BBK 12: ಬಿಗ್ ಬಾಸ್ಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಮ್ಯುಟೆಂಟ್ ರಘು ಯಾರು?
ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ರಘು ಅವರನ್ನು ಪ್ರೀತಿಯಿಂದ ಸ್ವಾಗತ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ಮ್ಯುಟೆಂಟ್ ರಘು ಅವರ ಪೂರ್ಣ ನಾಮ ರಾಘವೇಂದ್ರ ಎಸ್ ಹೊಂಡಕೇರಿ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಮುಕ್ತಾಯಗೊಂಡ ಕ್ವಾಟ್ಲೆ ಕಿಚನ್ ಶೋನಲ್ಲಿ ಇವರು ವಿನ್ನರ್ ಆಗಿದ್ದರು.

mutant raghu bbk 12 wild card -

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮೊದಲ ಫಿನಾಲೆ ಮುಕ್ತಾಯಗೊಂಡಿದೆ. ಮೂರನೇ ವಾರದಲ್ಲೇ ನಡೆದ ಫಿನಾಲೆ ಬಹಳಷ್ಟು ವಿಶೇಷವಾಗಿತ್ತು. ಮನೆಯೊಳಗಿರುವ ಅರ್ಧಕರ್ಧ ಮಂದಿ ಹೊರಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಅಂತಿಮವಾಗಿ ಮಂಜು ಭಾಷಿಣಿ ಹಾಗೂ ಅಶ್ವಿನಿ ಎಸ್ಎನ್ ಇಬ್ಬರು ಎಲಿಮಿನೇಟ್ ಆಗಿ ಆಚೆ ಬಂದರು. ಒಟ್ಟಾರೆಯಾಗಿ ಮೂರು ವಾರಗಳಲ್ಲಿ ಐದು ಮಂದಿ ಔಟ್ ಆಗಿದ್ದಾರೆ. ನಿನ್ನೆ ಒಟ್ಟು ಮೂವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಇವರಲ್ಲಿ ಮ್ಯುಟೆಂಟ್ ರಘು ಕೂಡ ಒಬ್ಬರು. ಇನ್ನಿಬ್ಬರು ನಟಿ ರಿಷಾ ಗೌಡ ಹಾಗೂ ಸೂರಜ್ ಸಿಂಗ್.
ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ರಘು ಅವರನ್ನು ಪ್ರೀತಿಯಿಂದ ಸ್ವಾಗತ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ಮ್ಯುಟೆಂಟ್ ರಘು ಅವರ ಪೂರ್ಣ ನಾಮ ರಾಘವೇಂದ್ರ ಎಸ್ ಹೊಂಡಕೇರಿ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಮುಕ್ತಾಯಗೊಂಡ ಕ್ವಾಟ್ಲೆ ಕಿಚನ್ ಶೋನಲ್ಲಿ ಇವರು ವಿನ್ನರ್ ಆಗಿದ್ದರು. ಇವರಿಗೆ ಈಗ 44 ವರ್ಷ. ಆದರೆ ನೋಡಲು ಫುಲ್ ಫಿಟ್ ಆಗಿ ಕಾಣುತ್ತಾರೆ. ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಕರ್ನಾಟಕ ಹಾಗೂ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಇವರಿಗೆ ಕರ್ನಾಟಕ ಸರ್ಕಾರ 2022 ರಲ್ಲಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವವಿಸಿದೆ.
ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಈ ಮಹತ್ವದ ಪ್ರಶಸ್ತಿ ಸ್ವೀಕರಿಸಿದ ರಾಜ್ಯದ ಮೊಟ್ಟ ಮೊದಲ ಪವರ್ ಲಿಫ್ಟರ್ ಎಂಬ ಕೀರ್ತಿಗೆ ಕೂಡ ರಾಘವೇಂದ್ರ ಹೊಂಡದಕೇರಿ ಭಾಜನರಾಗಿದ್ದರು. 5X ಪವರ್ ಲಿಫ್ಟಿಂಗ್‌ನಲ್ಲಿ ರಾಘವೇಂದ್ರ ವರ್ಲ್ಡ್ ಚಾಂಪಿಯನ್ ಕೂಡ ಆಗಿದ್ದಾರೆ. ರಾಘವೇಂದ್ರ ಸೆಲೆಬ್ರಿಟಿ ಕೋಚ್ ಕಮ್ ನಟ ಸಹ ರಘು ಅವರು ಸೆಲೆಬ್ರಿಟಿಗಳಿಗೆ ಜಿಮ್ ಕೋಚ್ ಮಾಡುತ್ತಾರೆ. ಕಾಟೇರ ಹಾಗೂ ಕ್ರಾಂತಿ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದಲ್ಲದೆ, ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿಯೂ ಅವರು ವಿಲನ್ ಆಗಿ ನಟಿಸಿದ್ದಾರೆ.
BBK 12: ಬಿಗ್ ಬಾಸ್ನಲ್ಲಿ ಶಾಕಿಂಗ್ ಎಲಿಮಿನೇಷನ್: ಮಂಜು ಭಾಷಿಣಿ-ಅಶ್ವಿನಿ ಔಟ್
ಬಿಕಾಂ ಮುಗಿಸಿದ ಬಳಿಕ 19 ವರ್ಷ ವಯಸ್ಸಿನಲ್ಲೇ ಪ್ರತಿಷ್ಠಿತ ಟೆಕ್ನಿಕಲರ್ ಇಂಡಿಯಾ ಸಂಸ್ಥೆಯಲ್ಲಿ ಉದ್ಯೋಗ ಹಿಡಿದು, 12 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಆನಿಮೇಷನ್ ವಿಭಾಗದಲ್ಲಿ ಇವರು ಕೆಲಸ ಮಾಡಿದ್ದಾರೆ. ಮಾಸಿಕ 1.25 ಲಕ್ಷ ರೂ. ಸಂಭಾವನೆ ಇತ್ತಂತೆ. ಈ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಆದರೆ, ಕ್ರೀಡಾ ವಿಭಾಗದಲ್ಲಿ ದೇಶಕ್ಕೆ ಕೀರ್ತಿ ತರುವ ತುಡಿತ ಸಲುವಾಗಿ ಐಟಿ ಉದ್ಯೋಗವನ್ನು ತ್ಯಾಗ ಮಾಡಿ 2013ರಲ್ಲಿ ಪವರ್‌ಲಿಫ್ಟಿಂಗ್ ಆರಂಭಿಸಿದರು. ರಾ ಪವರ್‌ಲಿಫ್ಟಿಂಗ್‌ನಲ್ಲಿ ದೇಶದ ಅಗ್ರಮಾನ್ಯ ಲಿಫ್ಟರ್ ಆಗಿ ರಘು ಹೊರಹೊಮ್ಮಿದರು.