Tumkur University: ಕೇಂದ್ರ ಸರ್ಕಾರದ ʼಮಿಷನ್ ಉತ್ಥಾನ್ ಯೋಜನೆʼಗೆ ತುಮಕೂರು ವಿವಿ ಆಯ್ಕೆ
Tumkur University: ಮಿಷನ್ ಉತ್ಥಾನ್ ಯೋಜನೆಗೆ ಆಯ್ಕೆಯಾದ ದೇಶದ ಕೆಲವೇ ಸಂಸ್ಥೆಗಳಲ್ಲಿ ತುಮಕೂರು ವಿವಿ ಒಂದಾಗಿದೆ. ತುಮಕೂರು ವಿವಿ ವ್ಯಾಪ್ತಿಯಲ್ಲಿ 90ಕ್ಕೂ ಸಂಯೋಜಿತ ಕಾಲೇಜುಗಳಿದ್ದು, ಇವುಗಳ ಮೂಲಕ ಮಿಶನ್ ಉತ್ಥಾನ್‌ನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ.
ತುಮಕೂರು: ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಮಹತ್ವಾಕಾಂಕ್ಷಿ ಯೋಜನೆಯಾದ ʼಮಿಷನ್ ಉತ್ಥಾನ್’ನ (Mission Utthan Scheme) ನೋಡಲ್ ಕಚೇರಿಯಾಗಿ ತುಮಕೂರು ವಿಶ್ವವಿದ್ಯಾನಿಲಯವು (Tumkur University) ಆಯ್ಕೆಯಾಗಿದೆ. ಈ ಯೋಜನೆಗೆ ದೇಶದಲ್ಲಿ ಆಯ್ಕೆಯಾದ ಕೆಲವೇ ಸಂಸ್ಥೆಗಳಲ್ಲಿ ತುಮಕೂರು ವಿವಿ ಒಂದಾಗಿದೆ. ಎರಡು ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ ಹಾಗೂ ಸಂಶೋಧನೆಯನ್ನು ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಆಶ್ರಯದಲ್ಲಿ ‘ಮಿಷನ್ ಉತ್ಥಾನ್’ ಅನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ತನ್ನ ‘ ಇನ್ಕ್ಯುಬೇಷನ್ , ಇನ್ನೋವೇಶನ್ ಆ್ಯಂಡ್ ಎಂಟರ್‌ಪ್ರಿನ್ಯುರ್‌ಶಿಪ್ ಸೆಂಟರ್’ ಮೂಲಕ ತುಮಕೂರು ಜಿಲ್ಲೆಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಜಾರಿಗೆ ತರಲಿದೆ.
ಮಂಗಳೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಇತ್ತೀಚೆಗೆ ನಡೆದ ‘ಎಮರ್ಜ್ 2025’ ಸ್ಟಾರ್ಟಪ್ ಉತ್ಸವದಲ್ಲಿ ‘ಮಿಷನ್ ಉತ್ಥಾನ್’ ಯೋಜನೆಗೆ ಚಾಲನೆ ನೀಡಲಾಗಿದ್ದು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು.
ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸ್ಟ್ರಾಟೆಜಿಕ್ ಅಲಯನ್ಸ್ ನಿರ್ದೇಶಕಿ ಡಾ. ಸಪ್ನಾ ಪೋತಿ ಅವರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಯುವ ಉದ್ಯಮಿಗಳು ಆರಂಭಿಸಬಹುದಾದ ಸ್ಟಾರ್ಟಪ್ ಉದ್ಯಮಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ತುಮಕೂರು ವಿಶ್ವವಿದ್ಯಾನಿಲಯವು ಯುರೋಪಿನ ವಿಶಿಷ್ಟ ಉದ್ಯಮ ಮಾದರಿಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ಸೌತ್ ವೇಲ್ಸ್ ಜತೆ ಈಗಾಗಲೇ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಅದರ ಇನ್ಕ್ಯುಬೇಷನ್ ಮತ್ತು ಇನ್ನೋವೇಶನ್ ಕೇಂದ್ರ ಸಕ್ರಿಯವಾಗಿದೆ.
