ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pro-Pakistan slogans: ಬಿಡದಿ ಕಾರ್ಖಾನೆಯಲ್ಲಿ ಪಾಕ್‌ ಪರ ಬರಹ; ಹೈಮದ್ ಹುಸೇನ್, ಸಾದಿಕ್ ಅರೆಸ್ಟ್‌

Pro-Pakistan slogans: ಬಿಡದಿಯ ಕಾರ್ಖಾನೆಯೊಂದರ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನಕ್ಕೆ ಜೈ , ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಬರೆಯಲಾಗಿತ್ತು. ಜತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನಕಾರಿ ಪದ ಬಳಸಲಾಗಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿಡದಿ ಕಾರ್ಖಾನೆಯಲ್ಲಿ ಪಾಕ್‌ ಪರ ಬರಹ; ಇಬ್ಬರು ಅರೆಸ್ಟ್‌

Profile Prabhakara R Mar 19, 2025 9:11 PM

ರಾಮನಗರ: ಬಿಡದಿಯ ಕಾರ್ಖಾನೆಯಲ್ಲಿ (Bidadi Factory) ಪಾಕಿಸ್ತಾನದ ಪರ ಗೋಡೆ ಬರಹ ಪ್ರಕರಣದಲ್ಲಿ (Pro-Pakistan slogans) ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕದ ಹೈಮದ್ ಹುಸೇನ್(24) ಮತ್ತು ಸಾದಿಕ್(20) ಬಂಧಿತರು. ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನಕ್ಕೆ ಜೈ , ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಬರೆಯಲಾಗಿತ್ತು. ಜತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನಕಾರಿ ಪದ ಬಳಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು (Two accused arreste) ಪೊಲೀಸರು ಬಂಧನ ಮಾಡಿದ್ದಾರೆ.

ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಇಬ್ಬರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆಯಲಾಗಿತ್ತು. ಜತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನ ಪದ ಬಳಕೆ ಮಾಡಿದ್ದರು. ಹೀಗಾಗಿ ದೇಶದ್ರೋಹದ ಆರೋಪದಡಿ ಇದೀಗ ಇಬ್ಬರನ್ನು ಬಂಧಿಸಲಾಗಿದೆ.

ಜಿಲ್ಲೆಯ ಬಿಡದಿ ಬಳಿ ಇರುವ ಟೊಯೋಟಾ ಬೋಷೂಕು ಆಟೋಮೇಟಿವ್ ಇಂಡಿಯಾ ಕಂಪನಿಯ ಒಳಗಿರುವ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಕೀ ಜೈ, ಪಾಕಿಸ್ತಾನಕ್ಕೆ ಜಯವಾಗಲಿ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರಹ ಒಂದನ್ನು ಬರೆಯಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಈ ಸುದ್ದಿಯನ್ನೂ ಓದಿ | Children Death: ಆಟವಾಡುವಾಗ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ

ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ಹೈಕೋರ್ಟ್ ವಿಭಿನ್ನ ಶಿಕ್ಷೆಯನ್ನು ನೀಡಿತ್ತು. ಇನ್ನು ಮುಂದೆ ಆತನ ಬಾಯಲ್ಲಿ ತಿಂಗಳಲ್ಲಿ ಎರಡು ಕಂತಿನಂತೆ 42 ಬಾರಿ 'ಭಾರತ್​ ಮಾತಾ ಕಿ ಜೈ' ಎಂಬ ಘೋಷಣೆ ಮೊಳಗುವಂತೆ ಮಾಡಿತ್ತು. ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ ಎಂಬ ವ್ಯಕ್ತಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹದ ಕೃತ್ಯ ಎಸಗಿದ್ದ. ಆತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆತ ಜಾಮೀನು ಕೋರಿ ಮಧ್ಯಪ್ರದೇಶ ಹೈಕೋರ್ಟ್​ ಮೆಟ್ಟಿಲೇರಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಾಲಿವಾಲ್ ಅವರ ಪೀಠ, ಆರೋಪಿ ತಪ್ಪನ್ನು ಗುರುತಿಸಿ, ಜತೆಗೆ, ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಪೊಲೀಸ್​​ ಠಾಣೆಗೆ ತೆರಳಿ, ರಾಷ್ಟ್ರಧ್ವಜಕ್ಕೆ ವಂದಿಸುವ ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿತ್ತು.

ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಅನ್ನು ಟ್ರಯಲ್ ಕೋರ್ಟ್​​ಗೆ ಸೂಕ್ತ ಶ್ಯೂರಿಟಿ ಒದಗಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ​​​ನಿರ್ದೇಶಿಸಿತ್ತು. ಇಷ್ಟೇ ಅಲ್ಲದೇ, ಫೈಝಲ್​ ಭೋಪಾಲ್ ಪೊಲೀಸ್ ಠಾಣೆಗೆ ತಿಂಗಳಿಗೆ ಎರಡು ಬಾರಿ ಹಾಜರಾಗಿ ಅಲ್ಲಿನ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬೇಕು ಹಾಗೂ 21 ಬಾರಿ 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗುವಂತೆ ಸೂಚಿಸಿತ್ತು.

ಅಕ್ರಮ ಮರಳು ಲಾರಿಯಡಿಗೆ ಸಿಲುಕಿ ಇಬ್ಬರು ಯುವಕರ ಸಾವು

ಕೊಪ್ಪಳ: ಅಕ್ರಮವಾಗಿ ಮರಳು (sand mafia) ಸಾಗಿಸುತ್ತಿದ್ದ ಟಿಪ್ಪರ್​ ಹರಿದು (Road Accident News) ಬೈಕ್​ ಸವಾರರಿಬ್ಬರು (bike riders) ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala News) ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ನಡೆದಿದೆ. ರಮೇಶ ಜವಳಗೇರಿ (27), ಸಿದ್ದಪ್ಪ ಪ್ಯಾಟ್ಯಾಳ್ (34) ಮೃತ ಯುವಕರು. ಸಾವನ್ನಪ್ಪಿರುವ ಇಬ್ಬರು ಯುವಕರು ಕನಕಗಿರಿ‌ ತಾಲೂಕಿನ ಗುಡೂರಿನ ನಿವಾಸಿಗಳಾಗಿದ್ದು, ಇಂದು ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿ ಯುವಕರ ದೇಹ ಛಿದ್ರವಾಗಿದೆ.

ನವಲಿ ಕಡೆಯಿಂದ ಗುಡೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಪೈಕಿ ಒಬ್ಬನ ಮೃತದೇಹ ಛಿದ್ರ ಛಿದ್ರವಾಗಿದೆ. ರಸ್ತೆ ತುಂಬ ದೇಹದ ಮಾಂಸ ಚೆಲ್ಲಾಪಿಲ್ಲಿಯಾಗಿದೆ. ಮತ್ತೋರ್ವ ಯುವಕನ ತಲೆ ಛದ್ರಗೊಂಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಗಲು ರಾತ್ರಿ ಎನ್ನದೇ ಇಲ್ಲಿ ಮರಳು ತುಂಬಿದ ಟಿಪ್ಪರ್ ಗಳು ಓಡಾಡುತ್ತಿದ್ದು, ಅಕ್ರಮ ಮರಳು ದಂಧೆಗೆ ಯುವಕರು ಬಲಿಯಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಈ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ |