ಮಣಿಪಾಲ: ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್-ಟು-ಬಿ-ಯುನಿವರ್ಸಿಟಿಯಾಗಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), 2025ರ ಶಾಂಘೈ ರಾಂಕಿಂಗ್ ಅಕಾಡೆಮಿಕ್ ರಾಂಕಿಂಗ್ ಆಫ್ ವರ್ಲ್ಡ್ ಯುನಿವರ್ಸಿಟೀಸ್ (ಎ ಆರ್ ಡಬ್ಲ್ಯೂ ಯು)ಯಲ್ಲಿ ತನ್ನ ಜಾಗತಿಕ ಶೈಕ್ಷಣಿಕ ಸ್ಥಾನಮಾನವನ್ನು ಮುಂದುವರಿಸಿಕೊಂಡು 801–900 ಬ್ಯಾಂಡ್‌ಗೆ ಏರಿಕೆಯಾಗಿದೆ.
ವಿಶ್ವದಾದ್ಯಂತ 2,500 ಕ್ಕೂ ಹೆಚ್ಚು ಸಂಸ್ಥೆಗಳಿಂದ ಮೌಲ್ಯಮಾಪನಗೊಂಡ ವಿಶ್ವವಿದ್ಯಾಲಯ ಗಳಲ್ಲಿ ಮಾಹೆ ಅಗ್ರ 1,000ರಲ್ಲಿ ಸ್ಥಾನ ಪಡೆದಿದೆ. ಈ ಸಾಧನೆ ಬಹಳಮಹತ್ವದ್ದಾಗಿದ್ದು ಯಾಕೆಂದರೆ ಎ ಆರ್ ಡಬ್ಲ್ಯೂ ಯು 2025ರಲ್ಲಿ ಕೇವಲ 15 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದು, ಯಾವುದೇ ಸಂಸ್ಥೆಗಳಿಗೆ ಸ್ವಯಂ ವರದಿ ಮಾಡಲು ಯಾವುದೇ ಅವಕಾಶ ಇರಲಿಲ್ಲ . ವೆಬ್ ಆಫ್ ಸೈನ್ಸ್ (2020–2024)ನ ವಸ್ತುನಿಷ್ಠ ಸಂಶೋಧನಾ ಡೇಟಾದ ಆಧಾರದ ಮೇಲೆ ಮಾಹೆ ಈ ಪ್ರತಿಷ್ಠಿತ ಮಾನ್ಯತೆ ಪಡೆದಿದೆ.
ಇದನ್ನೂ ಓದಿ: Udupi Sri Mandarthi Vaibhava: ಉಡುಪಿ ಶ್ರೀ ಮಂದಾರ್ತಿ ವೈಭವ ಹೋಟೆಲ್‌ನ 'ನಳಭೀಮ ಪಾಕಂ' ಸಿಹಿ ತಿಂಡಿ ಮಳಿಗೆಗೆ ಚಾಲನೆ
ಈ ಸಾಧನೆಯ ಕುರಿತು ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್ಎಂ ( ನಿವೃತ್ತ ) ಅವರು ಹೇಳಿದರು.