ತುಮಕೂರು ವಿವಿ ವ್ಯಾಪ್ತಿಯಲ್ಲಿ 90ಕ್ಕೂ ಸಂಯೋಜಿತ ಕಾಲೇಜುಗಳಿದ್ದು, ಇವುಗಳ ಮೂಲಕ ಮಿಶನ್ ಉತ್ಥಾನ್‌ನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಗ್ರಾಮೀಣ ತಂತ್ರಜ್ಞಾನ ಅಭಿವೃದ್ಧಿ, ಸ್ಥಳೀಯ ಉದ್ಯಮಗಳಿಗೆ ಬೆಂಬಲ, ಸಮಾಜಮುಖಿ ತಂತ್ರಜ್ಞಾನ ಕೋರ್ಸುಗಳ ಆರಂಭ, ಮಹಿಳಾ ಉದ್ದಿಮೆದಾರರಿಗೆ ವಿಶೇಷ ಪ್ರೋತ್ಸಾಹ ಇತ್ಯಾದಿ ಯೋಜನೆಗಳನ್ನು ತುಮಕೂರು ವಿವಿ ಭವಿಷ್ಯದಲ್ಲಿ ಜಾರಿಗೆ ತರಲಿದೆ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಬುನಾದಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ
ಗುಬ್ಬಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಶಿಕ್ಷಣದ ಬುನಾದಿ ಬಹುಮುಖ್ಯವಾಗಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಭಾಷೆ, ಬರವಣಿಗೆ, ಕೌಶಲ್ಯತೆ, ಸಾಮಾನ್ಯ ಜ್ಞಾನವನ್ನು ಈ ಹಂತದಲ್ಲೇ ಪಡೆದುಕೊಂಡಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಬಹುದೆಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಹೇಳಿದರು.
ತಾಲೂಕಿನ ಕಾಡಶೆಟ್ಟಿಹಳ್ಳಿ ಜ್ಞಾನಮಲ್ಲಿಕಾ-ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ‘ಮಕ್ಕಳೊಡನೆ ಮಾತು ಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾಥಿಗಳಲ್ಲಿ ಬದ್ಧತೆ, ಕೌಶಲ್ಯ, ವ್ಯವಹಾರಿಕ ಜ್ಞಾನ, ಹಿರಿ-ಕಿರಿಯರಿಗೆ ಗೌರವ ಕೊಡುವುದನ್ನು ಕಲಿಸುವುದು ಗ್ರಾಮೀಣ ಪ್ರದೇಶದ ಪಾಠ ಶಾಲೆಗಳೆಂದರೆ ಹಳ್ಳಿಗಳು, ಪ್ರಾಥಮಿಕ ಹಂತದ ಶಿಕ್ಷಣದ ಬೂನಾದಿ ಬಹುಮುಖ್ಯವಾದದ್ದು, ಪ್ರಾಥಮಿಕ ಶಿಕ್ಷಣದ ಬೂನಾದಿ ಬಿಗಿಯಾಗಿದ್ದರೆ ಜ್ಞಾನದ ಸೌಧಗಳನ್ನು ಸುಲಭವಾಗಿ ಕಟ್ಟಬಹುದು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮೈಸೂರು ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಅವರು ಸಮ ಸಮಾಜದ ಕನಸ್ಸನ್ನು ಕಂಡವರು, ಒಬ್ಬರು ಸಂವಿಧಾನ ನೀಡಿದರೆ, ಮತ್ತೊಬ್ಬರು ಆಗಿನ ಕಾಲಕ್ಕೆ ಮೀಸಲಾತಿಯ ಮೂಲಕ ಶಿಕ್ಷಣ ನೀಡಿದಂತಹ ಮಹಾನುಭಾವರು. ಅಂಬೇಡ್ಕರ್ ಅವರು ಇಡೀ ಪ್ರಪಂಚದಲ್ಲಿ ಹೆಚ್ಚು ಶಿಕ್ಷಣದ ಜ್ಞಾನ ಪಡೆದವರಲ್ಲಿ ಒಬ್ಬರು ಎಂಬುದನ್ನು ಜಗತ್ತಿನ ಶಿಕ್ಷಣ ತಜ್ಞರುಗಳು ಹೇಳಿದ್ದಾರೆ, ಅವರನ್ನು ಜ್ಞಾನದ ಸೂರ್ಯ ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು.
