ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S R Srinivas: ರಾಜ್ಯದಲ್ಲಿ ತಲಾ ಆದಾಯ ಹೆಚ್ಚಿಸುವಲ್ಲಿ ಗ್ಯಾರಂಟಿ ಯೋಜನೆ ಪಾತ್ರ ಹೆಚ್ಚಿದೆ : ಶಾಸಕ ಎಸ್.ಆರ್.ಶ್ರೀನಿವಾಸ್

ಸ್ವಾತಂತ್ರ್ಯ ಎಂದರೆ ದೇಶದ ಪ್ರಗತಿಯ ಜೊತೆ ಸಮಾಜ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಆಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಸಮೃದ್ಧ ದೇಶವನ್ನು ಕಟ್ಟುವ ಕೆಲಸ ಆಗಬೇಕಿದೆ. ನಮ್ಮಲ್ಲಿನ ಯುವಶಕ್ತಿ ಬಳಸಿ ಇಡೀ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಮೊದಲು ದೇಶಾಭಿಮಾನ ಬೆಳೆಸಬೇಕಿದೆ.

ಗುಬ್ಬಿ: ಎಲ್ಲಾ ರಂಗದಲ್ಲೂ ಶಕ್ತಿಯುತವಾಗಿ ಬೆಳೆದ ನಮ್ಮ ದೇಶದಲ್ಲಿ ಕರ್ನಾಟಕ ಹೆಚ್ಚಿನ ತಲಾ ಆದಾಯ ಹೊಂದಿದೆ. 1.77 ಲಕ್ಷ ರೂಗಳ ತಲಾ ಆದಾಯ ಇದ್ದ ನಮ್ಮ ರಾಜ್ಯ ಕಳೆದ ಮೂರು ವರ್ಷದಲ್ಲಿ 2.46 ಲಕ್ಷ ರೂಗಳನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಯೂ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಮಾತ ನಾಡಿದ ಅವರು ಆರ್ಥಿಕವಾಗಿ ಬೆಳೆದ ನಾಲ್ಕನೇ ದೇಶ ಎಂದು ಹೇಳುವ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ತಲಾ ಆದಾಯ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಗಣ್ಯ ಎನಿಸಿದೆ ಎಂದರು.

ಇದನ್ನೂ ಓದಿ: Tumkur News: ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣ; ಕಿರುಕುಳಕ್ಕೆ ಬೇಸತ್ತು ಅತ್ತೆಯನ್ನೇ ಕೊಂದಿದ್ದ ಅಳಿಯ!

ಸ್ವಾತಂತ್ರ್ಯ ದಿನಾಚರಣೆ ದಿನದಂದು ತ್ಯಾಗ ಬಲಿದಾನ ಮಾಡಿದ ಗಣ್ಯರನ್ನು ಸ್ಮರಿಸುವ ದಿನವಾಗಿ ಹಾಗೂ ಯುವ ಪೀಳಿಗೆಗೆ ದೇಶ ಭಕ್ತಿ ಬೆಳೆಸುವ ಕಾರ್ಯಕ್ರಮವಾಗಿ ಆಚರಣೆ ಆಗಬೇಕು. ತ್ವರಿತಗತಿ ಯಲ್ಲಿ ಬೆಳೆಯುತ್ತಿರುವ ನಮ್ಮ ದೇಶದ ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಬಗ್ಗೆ ಅರಿವು ಮೂಡ ಬೇಕಿದೆ ಎಂದ ಅವರು ಎಲ್ಲಾ ರಂಗದಲ್ಲೂ ಶಕ್ತಿಯುತವಾಗಿ ಬೆಳೆದ ನಮ್ಮ ದೇಶ ಸಾಕ್ಷರತೆಯಲ್ಲಿ ಈ ಹಿಂದೆ ಇದ್ದ ಶೇಕಡಾ 12 ರಿಂದ ಈಗ ಶೇಕಡಾ 80 ರಷ್ಟು ಪ್ರಗತಿ ಹೊಂದಿದೆ. ಇದೇ ಹಾದಿಯಲ್ಲಿ ದೇಶವನ್ನು ಮತ್ತಷ್ಟು ಗಟ್ಟಿಯಾಗಿ ಬೆಳೆಸುವ ಕೆಲಸ ಒಟ್ಟಿಗೆ ಮಾಡೋಣ ಎಂದು ಕರೆ ನೀಡಿ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳನ್ನು ಕೋರಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಆರತಿ.ಬಿ ಸಂದೇಶ ನೀಡಿ ಸ್ವಾತಂತ್ರ್ಯ ಎಂದರೆ ದೇಶದ ಪ್ರಗತಿಯ ಜೊತೆ ಸಮಾಜ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಆಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಸಮೃದ್ಧ ದೇಶವನ್ನು ಕಟ್ಟುವ ಕೆಲಸ ಆಗಬೇಕಿದೆ. ನಮ್ಮಲ್ಲಿನ ಯುವಶಕ್ತಿ ಬಳಸಿ ಇಡೀ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಮೊದಲು ದೇಶಾಭಿಮಾನ ಬೆಳೆಸಬೇಕಿದೆ. ಈ ಕೆಲಸಕ್ಕೆ ಈ ಕಾರ್ಯ ಕ್ರಮ ಸೂಕ್ತ ವೇದಿಕೆಯಾಗಿದೆ. ಮುಂದಿನ ಪೀಳಿಗೆ ಮಕ್ಕಳಿಗೆ ಮೊದಲು ದೇಶದ ಬಗ್ಗೆ ಪ್ರೇಮ, ವಾತ್ಸಲ್ಯ, ಅಭಿಮಾನ ಬೆಳೆಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ಮಾತ ನಾಡಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವೆಲ್ಲರೂ ಒಂದೇ ಎಂಬ ಭಾವನೆ ಗಟ್ಟಿಯಾಗಿ ಮೂಡಬೇಕು. ವ್ಯಾಪಾರಕ್ಕೆ ಬಂದ ಬ್ರಿಟಿಷರು ನಮ್ಮಲ್ಲಿನ ಪ್ರಾಂತ ಆಳ್ವಿಕೆಯನ್ನು ಜಾಣತನದಲ್ಲಿ ಕಬಳಿಸಿ ಇಡೀ ದೇಶವನ್ನೇ ಆಳ್ವಿಕೆ ಮಾಡಿದರು. ನಮ್ಮನ್ನು ಗುಲಾಮರಾಗಿ ಮಾಡಿದ್ದ ಸಮಯದಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದ ಚಳವಳಿ ಸ್ವಾತಂತ್ರ್ಯ ತಂದು ಕೊಟ್ಟಿತು. ಆ ದಿನ ಶುಕ್ರವಾರ ಆಗಿತ್ತು. ಅದೇ ರೀತಿ ಈ ವರ್ಷವೂ ಶುಕ್ರವಾರ ಬಂದಿದೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಮುನ್ನ ಪೊಲೀಸ್ ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್, ಗೃಹರಕ್ಷಕ ದಳದಿಂದ ಆಕರ್ಷಕ ಕವಾಯತು ನಡೆಸಲಾಯಿತು. ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಯೋಧರಿಗೆ ಸನ್ಮಾನ ಮಾಡಲಾಯಿತು. ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತಾ ಸೇರಿದಂತೆ ಎಲ್ಲಾ ಪಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಮಾಜ ಸೇವಕರು ಉಪಸ್ಥಿತರಿದ್ದರು.