"ಶಾಂಘೈ ರಾಂಕಿಂಗ್ ನಮ್ಮ ಈ ಪ್ರಗತಿ ಸಂಶೋಧನಾ ಶ್ರೇಷ್ಠತೆಯತ್ತ ನಮ್ಮ ಬದ್ಧತೆ ಮತ್ತು ಶೈಕ್ಷಣಿಕ ಉತ್ಪಾದನೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಎ ಆರ್ ಡಬ್ಲ್ಯೂ ಯು ನಲ್ಲಿ ಸ್ಥಾನ ಪಡೆದಿರುವ ಕೇವಲ 15 ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ನಮ್ಮ ಸಂಶೋಧನಾ ಆಧಾರಿತ ಕಾರ್ಯವೈಖರಿಯನ್ನು ಸಮರ್ಥಿಸುತ್ತದೆ ಮತ್ತು ಮಾಹೆ ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಮುಖ್ಯ ಅಂಶಗಳು
ರಾಂಕ್ ಬ್ಯಾಂಡ್: 801–90
(2024ರಲ್ಲಿ ಇದ್ದ 901–1000ರಿಂದ ಏರಿಕೆ)
ಬಲವಾದ ಮಾನದಂಡಗಳು:
* ಪಿಯುಬಿ (ಸೈನ್ಸ್ ಸಿಟೇಶನ್ ಇಂಡೆಕ್ಸ್-ಎಕ್ಸ್‌ಪಾಂಡೆಡ್™ ಮತ್ತು ಸೋಶಿಯಲ್ ಸೈನ್ಸ್ ಸಿಟೇಶನ್ ಇಂಡೆಕ್ಸ್™ಗಳಲ್ಲಿ ಸೂಚಿಸಲಾದ ಪ್ರಕಟಣೆಗಳು): 32.6
* ಪಿಸಿಬಿ (ಪ್ರತಿ ವ್ಯಕ್ತಿಯ ಶೈಕ್ಷಣಿಕ ಸಾಧನೆ): 13.7
2024ರಲ್ಲಿ 901–1000 ಬ್ಯಾಂಡ್‌ನಿಂದ 2025ರಲ್ಲಿ 801–900 ಬ್ಯಾಂಡ್‌ಗೆ ಮಾಹೆ ಏರಿಕೆಯಾದುದು ಅದರ ಶೈಕ್ಷಣಿಕ ವಲಯದಲ್ಲಿರುವ ಬದ್ಧತೆಗೆ ಸಾಕ್ಷಿಯಾಗಿದ್ದು, ಅಂತರಾಷ್ಟ್ರೀಯ ಮಾನ್ಯತೆ ಮತ್ತು ಸಂಶೋಧನಾ ಉತ್ಪಾದನೆಯ ಹೆಚ್ಚಳವನ್ನು ತೋರಿಸುತ್ತದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದು ಇನ್ಸ್ಟಿಟ್ಯೂಷನ್ ಆಫ್ ಎಮಿನಾನ್ಸ್ ಸ್ಥಾನಮಾನ ಪಡೆದ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿದೆ.
ಹೆಲ್ತ್ ಸೈನ್ಸ್, ಮ್ಯಾನೇಜ್ಮೆಂಟ್ ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್, ಹಾಗೂ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ 400 ಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಮಾಹೆ ತನ್ನ ಅಂಗ ಸಂಸ್ಥೆಗಳ ಮೂಲಕ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೇದ್ ಪುರ ಹಾಗೂ ದುಬೈ ನ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.
ಶ್ರೇಷ್ಠ ಶೈಕ್ಷಣಿಕ ದಾಖಲಾತಿ, ಆಧುನಿಕ ಮೂಲಸೌಕರ್ಯ, ಮತ್ತು ಪ್ರಮುಖ ಸಂಶೋಧನಾ ಕೊಡುಗೆಗಳೊಂದಿಗೆ ಮಾಹೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಮತ್ತು ಗೌರವ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತದ ಶಿಕ್ಷಣ ಸಚಿವಾಲಯ ಮಾಹೆ ಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನನ್ಸ್ ಸ್ಥಾನಮಾನ ನೀಡಿತು.
ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್‌ಎಫ್) ನಲ್ಲಿ ಮಾಹೆ ನಾಲ್ಕನೇ ಸ್ಥಾನದಲ್ಲಿ ಇದೆ . ಬದಲಾವಣೆಯ ಶಿಕ್ಷಣ ಹಾಗೂ ಸಮೃದ್ಧ ಕ್ಯಾಂಪಸ್ ಜೀವನ ಕ್ಕಾಗಿ ವಿದ್ಯಾರ್ಥಿಗಳ ಅಗ್ರ ಆಯ್ಕೆ ಮಾಹೆ ಆಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಕಂಪನಿ ಗಳಿಗೂ ಶ್ರೇಷ್ಠ ಪ್ರತಿಭೆಗಳ ತಾಣವಾಗಿ ಮಾಹೆ ಗುರುತಿಸಲ್ಪಟ್ಟಿದೆ.