ಶಾಲೆಗಳಲ್ಲಿ ಮಕ್ಕಳಿಗೆ ವೇದಿಕೆ ಕಾರ್ಯಕ್ರಮಗಳನ್ನು ಕಲ್ಪಿಸುವುದರಿಂದ ಧೈರ್ಯದ ಜೊತೆಗೆ ಭಾಷೆಯನ್ನು ಸಂಭೋದಿಸುವ, ಮಾತನಾಡುವ ಕೌಶಲ್ಯ ಮಕ್ಕಳಲ್ಲಿ ಬೆಳವಣಿಗೆಯಾಗುತ್ತದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ಸಹಕಾರಿಯಾಗುತ್ತದೆ, ಅದೇ ರೀತಿ ಮಕ್ಕಳಲ್ಲಿ ಕಂಠಪಾಠ, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ ಏರ್ಪಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿಸಿದರು.
ಈಗ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಇಂಗ್ಲಿಷ್ ಭಾಷೆಯೇ ಹೆಚ್ಚು ಪ್ರಧಾನವಾಗುತ್ತಿರುವ ಕಾಲದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಲು, ಇತರೆ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾಗಿರುವುದರಿಂದ ಇಂಗ್ಲಿಷ್ ಜ್ಙಾನದ ಅರಿವು ಬಹುಮುಖ್ಯವಾಗಿರುವುದರಿಂದ ಮಾತೃಭಾಷೆಯ ಜ್ಞಾನದ ಜತೆಗೆ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಪಡೆದುಕೊಳ್ಳಬೇಕಾದದ್ದು ಇಂದು ಹೆಚ್ಚು ಪ್ರಸ್ತುತ ಎಂದು ತಿಳಿಸಿದರು.
ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದು, ಬರೆಯುವುದು ಈ ಎರಡು ಆದ ಮೇಲೆ ಮನನ ಮಾಡಿಕೊಳ್ಳುವುದು, ಮೆಲಕು ಹಾಕುವುದು ಬಹುಮುಖ್ಯವಾದದ್ದು, ೩ ಗಂಟೆಗಳಲ್ಲಿ ನಾವು ಪರೀಕ್ಷೆ ಬರೆಯುವುದರಿಂದ ಅಲ್ಲಿಯ ಪ್ರಶ್ನೆಗಳಿಗೆ ನಿಖರ ಮತ್ತು ತಪ್ಪಿಲ್ಲದೆ, ಅಂದವಾಗಿ ಬರೆಯುವುದು ಬಹುಮುಖ್ಯ, ಅಂದವಾದ ಬರವಣಿಗೆಯೇ ಕೆಲವೊಮ್ಮೆ ನಿಮಗೆ ಯಶಸ್ಸನ್ನು ತಂದು ಕೊಡಲಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Rangaswamy Mookanahalli: ವಿಶ್ವೇಶ್ವರ್ ಭಟ್ಟರಿಂದ ರಂಗಸ್ವಾಮಿ ಮೂಕನಹಳ್ಳಿ ಅವರ ʼಜಪಾನಿನಲ್ಲಿ ರಂಗʼ ಪುಸ್ತಕ ಬಿಡುಗಡೆ
ಸಮಾರಂಭದಲ್ಲಿ ವೆಂಕಟಾಚಲ, ಗ್ರಾಮ ಪಂಚಾಯತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್, ಮುಖ್ಯೋಪಾಧ್ಯಾಯ ಗಂಗಾಧರ, ವಕೀಲರಾದ ಕೆ.ಎಸ್.ರಾಘವೇಂದ್ರ ಉಪಸ್ಥಿತರಿದ್ದರು.