ನ.ಮೂರ್ತಿ

Madhugiri News: ಮಧುಗಿರಿ ಪಟ್ಟಣದ ಟಿ.ವಿ.ವಿ. ಪದವಿಪೂರ್ವ ಕಾಲೇಜಿನಲ್ಲಿ ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಜರುಗಿತು. ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೌಲ್ಯವುಳ್ಳ ಬರವಣಿಗೆ ಓದುಗರನ್ನು ಹೊಸ ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದರು.

ಮೌಲ್ಯವುಳ್ಳ ಬರವಣಿಗೆಯಿಂದ ಹೊಸ ಚಿಂತನೆಗೆ ಅವಕಾಶ

-

Profile Siddalinga Swamy Sep 8, 2025 9:37 PM

ಮಧುಗಿರಿ: ಮೌಲ್ಯವುಳ್ಳ ಬರವಣಿಗೆ ಓದುಗರನ್ನು ಹೊಸ ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಹೇಳಿದರು. ಪಟ್ಟಣದ (Madhugiri News) ಟಿ.ವಿ.ವಿ. ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಎಲ್ಲಾ ಕ್ಷೇತ್ರಗಳಲ್ಲಿ ಆತ್ಮ ವಿಮರ್ಶೆ ಅತ್ಯಗತ್ಯ ಎಂದು ಜನತೆಯನ್ನು ಎಚ್ಚರಿಸಿದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಾಹಿತ್ಯದಲ್ಲಿ ಗ್ರಾಮೀಣರ ಬದುಕು, ಪ್ರಕೃತಿ ಪ್ರೀತಿ ಹೆಚ್ಚು ಬಂದಿದೆ. ಅವರ ʼಕುಬಿ ಮತ್ತು ಇಯಾಲʼ, ʼಅಬಚೂರಿನ ಪೋಸ್ಟ್ ಆಫೀಸ್ʼ, ʼತಬರನ ಕಥೆʼ ಚಲನಚಿತ್ರಗಳಾಗಿ ಪ್ರೇಕ್ಷಕರ ಮನಗೆದ್ದು ಪ್ರಶಸ್ತಿ ಗಳಿಸಿವೆ, ಅವರ ʼಕರ್ವಾಲೋʼ ಕಾದಂಬರಿ ಜನಸಾಮಾನ್ಯರ ಹೃನ್ಮನ ಗೆದ್ದಿವೆ ಎಂದು ಹೇಳಿದರು.

ಗ್ರಂಥ ಪಾಲಕ ಜಿ.ಎಸ್. ನಾಗಭೂಷಣ ಮಾತನಾಡಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಅಣ್ಣನ ನೆನಪು, ಸಹಜ ಕೃಷಿ, ಮಿಸ್ಸಿಂಗ್ ಲಿಂಕ್ ಪುಸ್ತಕಗಳನ್ನು ಮರೆಯಲಾದೀತೆ ಎಂದು ಹೇಳಿದರು.

ಉಪನ್ಯಾಸಕರಾದ ಮಂಜು ಪ್ರಸಾದ್, ವಾಣಿ ಮತ್ತು ದಾಸಪ್ಪ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.‌

ಈ ಸುದ್ದಿಯನ್ನೂ ಓದಿ | IBPS Recruitment 2025: ಬ್ಯಾಂಕ್‌ ಉದ್ಯೋಗಾರ್ಥಿಗಳಿಗೆ ಸಿಹಿ ಸುದ್ದಿ; ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS

ಕಾಲೇಜಿನ ಪ್ರಾಂಶುಪಾಲ ಹನುಮಂತರಾಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ವಿಚಾರ ಧಾರೆಗಳು ಸಾರ್ವಕಾಲಿಕ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.