ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UPSC Result 2024: ಯುಪಿಎಸ್‌ಸಿ ಫಲಿತಾಂಶ; ಟಾಪ್‌ 50ರೊಳಗೆ ಕರ್ನಾಟಕದ ಇಬ್ಬರು ವೈದ್ಯರು, ಪಾಸಾದ ಕನ್ನಡಿಗರ ಪಟ್ಟಿ ಇಲ್ಲಿದೆ

UPSC Result 2024: ಕರ್ನಾಟಕ ಹಲವು ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಟಾಪ್‌ 50ರೊಳಗೆ ರಾಜ್ಯದ ಇಬ್ಬರು ವೈದ್ಯರು ಇದ್ದಾರೆ. ಡಾ.ರಂಗ ಮಂಜು 24ನೇ ರ‍್ಯಾಂಕ್ ಮತ್ತು ಡಾ.ಸಚಿನ್ ಹರಿಹರ್ 41ನೇ ಸ್ಥಾನ ಪಡೆದಿದ್ದಾರೆ.

ಯುಪಿಎಸ್‌ಸಿ ಫಲಿತಾಂಶ; ಟಾಪ್‌ 50ರೊಳಗೆ ಕರ್ನಾಟಕದ ಇಬ್ಬರು ವೈದ್ಯರು

Profile Prabhakara R Apr 22, 2025 7:49 PM

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ 2024ರ ನಾಗರಿಕ ಸೇವಾ ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 1009 ಅಭ್ಯರ್ಥಿಗಳು ವಿವಿಧ ಕೇಂದ್ರ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಪ್ರಯಾಗ್​ರಾಜ್​ ನಿವಾಸಿ ಶಕ್ತಿ ದುಬೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಇನ್ನು ಕರ್ನಾಟಕ ಹಲವು ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಟಾಪ್‌ 50ರೊಳಗೆ ರಾಜ್ಯದ ಇಬ್ಬರು ವೈದ್ಯರು ಇದ್ದಾರೆ. ಡಾ.ರಂಗ ಮಂಜು 24ನೇ ರ‍್ಯಾಂಕ್ ಮತ್ತು ಡಾ.ಸಚಿನ್ ಹರಿಹರ್ 41ನೇ ಸ್ಥಾನ ಪಡೆದಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿ ಸಚಿನ್ ಹರಿಹರ್ ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸ್ತಿರುವ ಸಚಿನ್ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಇನ್ನು, ಬಾಗಲಕೋಟೆ ಜಿಲ್ಲೆಯ ‌ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಪಾಂಡುರಂಗ ಸದಾಶಿವ ಕಂಬಳಿ 529ನೇ ರ‍್ಯಾಂಕ್​ ಪಡೆದಿದ್ದಾರೆ. ಪಾಡುರಂಗ ಅವರು ಕಳೆದ ಒಂದು ವರ್ಷದಿಂದ ಐಎಫ್​ಎಸ್​ನಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪಾಡುರಂಗ ಅವರು ಐದನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಪಾಂಡುರಂಗ ಕಂಬಳಿ ಅವರ ತಂದೆ ರೈತರಾಗಿದ್ದಾರೆ. ಮಗನ ಸಾಧನೆ ಹಿನ್ನೆಲೆ ಪಾಂಡುರಂಗ ಅವರ ಮನೆಯಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಕೋಲಾರದ ರೈತ ಮಗನ ಸಾಧನೆ

ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ರೈತ ಆನಂದ್ ಹಾಗೂ ಸುಶೀಲಮ್ಮ ದಂಪತಿ ಪುತ್ರ ಎ.ಮಧು ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ 544ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿಎಸ್​ಸಿ ಅಗ್ರಿಕಲ್ಚರ್​ನಲ್ಲಿ ಮಧು ಅವರು ಪದವಿ ಪಡೆದಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದವರು

ಆರ್.ರಂಗಮಂಜು – 24ನೇ ರ‍್ಯಾಂಕ್
ಸಚಿನ್ ಹರಿಹರ – 41
ಅನುಪ್ರಿಯಾ ಸಖ್ಯ – 120
ಬಿಎಂ ಮೇಘನಾ – 425
ಮಾಧವಿ ಆರ್ – 446
ಭರತ್ ಸಿ ಯಾರಂ – 567
ಭಾನುಪ್ರಕಾಶ್ – 523
ನಿಖಿಲ್ ಎಂಆರ್- 724
ಟಿ ವಿಜಯ್ ಕುಮಾರ್ – 894
ಹನುಮಂತಪ್ಪ ನಂದಿ – 910
ವಿಶಾಕ ಕದಂ – 962
ಸಂದೀಪ್ ಸಿಂಗ್ – 981
ಮೋಹನ್ ಪಾಟೀಲ್ – 984

ಈ ಸುದ್ದಿಯನ್ನೂ ಓದಿ | UPSC result: ಕೇಂದ್ರ ಲೋಕಸೇವಾ ಆಯೋಗ ಅಂತಿಮ ಫಲಿತಾಂಶ ಪ್ರಕಟ; ಶಕ್ತಿ ದುಬೆಗೆ ಫಸ್ಟ್‌ ರ‍್ಯಾಂಕ್‌

ಯುಪಿಎಸ್‌ಸಿ ಸಿಎಸ್‌ಇ ಫಲಿತಾಂಶ 2025 ಅನ್ನು ಹೇಗೆ ಪರಿಶೀಲಿಸುವುದು?

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: upsc.gov.in
  • 'ಅಂತಿಮ ಫಲಿತಾಂಶ - ನಾಗರಿಕ ಸೇವೆಗಳ ಪರೀಕ್ಷೆ, 2024' ಮೇಲೆ ಕ್ಲಿಕ್ ಮಾಡಿ
  • ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ
  • ಪಟ್ಟಿಯಲ್ಲಿ ನಿಮ್ಮ ರಿಜಿಸ್ಟರ್‌ ಸಂಖ್ಯೆಯನ್ನು ಹುಡುಕಿ
  • ಫಲಿತಾಂಶವನ್ನು ಸೇವ್‌ ಮಾಡಿ ಮುದ್ರಿಸಿ