ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SIRA News: ದಿಲ್‌ಮಾರ್ ಚಲನಚಿತ್ರ ೧೦೦ ದಿನ ಯಶಸ್ವಿ ಪ್ರದರ್ಶನ ಕಾಣಲಿ; ಆರ್.ಉಗ್ರೇಶ್

ಶಿರಾ ತಾಲೂಕಿನ ಕೃಷ್ಣೇಗೌಡ ಅವರ ಸುಪುತ್ರ ರಾಮ್ ಗೌಡ ಅವರು ದಿಲ್ ಮಾರ್ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರನ್ನು ನಮ್ಮ ತಾಲೂಕಿನವರೆಲ್ಲರೂ ಪ್ರೋತ್ಸಾಹಿಸಬೇಕು. ಚಲನಚಿತ್ರವನ್ನು ಕುಟುಂಬ ಸಮೇತ ಹೋಗಿ ಚಿತ್ರ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು. ಗ್ರಾಮೀಣ ಪ್ರತಿಭೆಯನ್ನು ಬೆಳೆಸಬೇಕು

ಶಿರಾ: ಶಿರಾ ತಾಲೂಕಿನ ಬರಪೀಡಿತ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸಿನಿಮಾರಂಗದಲ್ಲಿ ಆಸಕ್ತಿ ಹೊಂದಿ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ದಿಲ್‌ಮಾರ್ ಎಂಬ ಚಲನಚಿತ್ರದಲ್ಲಿ ತಾಲೂಕಿನ ಮಾನಂಗಿ ಗ್ರಾಮದ ರಾಮ್ ಗೌಡ ಅವರು ನಟಿಸಿದ್ದು, ಚಲನಚಿತ್ರವು ಅ.24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಎಲ್ಲರೂ ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ರಾಜ್ಯ ಜೆಡಿಎಸ್ ಪರಿಷತ್ ಅಧ್ಯಕ್ಷ ಆರ್.ಉಗ್ರೇಶ್ ಹೇಳಿದರು.

ಅವರು ನಗರದ ಶ್ರೀ ದುರ್ಗಮ್ಮ ದೇವಾಲಯದ ಆವರಣದಲ್ಲಿ ನಡೆದ ದಿಲ್ ಮಾರ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೆಜಿಎಫ್ ಚಿತ್ರಕ್ಕೆ ಸಂಭಾ ಷಣೆ ಬರೆದಿದ್ದ ಚಂದ್ರಮೌಳಿ ಅವರು ನಿರ್ದೇಶಿಸಿರುವ ದಿಲ್‌ಮಾರ್ ಚಲನಚಿತ್ರಕ್ಕೆ ರಾಮ್ ಗೌಡ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಚಲನಚಿತ್ರ ಯಶಸ್ವಿಯಾಗಿ ೧೦೦ ದಿನ ಪ್ರದರ್ಶನಗೊಳ್ಳಲಿ ಎಲ್ಲರೂ ಪ್ರೋತ್ಸಾಹ ನೀಡಿ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ ಶಿರಾ ತಾಲೂಕಿನ ಕೃಷ್ಣೇಗೌಡ ಅವರ ಸುಪುತ್ರ ರಾಮ್ ಗೌಡ ಅವರು ದಿಲ್ ಮಾರ್ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರನ್ನು ನಮ್ಮ ತಾಲೂಕಿನವರೆಲ್ಲರೂ ಪ್ರೋತ್ಸಾಹಿಸಬೇಕು. ಚಲನಚಿತ್ರವನ್ನು ಕುಟುಂಬ ಸಮೇತ ಹೋಗಿ ಚಿತ್ರ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು. ಗ್ರಾಮೀಣ ಪ್ರತಿಭೆಯನ್ನು ಬೆಳೆಸಬೇಕು ಎಂದರು.

ಇದನ್ನೂ ಓದಿ: Mohammed Siraj: ʼಮನೆಯಲ್ಲಿಡಲು ಸ್ಥಳವಿಲ್ಲದಷ್ಟು ಹಣ ಗಳಿಸುವೆʼ; ನಿಜವಾಯಿತು ಸಿರಾಜ್, ತಾಯಿಗೆ ನೀಡಿದ ಭರವಸೆ

ಕನಕ ಬ್ಯಾಂಕ್ ನಿರ್ದೇಶಕ ಕಡೆಮನೆ ಎಸ್ ರವಿಕುಮಾರ್ ಮಾತನಾಡಿ ನಮ್ಮ ಸ್ಥಳೀಯ ಯುವಕ ರಾಮ್ ಗೌಡ ಅವರು ಕನ್ನಡ ಚಲನಚಿತ್ರದಲ್ಲಿ ನಟಿಸಿರುವುದು ನಮ್ಮ ತಾಲೂಕಿಗೆ ಹೆಮ್ಮೆ ತಂದಿದ್ದು, ನಾವೆಲ್ಲರೂ ಚಲನಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಪ್ರೋತ್ಸಾಹಿಸಬೇಕು. ರಾಮುಗೌಡ ಅವರು ಅಂತರಾಷ್ಟಿçÃಯ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.

ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ ಮಾತನಾಡಿ ಕಲೆಗೆ ಹೆಸರುವಾಸಿಯಾದ ಶಿರಾ ತಾಲೂಕಿನಲ್ಲಿ ನಮ್ಮ ತಾಲೂಕಿನವರಾದ ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಮಂಜುಳ ಅವರು ಚಿತ್ರರಂಗದಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಅವರಂತೆಯೇ ರಾಮುಗೌಡ ಅವರು ಬೆಳೆಯಬೇಕು. ಎಲ್ಲರೂ ಚಿತ್ರಮಂದಿರದಲ್ಲಿ ಚಲನಚಿತ್ರ ನೋಡಬೇಕು. ನಮ್ಮ ಮಾನಂಗಿ ಗ್ರಾಮದ ಯುವ ಪ್ರತಿಭೆ ರಾಮ್ ಗೌಡ ನಾಯಕನಾಗಿ ಅಭಿನಯಿಸಿರುವ ದಿಲ್ ಮಾರ್ ಚಿತ್ರ ರಾಜ್ಯಾದ್ಯಂತ ಯಶಸ್ಸು ಕಾಣಲಿ, ಜನಮನ ಗೆದ್ದು ನೂರು ದಿನೋತ್ಸವದತ್ತ ಹೆಜ್ಜೆ ಇಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಾಮಯ್ಯ, ನಗರಸಭೆ ಮಾಜಿ ಅಧ್ಯಕ್ಷ ಅಂಜಿನಪ್ಪ, ನಗರಸಭಾ ಸದಸ್ಯ ಆರ್.ರಾಮು, ಮಾಜಿ ಸದಸ್ಯ ಎಂ.ಎನ್.ರಾಜು, ಮುಖಂಡ ರಾದ ಹಲಗುಂಡೇಗೌಡ, ಮಾಲಿ ಸುರೇಶ್, ಮಾನಂಗಿ ರಾಮು, ರೇಣುಕಮ್ಮ, ಯಶಸ್ವಿನಿ, ಅಂಬಿಕ ಸೇರಿದಂತೆ ಹಲವರು ಹಾಜರಿದ್ದರು.